ಸಚಿನ್ ತೆಂಡುಲ್ಕರ್ ದಾಖಲೆ ಮುರಿದದ್ದು ಯಾರು ಗೊತ್ತೇ, ಏನಿದು ವಿಶೇಷ?

ಸುದ್ದಿ ಸ್ವಾರಸ್ಯ

ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಏನು ಮಾಡಿದರೂ ಸುದ್ದಿಯೇ. ಅವರು ಇಂದು ಇನ್ಸಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ವಿಚಾರವಿದು. ಇಲ್ಲಿದೆ ಓದಿ.

ಇದು ಮೊದಲ ಬಾರಿ!! ನಿಮಗೆ ಇದು ಗೊತ್ತಿಲ್ಲದೇ ಇರಬಹುದು. ಆದರೆ ನಾನು ಇದುವರೆಗೂ ಇನ್ನೊಬ್ಬರ ಕೈಯಿಂದ ಶೇವ್ ಮಾಡಿಸಿಕೊಂಡಿಲ್ಲ. ಆ ದಾಖಲೆ ಇಂದು ಮುರಿಯಲಾಗಿದೆ. ಇಂದು ಬಾರ್ಬರ್ ಶಾಪ್ ಹುಡುಗಿಯರನ್ನು ಭೇಟಿಯಾಗುವ ಸದವಕಾಶ ದೊರಕಿದೆ. ಅವರಿಗೆ ಜಿಲೆಟ್ ಇಂಡಿಯಾ ಸ್ಕಾಲರ್ ಶಿಪ್ ಕೊಡುವ ಅವಕಾಶ ಒದಗಿಬಂತು

ಹೀಗೆಂದು ಸಚಿನ್ ಬರೆದುಕೊಂಡಿದ್ದಾರೆ.

ಉತ್ತರಪ್ರದೇಶ ರಾಜ್ಯದ ಬನ್ವಾರಿ ಟೋಲಾ ಗ್ರಾಮದ ನೇಹಾ ಮತ್ತು ಜ್ಯೋತಿ ಸಹೋದರಿಯರ ತಂದೆ 2014ರಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ಗರು. ಆಗ ಅವರು ತಂದೆ ನಡೆಸುತ್ತಿದ್ದ ಸೆಲೂನ್ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಈ ಸಹೋದರಿಯರ ಶಿಕ್ಷಣ ಮತ್ತಯು ವೃತ್ತಿಗೆ ಸಚಿನ್ ಜಿಲೆಟ್ ಸ್ಕಾಲರ್ ಶಿಪ್ ಪ್ರದಾನ ಮಾಡಿದ್ದಾರೆ. ಅದಕ್ಕಾಗಿಯೇ ಅವರು ಎಂದೂ ಮುರಿಯಲು ಇಚ್ಛಿಸದ ದಾಖಲೆ ಮುರಿದಿದ್ದಾರೆ.

Be the first to comment on "ಸಚಿನ್ ತೆಂಡುಲ್ಕರ್ ದಾಖಲೆ ಮುರಿದದ್ದು ಯಾರು ಗೊತ್ತೇ, ಏನಿದು ವಿಶೇಷ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*