ಅಲ್ಲಿಪಾದೆ ಚರ್ಚ್: ವಿಜೃಂಭಣೆಯ ತೆನೆ ಹಬ್ಬ ಆಚರಣೆ

ಬಂಟ್ವಾಳ: ಬಂಟ್ವಾಳ ತಾ. ಅಲ್ಲಿಪಾದೆ ಸಂತ ಅಂತೋನಿ ಚರ್ಚ್ನಲ್ಲಿ ರವಿವಾರ ತೆನೆ ಹಬ್ಬವನ್ನು  ವಿಜೃಂಭಣೆಯಿಂದ ಆಚರಿಸಲಾಯಿತು.ಅಲ್ಲಿಪಾದೆ ಚರ್ಚ್ ಧರ್ಮಗುರು ವಂ| ಫಾ| ಫ್ರೆಡ್ರಿಕ್ ಮೊಂತೆರೋ ಅವರ ನೇತೃತ್ವದಲ್ಲಿ  ಭಕ್ತರು ಬಲಿ ಪೂಜೆ ಅರ್ಪಿಸಿದರು. ಕಂಕನಾಡಿ ಫಾದರ್ ಮುಲ್ಲರ್ಸ್ ಮೆಡಿಕಲ್  ಕಾಲೇಜು ಆಡಳಿತಾಧಿಕಾರಿ ಫಾ. ಅಜಿತ್ ಮಿನೇಜಸ್ಅವರು ಆಶೀರ್ವಚನ ನೀಡಿದರು. ಸಂದರ್ಭದಲ್ಲಿ ಚರ್ಚ್ ಪಾಲನ ಮಂಡಳಿ ಸಮಿತಿ, ವೈ.ಸಿ.ಎಸ್., ಮತ್ತು .ಸಿ.ವೈ.ಯಂ. ವತಿಯಿಂದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದರು.

ಚರ್ಚ್ನಿಂದ ಅಲ್ಲಿಪಾದೆಯ ಪೇಟೆಯಲ್ಲಿ ಮಾತೆ ಮರಿಯಮ್ಮ ಅವರ ಮೂರ್ತಿಯನ್ನು ಪುಷ್ಪಾರ್ಚನೆಯೊಂದಿಗೆ ಮೆರವಣಿಗೆ ನಡೆಸಲಾಯಿತುಬಲಿಪೂಜೆಯ ಬಳಿಕ ಪರಿಸರ ಸಾರ್ವಜನಿಕರ ಸಹಿತ ಕ್ರೈಸ್ತ ಬಾಂಧವರಿಗೆ ಕಬ್ಬು ಮತ್ತು ತೆನೆಯನ್ನು ವಿತರಿಸಲಾಯಿತು. ಸಂದರ್ಭದಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಲಿಯೋ ಫೆರ್ನಾಂಡಿಸ್, ಕಾರ್ಯದರ್ಶಿ ಮಡ್ತಿನಿ ಸಿಕ್ವೇರ, ಕ್ಲೂನಿ ಕಾನ್ವೆಂಟ್ ಧರ್ಮ ಭಗಿನಿಯರು, ವೈ.ಸಿ.ಎಸ್., ಮತ್ತು .ಸಿ.ವೈ.ಯಂ. ಸದಸ್ಯರು ಉಪಸ್ಥಿತರಿದ್ದರು.

 

 

Be the first to comment on "ಅಲ್ಲಿಪಾದೆ ಚರ್ಚ್: ವಿಜೃಂಭಣೆಯ ತೆನೆ ಹಬ್ಬ ಆಚರಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*