ಭಾನುವಾರ ಬೆಳಗ್ಗೆ ಉಜಿರೆ ಸಮೀಪ ಗುರಿಪಳ್ಳ ಕ್ರಾಸ್ ಅಳಪೆ ರಸ್ತೆ ಬಳಿ ಯುವಕನೊಬ್ಬನ ಶವ ಪತ್ತೆಯಾಗಿದೆ. ಮುಖಕ್ಕೆ ಟೇಪ್ ಸುತ್ತಿ, ಕಾಲು ಕಟ್ಟಿದ ರೀತಿಯಲ್ಲಿ ಶವ ಕಂಡುಬಂದಿದ್ದು, ಯುವಕನನ್ನು ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಇದುವರೆಗೂ ಯುವಕ ಯಾರು ಎಂದು ಗೊತ್ತಾಗಿಲ್ಲ. ಈತನ ಪ್ರಾಯ ಸುಮಾರು 29 ಆಗಿರಬಹುದು ಎಂದು ಶಂಕಿಸಲಾಗಿದ್ದು, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್, ಎಸ್.ಐ. ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಗುರಿಪಳ್ಳದಲ್ಲಿ ಶವ ಪತ್ತೆ, ಕೊಲೆ ಶಂಕೆ"