ಧರ್ಮಸ್ಥಳ ಯೋಜನೆ – ಬಂಟ್ವಾಳದಲ್ಲಿ ಅತ್ಯುತ್ತಮ ಸಾಧನೆ : ಡಾ. ಎಲ್.ಎಚ್.ಮಂಜುನಾಥ್

www.bantwalnews.com Editor: :Harish Mambady

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕಳೆದ ಹದಿನಾಲ್ಕು ವರ್ಷಗಳಲ್ಲಿ 850 ಕೋಟಿ ರೂ ಹಣ ಸ್ವಸಹಾಯ ಸಂಘದ ಸದಸ್ಯರ ಮನೆಬಾಗಿಲಿಗೆ ಹರಿದುಬಂದಿದೆ ಎಂದು ಪ್ರಗತಿಬಂಧು, ಸ್ವಸಹಾಯ ಸಂಘ ಒಕ್ಕೂಟಗಳ ಸದಸ್ಯರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ ಹೇಳಿದ್ದಾರೆ.

ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಶುಕ್ರವಾರ ಸಂಜೆ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು, ಸ್ವಸಹಾಯ ಸಂಘ ಒಕ್ಕೂಟಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನವರಿ 1ರಿಂದ ಮಾ.31ರವರೆಗೆ ಆಟೋ, ಟ್ಯಾಕ್ಸಿ, ಗೂಡ್ಸ್ ಟೆಂಪೊ ಖರೀದಿಸುವವರಿಗೆ 10 ಸಾವಿರ ರೂ ಅನುದಾನವನ್ನು ಧರ್ಮಸ್ಥಳದಿಂದ ಮಹಾಮಸ್ತಕಾಭಿಷೇಕದ ನೆನಪಿನಲ್ಲಿ ನೀಡಲಾಗುತ್ತದೆ ಎಂದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಘೋಷಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಅತಿಥಿಯಾಗಿ ಭಾಗವಹಿಸಿ  ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರ ಹೊಸ ಚಿಂತನೆಗಳಿಂದ ಯೋಜನೆಯು ಪ್ರಗತಿ ಸಾಧಿಸಿದೆ ಎಂದರು.  ಕೇಂದ್ರ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿ ಮಾತನಾಡಿದ ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಮಾತನಾಡಿ,ಸರಕಾರ ಮಾಡದಂತ ಹಲವಾರು ಜನಪರ ಕೆಲಸವನ್ನು ಯೋಜನೆಯ ಮೂಲಕ ಕಾರ್ಯರೂಪಕ್ಕೆ ಬರುತ್ತಿದ್ದು, ಗ್ರಾಮೀಣ ಭಾಗದ ಬಡವರ ಮನೆ ಬೆಳಕನ್ನು ಕಾಣುವಂತಾಗಿದೆ ಎಂದರು.

ಕೇಂದ್ರ ಒಕ್ಕೂಟದ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಸದಾನಂದ ನಾವೂರು ಸಭಾಧ್ಯಕ್ಷತೆ ವಹಿಸಿದ್ದರು.ಬಂಟ್ವಾಳ ತಾ.ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೋಡಾಜೆ, ಬಿ.ಸಿ.ರೋಡ್ ವಲಯ ಅಧ್ಯಕ್ಷ ರೋನಾಲ್ಡ್ ಡಿಸೋಜ ಅಮ್ಟಾಡಿ,ಒಕ್ಕೂಟದ ನೂತನ ಅಧ್ಯಕ್ಷ ಮಾಧವ ವಳವೂರು, ತಾಲೂಕಿನ ವಿವಿಧ ಒಕ್ಕೂಟದ ಅಧ್ಯಕ್ಷರು ವೇದಿಕೆಯಲ್ಲಿದ್ದರು.ಇದೇ ವೇಳೆ ಇಬ್ಬರು ವಿದ್ಯಾರ್ಥಿಗಳಿಗೆ ಸುಜ್ಙಾನ ಶಿಷ್ಯ ವೇತನ, ಓರ್ವ ಫಲಾನುಭವಿಗೆ ಮಾಶಾಸನ ವಿತರಿಸಲಾಯಿತು.ಹಾಗೆಯೇ ತಾಲೂಕಿನ ವಿವಿಧ ಒಕ್ಕೂಟಗಳ ನಿಕಟಪೂರ್ವ ಅಧ್ಯಕ್ಷರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ ಸ್ವಾಗತಿಸಿದರು.ಯೋಜನೆಯ ಬಂಟ್ವಾಳ ತಾಲೂಕು ಘಟಕದ ಯೋಜನಾಧಿಕಾರಿ ಜಯಾನಂದ. ಪಿ. ವರದಿ ವಾಚಿಸಿದರು. ಸಿದ್ದಕಟ್ಟೆ ವಲಯಾಧ್ಯಕ್ಷ ಸದಾನಂದ ಶೀತಲ್ ವಂದಿಸಿದರು .ಮೇಲ್ವಿಚಾರಕ ರಮೇಶ್ ನಿರೂಪಿಸಿದರು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದಾರಾರರಾಗಬೇಕೇ ?ಇಲ್ಲಿ ಕ್ಲಿಕ್ ಮಾಡಿ. ಈಗಾಗಲೇ ನೀವು ಚಂದಾದಾರರಾಗಿದ್ದರೆ ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ. ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ.
  

Be the first to comment on "ಧರ್ಮಸ್ಥಳ ಯೋಜನೆ – ಬಂಟ್ವಾಳದಲ್ಲಿ ಅತ್ಯುತ್ತಮ ಸಾಧನೆ : ಡಾ. ಎಲ್.ಎಚ್.ಮಂಜುನಾಥ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*