ಆಟಿ ಆಷಾಢವಲ್ಲ

ಬರೆಹ : ಕೆ.ಎಲ್.ಕುಂಡಂತಾಯ.


‘ಆಟಿ’ ಆಷಾಢವಲ್ಲ ; ‘ಆಷಾಢ’ಆಟಿಯಲ್ಲ. ಆದರೆ ಈ ನಿಷ್ಕರ್ಷೆ ಯಲ್ಲಿ ಗೊಂದಲ ಏಕೆಂದೇ ಅರ್ಥವಾಗುತ್ತಿಲ್ಲ.
ಆಟಿ ಎಂಬ ತಿಂಗಳನ್ನು ಸಂಸ್ಕೃತದಲ್ಲಿ ಆಷಾಢ ವೆಂದು ಹೆಸರಿಸಲಾಗುತ್ತದೆ ಎಂಬ ತಪ್ಪು ಗ್ರಹಿಕೆಯಿಂದ ಆಟಿ ತಿಂಗಳನ್ನು ಆಷಾಢವೆಂದುತಿಳಿಯಲಾಗುತ್ತಿರಬೇಕು.
“ಇದು ಸಂಸ್ಕೃತಾನುಕರಣೆಯ ಪರಿಣಾಮವಿರಬಹುದು.”
“ಸಂಸ್ಕೃತಾನುಕರಣೆ :ಸಂಸ್ಕೃತಿ ಅನುಕರಣ”

ಸಾಂದರ್ಭಿಕ ಚಿತ್ರವಿದು. (ಆಟಿ ಅಮಾವಾಸ್ಯೆ ತೀರ್ಥಸ್ನಾನಕ್ಕೆ ಸಾಲುಗಟ್ಟಿ ನಿಂತ ಜನರು)

ಈಕಾಲದಲ್ಲಿ ಸಹಜವಾಗಿದೆ.ಒಂದು ಫ್ಯಾಷನ್
ಕೂಡಾ ಆಗಿದೆ.ಸಂಸ್ಕೃತ ಶಬ್ದಗಳ ಬಳಕೆ ಆಚರಣೆಗೆ- ವಿಧಿಯಾಚರಣೆಗೆ ಘನತೆ – ಗಾಂಭೀರ್ಯಒದಗಿಸುತ್ತದೆಎಂದು
ತಿಳಿಯಲಾಗುತ್ತಿದೆ.
ಮಾತಿನಲ್ಲಿ ಸಂಸ್ಕೃತ ಶಬ್ದ, ಸಂಸ್ಕೃತ ಶ್ಲೋಕ ಪ್ರಯೋಗಿಸಿದರೆ ವಿದ್ವಾಂಸ ಎಂದು ಗುರುತಿಸಲಾಗುತ್ತದೆ ಎಂಬ ಭ್ರಮೆಇದ್ದಂತಿದೆ.
“ಸಂಸ್ಕೃತ – ಸಂಸ್ಕೃತಿ ಅನುಕರಣೆ ಖಂಡಿತ ತಪ್ಪಲ್ಲ “, ಆದರೆ ತುಳು ಮನಸ್ಸುಗಳು(ಜನಪದ ಮನಸ್ಸು) ನೇರ್ಪು ಗೊಳಿಸಿರುವ ತುಳುವರ ಆಚರಣೆ – ಭೂತ ಅಥವಾ ದೈವಾರಾಧನೆಗಳಲ್ಲಿ ಸಂಸ್ಕೃತದ ಪ್ರಭಾವ ಹೆಚ್ಚುತ್ತಿರುವುದನ್ನು ಕಾಣುತ್ತಿಲ್ಲವೆ ?
ಇಂತಹದ್ದೇ ಇನ್ನೊಂದು ,” ಆಟಿ – ಆಷಾಢ”
ಗೊಂದಲ.
ಹಾಗಿದ್ದರೆ ಏನಿದು ?
ತುಳುವರಾದ ನಾವು ಸೌರಮಾನಿಗಳು.
‘ಆಟಿ’ಸೌರ ಪದ್ದತಿಯ ೧೨ ತಿಂಗಳಗಳಲ್ಲಿ
ನಾಲ್ಕನೇ ಯದು.ಇದೇ ಕರ್ಕಾಟಕಮಾಸ.
‘ಆಷಾಢ’ ಚಾಂದ್ರಮಾನ ಪದ್ದತಿಯ ನಾಲ್ಕನೇ
ತಿಂಗಳು.
ಸೌರ ತಿಂಗಳುಗಳು : ಪಗ್ಗು(ಮೇಷ) ,ಬೇಶ(ವೃಷಭ),ಕಾರ್ತೆಲ್(ಮಿಥುನ),ಆಟಿ(ಕರ್ನಾಟಕ) ,ಸೋಣ(ಸಿಂಹ),
ಕನ್ಯ – ನಿರ್ನಾಲ್ (ಕನ್ಯಾ),ಬೊಂತೆಲ್(ತುಲಾ),ಜಾಗರ್ದೆ(ವೃಶ್ಚಿಕ),ಪೆರಾರ್ದೆ(ಧನು),ಪುಯಿಂತೆಲ್(ಮಕರ),ಮಾಯಿ(ಕುಂಭ) , ಸುಗ್ಗಿ (ಮೀನ).
ಸೌರಮಾನ ತಿಂಗಳು (ವರ್ಷ) ಪಗ್ಗು ತಿಂಗಳ
” ತಿಂಗೊಡೆ” ಯಿಂದ ಪ್ರಾರಂಭ.ಅಂದೇ ನಮ್ಮ ವಿಶು – ಬಿಸು (ಸೌರ ಯುಗಾದಿ).
ಚಾಂದ್ರ ತಿಂಗಳುಗಳು:
ಚೈತ್ರ ,ವೈಶಾಖ , ಜ್ಯೇಷ್ಠ , ಆಷಾಢ , ಶ್ರಾವಣ , ಭಾದ್ರಪದ ,ಆಶ್ವಯುಜ ,ಕಾರ್ತಿಕ ,
ಮಾರ್ಗಶಿರ , ಪೌಷ , ಮಾಘ , ಪಾಲ್ಗಣ.
ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ಚಾಂದ್ರ ವರ್ಷಾರಂಭವಾಗುತ್ತದೆ.ಅಂದೇ ಚಾಂದ್ರಯುಗಾದಿ.
ಬಹುತೇಕ ಆಷಾಢ ಮಾಸ ಮೊದಲು ಸನ್ನಿಹಿತವಾಗುತ್ತದೆ._
‌ಈವರ್ಷ ಆಷಾಢ ತಿಂಗಳು ಜೂನ್ 25 ರಿಂದ ಆರಂಭವಾಗಿ ಜುಲೈ23ಕ್ಕೆಮುಕ್ತಾಯವಾಗಿದೆ.
ಜುಲೈ24 ರಿಂದ ಶ್ರಾವಣ ಆರಂಭವಾಗಿದೆ.
ಈವರ್ಸ “ಆಟಿದ ಸಂಕ್ರಾಂದಿ”ಜುಲೈ16ಕ್ಕ್
ಬೈದ್ಂಡ್.ಜುಲೈ 17ದಾನಿ ಆಟಿ ಸುರು ಆತ್ಂಡ್. ಆಗಸ್ಟ್‌16ಕ್ಕ್ ಆಟಿ ಮುಗ್ಯುನು(ಸೋಣ ಸಂಕ್ರಂದಿ).ಆಗಸ್ಟ್17ಕ್ಕ್
ಸೋಣ ಸುರು ಆಪುಂಡು.
ಆಟಿ ಸೌರ ತಿಂಗಳು.
ಆಷಾಢ ಚಾಂದ್ರತಿಂಗಳು.
ಇವು ಬೇರೆ ಬೇರೆಯೇ ಹೊರತು ಒಂದೇಅಲ್ಲ.
ಈಗ ಖಂಡಿತ ಆಷಾಢ ಇಲ್ಲ.
ಆಷಾಢ ಜುಲೈ23ಕ್ಕೆ ಮುಗಿದಿದೆ . ಆದರೆ ಜುಲೈ 30 ಕ್ಕೆ ” ಆಷಾಢದ ಮಾರಿಪೂಜೆ ”
ನಡೆಯಲಿದೆ ಎಂಬ ಪತ್ರಿಕಾ ವರದಿ
ನೋಡಿದೆ . “ಆಷಾಢದಲ್ಲಿ ಒಂದು ದಿನ” ನಡೆಯುತ್ತಿದೆ.
ತುಳುವರ(ಸೌರ ಮಾನಿಗಳು) ಆಟಿಯನ್ನು
ಆಷಾಢ ಎಂದು ತಿಳಿಯ ಬಾರದು. ತಪ್ಪು ತಳಿವಳಿಕೆಗೆ ಅವಕಾಶವಾಗದಿರಲೆಂದು ಮಾತ್ರ ಈ ಬರೆಹ .ಯಾರ ಚಿಂತನೆ ,ಸ್ವೀಕಾರ ,
ಒಪ್ಪಿಗೆಗಳನ್ನು ಪ್ರಶ್ನಿಸುವುದಾಗಲಿ, ಆಕ್ಷೇಪಿಸುವುದಾಗಲಿ ಬರೆಹದ ಉದ್ದೇಶವಲ್ಲ.
ವಾಸ್ತವವನ್ನು ವಿವರಿಸಿದ್ದೇನೆ.
” ಆಟಿ ” ಆಷಾಢವಲ್ಲ.

(ಲೇಖಕರು – ಜಾನಪದ ವಿದ್ವಾಂಸರು ಹಾಗೂ ಪತ್ರಕರ್ತರು. ಇಲ್ಲಿ ವ್ಯಕ್ತವಾದ ಅಭಿಪ್ರಾಯ ಲೇಖಕರದ್ದು. )

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದಾರಾರರಾಗಬೇಕೇ ?ಇಲ್ಲಿ ಕ್ಲಿಕ್ ಮಾಡಿ. ಈಗಾಗಲೇ ನೀವು ಚಂದಾದಾರರಾಗಿದ್ದರೆ ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ. ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ.
Be the first to comment on "ಆಟಿ ಆಷಾಢವಲ್ಲ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*