ಮಾಣಿ ಜಂಕ್ಷನ್ ಬಳಿ ವಿಟ್ಲ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ವಿಟ್ಲ ಪಿಎಸ್.ಐ ಮತ್ತು ಸಿಬ್ಬಂದಿ ಕರ್ತವ್ಯದಲ್ಲಿದ್ದ ಸಂದರ್ಭ ಇಬ್ಬರು ತಮ್ಮ ಬಳಿ ಗೋಣಿ ಚೀಲ ಇಟ್ಟುಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಅವರನ್ನು ವಿಚಾರಿಸಿದಾಗ ಮೊಹಮ್ಮದ್ ಸಿಹಾನ್ ಮತ್ತು ಜೋಯ್ಸನ್ ಎಂದು ತಮ್ಮ ಹೆಸರನ್ನು ಹೇಳಿಕೊಂಡಿದ್ದಾರೆ. ಗೋಣಿಚೀಲ ಪರಿಶೀಲನೆ ನಡೆಸಿದಾಗ ಹಳೇಯ ಪಂಪ್ ಗಳು -2, ಆಟೋ ರಿಕ್ಷಾದ ಹಳೇಯ ಡಿಸ್ಕ್-1 ಪಾಲಿಥಿನ್ ಚೀಲ -1 ಕಂಡು ಬಂದಿದ್ದು, ಈ ಸೊತ್ತುಗಳನ್ನು ಪುತ್ತೂರು ಕಡೆಯಿಂದ ಕಳವು ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮಾಣಿ ಜಂಕ್ಷನ್ ನಲ್ಲಿ ಕಳ್ಳರ ಸೆರೆ"