ಕಸ ಸಂಗ್ರಹಣ ಶುಲ್ಕ ಕೈಬಿಡಿ: ಕಾಂಗ್ರೆಸ್ ನಿಯೋಗದಿಂದ ಮನವಿ

ತೆರಿಗೆಯ ಜೊತೆಗೆ ಕಸ ಸಂಗ್ರಹಣೆಗೆ ಅಡ್ವಾನ್ಸ್ ಶುಲ್ಕ ಸಂಗ್ರಹಿಸುವುದನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದ ನಿಯೋಗ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮೂಲಕ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿತು.

ಪುರಸಭೆಯ ಈ ಕ್ರಮದಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಸ ಸಂಗ್ರಹಣೆಯ ಸೇವೆಯನ್ನು ಬಳಸದಿರುವ ನಗರವಾಸಿಗಳಿಗೂ ತೆರಿಗೆಯ ಜೊತೆ ಕಸ ಸಂಗ್ರಹಣೆಯ ಶುಲ್ಕ ಪಾವತಿಸಲು ಒತ್ತಡ ಹೇರುವುದು ಸರಿಯಲ್ಲ ಹಾಗಾಗಿ ಈ ಕ್ರಮವನ್ನು ತಕ್ಷಣ ನಿಲ್ಲಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭ  ಮಾಜಿ ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ, ಬಿ.ವಾಸು ಪೂಜಾರಿ, ಮಹಮ್ಮದ್ ಶರೀಫ್, ಗಂಗಾಧರ ಪೂಜಾರಿ, ಲೋಲಾಕ್ಷ ಶೆಟ್ಟಿ. ಮಹಮದ್ ನಂದರಬೆಟ್ಟು, ಜನಾರ್ಧನ ಚಂಡ್ತಿಮಾರ್, ಜಯಂತಿ ಮಣಿ, ಗಾಯತ್ರಿ ಪ್ರಕಾಶ್, ಜೆಸಿಂತಾ, ಸಿದ್ದಿಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಪಂ ಸದಸ್ಯ ಪದ್ಮಶೇಖರ್ ಜೈನ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ. ಮಲ್ಲಿಕಾ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪಕ್ಷದ ಮುಖಂಡರಾದ ಮಾಯಿಲಪ್ಪ ಸಾಲಿಯಾನ್. ವಸಂತಿ ಚಂದಪ್ಪ, ಜಗದೀಶ್ ಭಂಡಾರಿಬೆಟ್ಟು, ಲೋಕೇಶ ಸುವರ್ಣ, ಜಯಂತಿ ಪೂಜಾರಿ, ಮಲ್ಲಿಕಾ ಪಕ್ಕಳ, ವೆಂಕಪ್ಪ ಪೂಜಾರಿ ಬಂಟ್ವಾಳ ಮೊದಲಾದವರಿದ್ದರು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದಾರಾರರಾಗಬೇಕೇ ?ಇಲ್ಲಿ ಕ್ಲಿಕ್ ಮಾಡಿ. ಈಗಾಗಲೇ ನೀವು ಚಂದಾದಾರರಾಗಿದ್ದರೆ ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ. ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ.
1 Comment on "ಕಸ ಸಂಗ್ರಹಣ ಶುಲ್ಕ ಕೈಬಿಡಿ: ಕಾಂಗ್ರೆಸ್ ನಿಯೋಗದಿಂದ ಮನವಿ"

  1. Avatar Threshold.bangera | July 31, 2019 at 6:22 pm | Reply

    What action is taken further for wastage collection.there is no proper collection box or pickup or throw wastages dustbins.in grama panchayat areas they had put don’t throw wastage here.but pls provide proper dustbins or collection van.so that no one will throw wastages in road.if this facility is provided we can pay to municipality or grama panchayat.

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*