ಕುಂಡಡ್ಕ ಪುನಃಪ್ರತಿಷ್ಠಾ ಬ್ರಹ್ಮಕಲಶ: ಕಾರ್ಯಾಲಯ ಉದ್ಘಾಟನೆ Posted By: Bantwal News February 3, 2019 ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ ವಿಟ್ಲ : ಕುಳ, ವಿಟ್ಲಮುಟ್ನೂರು ಗ್ರಾಮಗಳ ಕುಂಡಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ ಮತ್ತು ವಿಟ್ಲಮುಟ್ನೂರು ಗ್ರಾಮದ ಮಾಡತ್ತಡ್ಕ ಶಿಬರಿಕಲ್ಲ ಮಾಡದ ಶ್ರೀ ಮಲರಾಯ-ಮೂವರ್ ದೈವಂಗಳ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶವು ಫೆ. 5ರಿಂದ 23ರ ವರೆಗೆ ನಡೆಯಲಿದ್ದು, ಕಾರ್ಯಾಲಯವನ್ನು ಅರ್ಚಕ ಗಣೇಶ್ ಭಟ್ ಉದ್ಘಾಟಿಸಿದರು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ, ಸೀಮೆ ಗುರಿಕ್ಕಾರ ಕೆ.ಟಿ. ವೆಂಕಟೇಶ್ವರ ನೂಜಿ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಮರುವಾಳ, ಕೋಶಾಧಿಕಾರಿ ಗೋವಿಂದರಾಜ್ ಪೆರುವಾಜೆ, ಕಾರ್ಯಾಲಯ ಪ್ರಮುಖ್ ನಾಗೇಶ್, ಸಹಪ್ರಮುಖ್ ರವೀಶ ಶೆಟ್ಟಿ ಪಿಲಿಂಜ, ಮುತ್ತಪ್ಪ ಗೌಡ ಪಾಂಡೇಲು ಮತ್ತಿತರರಿದ್ದರು. Share this: WhatsApp Telegram
Be the first to comment on "ಕುಂಡಡ್ಕ ಪುನಃಪ್ರತಿಷ್ಠಾ ಬ್ರಹ್ಮಕಲಶ: ಕಾರ್ಯಾಲಯ ಉದ್ಘಾಟನೆ"