ವಸತಿ ಕಾಲೊನಿಯಲ್ಲಿ ಕೊಳಚೆ ನೀರು: ಸಾರ್ವಜನಿಕರ ದೂರು – ಶಾಸಕ ಪರಿಶೀಲನೆ

ಬಂಟ್ವಾಳ ಪುರಸಭಾ ವ್ಯಾಪ್ರಿಯ   ಮೊಡಂಕಾಪಿನ ವಸತಿ ಕಾಲೋನಿಯಲ್ಲಿ ಕೊಳಚೆ ನೀರು ಚರಂಡಿಯಲ್ಲಿ ಹರಿಯಬಿಡುತ್ತಿದ್ದು, ರೋಗಭೀತಿ ಅವರಿಸಿರವ ಹಿನ್ನಲೆಯಲ್ಲಿ ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗುರುವಾರ ಅಧಿಕಾರಿಗಳೊಂದಿಗೆ ಹಠಾತ್  ಸ್ಥಳಕ್ಕೆ  ಭೇಟಿ  ನೀಡಿ ಪರಿಶೀಲಿಸಿದರು.

ಮೊಡಂಕಾಪು,ಕಾರಂತಕೋಡಿ ಪರಿಸರದ ಮಳೆನೀರು ಹರಿಯುವ ಚರಂಡಿಯಲ್ಲಿ ಕೊಳೆಚೆ ನೀರು ಹರಿಯ ಬಿಟ್ಟರುವ ದೃಶ್ಯ ಕಂಡು ಹಾಗೂ ಪರಿಸರ ಗುಬ್ಬವಾಸನೆಯ ಬೀರುತ್ತಿರವುದರಿಂದ ಅಸಮಧಾನಗೊಂಡ ಶಾಸಕರು ಪುರಸಭೆಯ ಮುಖ್ಯಾಧಿಕಾರಿ ರೇಖಾ ಶೆಟ್ಟಿ,ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ  ಅವರಿಗೆ ಈ ಬಗ್ಗೆ ತಕ್ಷಣ ಕ್ರಮಕ್ಕೆ ಸೂಚಿಸಿದರು.

ಈ ಬಗ್ಗೆ ಸ್ತಳೀಯರು ಪುರಸಭೆ ಸಹಿತ ಸಂಬಂಧಿಸಿದ ಇಲಾಖೆಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಬುಧವಾರ ಸ್ಥಳಿಯರ ನಿಯೋಗವೊಂದು ಶಾಸಕ ರಾಜೇಶ್ ನಾಯ್ಕ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ರು.ಇದಕ್ಕೆ ಸ್ಪಂದಿಸಿದ ಶಾಸಕರು ಗುರುವಾರ ಬೆಳಿಗ್ಗೆ ಪರಿಸರಾಧಿಕಾರಿ ರಾಜಶೇಖರ್ ಪುರಾಣಿಕ್ , ಉಪಪರಿಸರಾಧಿಕಾರಿ ಕೀರ್ತಿ ಕುಮಾರ್, ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಕರ್ನಾಟಕ ನಗರ ನೀರು ಮತ್ತು ಒಳಚರಂಡಿಯೋಜನೆಯ ಎಂಜಿನಿಯರ್ ಶೋಭಾಲಕ್ಷ್ಮಿ ಯವರನ್ನೊಳಗೊಂಡು ಸ್ಥಳ ಪರಿಶೀಲನೆ ನಡೆಸಿದರು.

ವಸತಿ ಸಮುಚ್ಚಯದವರು ಅಲ್ಲಲ್ಲೇ ಇಂಗು ಗುಂಡಿ ನಿರ್ಮಿಸಿ ವ್ಯವಸ್ಥೆ ಕಲ್ಪಿಸಿದ ಮೇಲೆಯೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು, ಬೇಕಾಬಿಟ್ಟಿ ಅನುಮತಿ ನೀಡಿರುವುದರಿಂದ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ನೀರು ಹರಿಯಬಿಡುವುದನ್ನು ಬಂದ್ ಮಾಡುವಂತೆ ಸೂಚಿಸಿದರು.  ಈ ವ್ಯವಸ್ಥೆಯನ್ನು ಕಂಡು   ಪರಿಸರಾಧಿಕಾರಿ ಪುರಾಣಿಕ್ ಅವರಝೂ ಅಸಮಾಧಾನ ವ್ಯಕ್ತಪಡಿಸಿದರು. ಪುರಸಭಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಶಾಸಕರು ಈ ಸಂದರ್ಭ ಮುಖ್ಯಾಧಿಕಾರಿಯವರಿಗೆ ಸೂಚಿಸಿದರು.

ಅಂತಿಮ ನೋಟೀಸ್:

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಈಗಾಗಲೇ ಇಲ್ಲಿನ ಆರು ಮಂದಿ ಕಟ್ಟಡ ಮಾಲೀಕರಿಗೆ ಡಿ. 12 ರವರೆಗೆ ಗಡುವು ವಿಧಿಸಿ ಅಂತಿಮ ನೊಟೀಸ್ ಜಾರಿಮಾಡಲಾಗಿದೆ. ಆ ದಿನದೊಳಗೆ‌ ಕ್ರಮ ಕೈಗೊಳ್ಳದಿದ್ದರೆ ಪೊಲೀಸರ ಸಹಕಾರ ಪಡೆದು ಪುರಸಭೆಯಿಂದಲೇ ಅದನ್ನು ಮುಚ್ಚುವ ಕಾರ್ಯ ಮಾಡಲಿದೆ ಎಂದರು.

ಇದೇ ವೇಳೆ ಇಂದಿರಾ ಕ್ಯಾಂಟೀನ್ ನ ಕೊಳಚೆ ನೀರನ್ನು ಪೈಪ್ ಅಳವಡಿಸಿ ರಾಷ್ಟ್ರೀಯ ಹೆದ್ದಾರಿ ಚರಂಡಿಗೆ ಹರಿಯಬಿಟ್ಟಿರುವ ಪುರಸಭೆಯ ಕ್ರಮದ ಬಗ್ಗೆಯು  ಶಾಸಕ ರಾಜೇಶ್ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭಾ ಸದಸ್ಯ ಲೋಲಾಕ್ಷ, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುದರ್ಶನ್ ಬಜ, ಮಾಜಿ ಪುರಸಭಾ ಸದಸ್ಯ ಜನಾರ್ದನ ಬೊಂಡಾಲ, ಸ್ಥಳೀಯರಾದ ನಿವೃತ್ತ ಉಪನ್ಯಾಸಕ ರಾಜಮಣಿ ರಾಮಕುಂಜ, ಸತೀಶ್ ಶೆಟ್ಟಿ ಮೊಡಂಕಾಪು, ಬೋಜ ಸಾಲಿಯಾನ್,  ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಸುರೇಶ್ ಟೈಲರ್, ಪುರುಷೋತ್ತಮ ಮಯ್ಯ, ಗಣೇಶ್ ಕಾರಂತ, ಸುಧೀರ್ ಮೊಡಂಕಾಪು, ಸತೀಶ್ ಜೈನ್, ವಿಶ್ವನಾಥ ಪೂಜಾರಿ, ರಮೇಶ್,  ವೀಣಾ ಡಿಸೋಜ,ಭಾರತಿ ಹಾಗೂ ಸ್ಥಳೀಯ ಮಹಿಳೆಯರು ಉಪಸ್ಥಿತರಿದ್ದು, ಶಾಸಕರ ಮುಂದೆ ಅಹವಾಲು ಮಂಡಿಸಿದರು.

ನೀರು ಹರಿದು ಜನರಿಗಾಗುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಾಸಕರು  ಮಂಗಳೂರು ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಅವರ ಉಪಸ್ಥತಿಯಲ್ಲಿ ತಮ್ಮ ಕಾರ್ಯಾಲಯದಲ್ಲೇ ಪರಿಸರಾಧಿಕಾರಿ, ಮುಖ್ಯಾಧಿಕಾರಿ, ಇಂಜಿನಿಯರ್ ಕೆಯುಡಬ್ಲ್ಯ ಎಸ್ ಅಧಿಕಾರಿ ಅವರನ್ನೊಳಗೊಂಡ ತುರ್ತು ಸಭೆ ನಡೆಸಿದರು.

ವಸತಿ ಸಮುಚ್ಚಯಗಳು ಅವರೇ ಕೊಳಚೆ ನೀರು ಇಂಗಿಸಲು ಮತ್ತು ಸಾಗಿಸಲು ಅವರೇ ವ್ಯವಸ್ಥೆ ಮಾಡಿಕೊಳ್ಳುವುದು,ಪ್ರತ್ಯೇಕ ಮನೆಗಳಿರುವಲ್ಲಿ ಪುರಸಭೆಯಿಂದ ಜಾಗ ಗುರುತಿಸಿ ಆಧುನೀಕ ರೀತಿಯಲ್ಲಿ ಇಂಗುಗುಂಡಿ ನಿರ್ಮಿಸಲು ಸೂಚಿಸಲಾಯಿತು.

ಸಮಗ್ರ ಒಳಚರಂಡಿ ಯೋಜನೆಯ ಕುರಿತ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಸೂಚಿಸಿದರು.ಹಾಗೆಯೇ ಕೇಂದ್ರ ಸರಕಾರದ ಅಮೃತ ಯೋಜನೆಯಲ್ಲಿ ಬಂಟ್ವಾಳವನ್ನು ಸೇರಿಸುವ ನಿಟ್ಟಿನಲ್ಲಿ ಪೂರಕ ಮಾಹಿತಿ,ದಾಖಲೆಯನ್ನು ಒದಗಿಸುವಂತೆ ಮುಖ್ಯಾಧಿಕಾರಿಯವರಿಗೆ ಸೂಚಿಸಿದರು.

Be the first to comment on "ವಸತಿ ಕಾಲೊನಿಯಲ್ಲಿ ಕೊಳಚೆ ನೀರು: ಸಾರ್ವಜನಿಕರ ದೂರು – ಶಾಸಕ ಪರಿಶೀಲನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*