ಪರಿಣಾಮಕಾರಿ ಭಾಷಣಕ್ಕೆ ಆತ್ಮವಿಶ್ವಾಸ ಅಗತ್ಯ: ಡಾ. ಎಸ್.ಆರ್.ನಾಯಕ್

ಟೋಸ್ಟ್ ಮಾಸ್ಟರ್ ಇಂಟರ್ ನ್ಯಾಶನಲ್ ನ ಬಂಟ್ವಾಳ ಸ್ಪೀಚ್ ವೀವರ್ಸ್ ಕ್ಲಬ್ ಅನ್ನು ಮಂಗಳೂರು ಕೆಎಂಸಿಯ ಹಿರಿಯ ವೈದ್ಯ ಡಾ. ಎಸ್.ಆರ್. ನಾಯಕ್ ಬಂಟ್ವಾಳ ರೋಟರಿ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಸಮಾರಂಭದಲ್ಲಿ ಉದ್ಘಾಟಿಸಿದರು.

ಜಾಹೀರಾತು

ಈ ಸಂದರ್ಭ ಮಾತನಾಡಿದ ಅವರು, ಸ್ಪೀಚ್ ವೀವರ್ಸ್ ಕ್ಲಬ್ ಪರಿಣಾಮಕಾರಿ ಭಾಷಣ ಕಲೆಯನ್ನು ಕರಗತಮಾಡಿಸಲು ಸಹಾಯ ಮಾಡುತ್ತದೆ. ಇನ್ನೊಬ್ಬರ ಮೆಚ್ಚಿಸಲು ಭಾಷಣ ಮಾಡಲು ಹೊರಡಬೇಡಿ. ಮಾತನಾಡುವ ಸಂದರ್ಭ ಏನು ಮಾಡುತ್ತೇವೆ ಎಂಬುದು ಗೊತ್ತಿರಬೇಕು. ನೀವು ಯಾರದ್ದೊ ಮಾತುಗಳನ್ನು ಹೇಳಬೇಡಿ. ಪರಿಣಾಮಕಾರಿ ಭಾಷಣ ಮಾಡುವುದು ಒಂದು ಕಲೆ. ಆದರೆ ಆತ್ಮವಿಶ್ವಾಸ ಇರಲಿ, ಬಳಸುವ ಶಬ್ದಗಳು ಸರಳವಾಗಲಿ ಎಂದು ಸಲಹೆ ನೀಡಿದರು.

ಅಧ್ಯಕ್ಷೆಯಾಗಿ ಪದಗ್ರಹಣ ಸ್ವೀಕರಿಸಿದ ಡಾ.ಶಶಿಕಲಾ ಸೋಮಯಾಜಿ ಮಾತನಾಡಿ, , ಬಂಟ್ವಾಳ ಸ್ಪೀಚ್ ವೀವರ್ಸ ಮತ್ತು ಟೋಸ್ಟ್ ಮಾಸ್ಟರ್ಸ್ ಕ್ಲಬ್ ಪ್ರತಿಭಾನ್ವಿತರ ತಂಡದ ಮೂಲಕ ಕ್ಲಬ್ ಉದ್ದೇಶಗಳನ್ನು ಈಡೇರಿಸಲಿದೆ ಎಂದರು.

ಈ ಸಂದರ್ಭ ವೇದಿಕೆಯಲ್ಲಿದ್ದ ಕ್ಲಬ್ ನ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಮಾಲಿನಿ ಹೆಬ್ಬಾರ್, ಡಾ. ಒಲಿವರ್ ಡಿಸೋಜ, ವಿಭಾಗೀಯ ನಿರ್ದೇಶಕಿ ಶಿವಾನಿ ಬಾಳಿಗಾ, ಸವಿತಾ ಸಾಲಿಯಾನ್ ಶುಭ ಹಾರೈಸಿದರು.  ಪ್ರತಿಭಾ ರೈ ಪ್ರಾರ್ಥಿಸಿದರು. ರಶ್ಮಾ ಆಳ್ವ ಸ್ವಾಗತಿಸಿದರು. ಕ್ಲಬ್ ನ ವಿವಿಧ ಪದಾಧಿಕಾರಿಗಳಾದ ರಿತೇಶ್ ಬಾಳಿಗ, ಪ್ರಕಾಶ್ ಬಾಳಿಗಾ, ಅಹ್ಮದ್ ಮುಸ್ತಾಫಾ, ವಾಣಿ ಕಾರಂತ, ಡಾ. ಭಾರತಿ ಶೆಟ್ಟಿ ಅವರಿಗೆ ಜವಾಬ್ದಾರಿ ಹಂಚಲಾಯಿತು. ಡಾ. ರಮೇಶಾನಂದ ಸೋಮಯಾಜಿ ಮತ್ತುವಿವಿಧ ಘಟಕಗಳ ಪ್ರಮುಖರು ಅನಿಸಿಕೆ ವ್ಯಕ್ತಪಡಿಸಿದರು. ಪ್ರಕಾಶ್ ಬಾಳಿಗಾ ವಂದಿಸಿದರು, ಅಹ್ಮದ್ ಮುಸ್ತಾಫಾ ಮತ್ತು ಸ್ಮಿತಾ ಸಲ್ದಾನಾ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಪರಿಣಾಮಕಾರಿ ಭಾಷಣಕ್ಕೆ ಆತ್ಮವಿಶ್ವಾಸ ಅಗತ್ಯ: ಡಾ. ಎಸ್.ಆರ್.ನಾಯಕ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*