ನಳಿನ್ ಕುಮಾರ್ ಕಟೀಲ್ ಗೆಲುವು, ಬಿಜೆಪಿಯಲ್ಲಿ ಸಂಭ್ರಮೋತ್ಸವ

ಫೈನಲ್ ಲೆಕ್ಕ: 2,74,621 ಅಂತರದಲ್ಲಿ ಜಯ ಸಾಧಿಸಿದ ನಳಿನ್

ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಇವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೂ ಹಾಗೂ ಚುನಾವಣಾಧಿಕಾರಿಗಳೂ ಆದ ಸಸಿಕಾಂತ್ ಸೆಂಥಿಲ್ ಇವರು ಇಂದು ಅಧಿಕೃತವಾಗಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಎಂದು ಘೋಷಿಸಿ ಪ್ರಮಾಣಪತ್ರ ನೀಡಿದರು. ಈ ಸಂದರ್ಭ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪೋಸ್ಟಲ್ ಮತಗಳಲ್ಲೂ ನಳಿನ್ ಮುನ್ನಡೆ: 

ಪೋಸ್ಟಲ್ ಮತಗಳಲ್ಲೂ ನಳಿನ್ ಕುಮಾರ್ ಕಟೀಲ್ ಮುನ್ನಡೆ ಸಾಧಿಸಿದ್ದಾರೆ. 1531 ಮತಗಳು ನಳಿನ್ ಅವರಿಗೆ ಬಂದರೆ, ಮಿಥುನ್ ರೈ 277 ಮತಗಳನ್ನು ಪಡೆದರು.

ಅಂತಿಮ ಲೆಕ್ಕ ಹೀಗಿದೆ.

 • ನಳಿನ್ ಕುಮಾರ್ ಕಟೀಲ್ (ಬಿಜೆಪಿ)- 774285
 • ಮಿಥುನ್ ಎಂ.ರೈ (ಕಾಂಗ್ರೆಸ್)- 499664
 • ಎಸ್.ಸತೀಶ್ ಸಾಲ್ಯಾನ್ (ಬಿಎಸ್ಪಿ) 4713
 • ಮೊಹಮ್ಮದ್ ಇಲ್ಯಾಸ್ (ಎಸ್ಡಿಪಿಐ) – 46839
 • ವಿಜಯ ಶ್ರೀನಿವಾಸ್ (ಯುಪಿಜೆಪಿ) – 1629
 • ಸುಪ್ರೀತ್ ಪೂಜಾರಿ (ಎಚ್.ಜೆಪಿ) 948
 • ಅಬ್ದುಲ್ ಹಮೀದ್ (ಪಕ್ಷೇತರ) 554
 • ಅಲೆಕ್ಸಾಂಡರ್ (ಪಕ್ಷೇತರ) 2752
 • ದೀಪಕ್ ಕೊಹೆಲ್ಲೊ (ಪಕ್ಷೇತರ) 748
 • ಮೊಹಮ್ಮದ್ ಖಾಲಿದ್ (ಪಕ್ಷೇತರ) 602
 • ಮ್ಯಾಕ್ಸಿಂ ಪಿಂಟೊ (ಪಕ್ಷೇತರ) 908
 • ವೆಂಕಟೇಶ ಬೆಂಡೆ (ಪಕ್ಷೇತರ) 1702
 • ಎಚ್.ಸುರೇಶ್ ಪೂಜಾರಿ (ಪಕ್ಷೇತರ) 2315
 • ನೋಟಾ  – 7380

 

Be the first to comment on "ನಳಿನ್ ಕುಮಾರ್ ಕಟೀಲ್ ಗೆಲುವು, ಬಿಜೆಪಿಯಲ್ಲಿ ಸಂಭ್ರಮೋತ್ಸವ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*