ಪುತ್ತೂರಿನಲ್ಲಿ ಮೊದಲ 24×7 ಐಟಿ ಸಂಸ್ಥೆ ‘ದ ವೆಬ್ ಪೀಪಲ್’ನ ನೂತನ ಕಾರ್ಯಾಲಯ ಉದ್ಘಾಟನೆ

ಜಾಹೀರಾತು

ತಂತ್ರಜ್ಞಾನದ ಜೊತೆಗೆ ಬೆಳೆಯಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆಎಂದು ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

 ಅವರು ನಗರದ ಬೊಳುವಾರಿನಲ್ಲಿ ಪುತ್ತೂರಿನ ಮೊದಲ 24×7  ಐಟಿ ಕಂಪನಿ ‘ದ ವೆಬ್ ಪೀಪಲ್ನ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರುಇಂದು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಇಡೀ ವಿಶ್ವವೇ ಭಾರತದತ್ತ ನೋಡುವ ಹಾಗಾಗಿರುವುದಕ್ಕೆ ಇಲ್ಲಿನ ತಂತ್ರಜ್ಞಾನ ಶಿಕ್ಷಣ ಮತ್ತು ಯುವಜನತೆಯ ತೊಡಗಿಸಿಕೊಳ್ಳುವುದರಿಂದಾಗಿದೆತಂತ್ರಜ್ಞಾನದ ಶಿಕ್ಷಣ ಪಡೆದವರು ಇಂದು ಉದ್ಯೋಗಿಗಳಾಗುವುದು ಮಾತ್ರವಲ್ಲದೇ ಉದ್ಯೋಗ ಸೃಷ್ಟಿಕರ್ತರಾಗಿಯೂ ಮುಂದುವರೆಯುತ್ತಿರುವುದು ಉತ್ತಮ ವಿಚಾರವಾಗಿದೆಅಂತಹಾ ಪ್ರಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆಯೇ ‘ದ ವೆಬ್ ಪೀಪಲ್’ ಮುಂದಡಿಯಿಟ್ಟಿದೆಎಂದವರು ವಿಶ್ಲೇಷಿಸಿದರು.

 ಇದುವರೆಗೆ ಬೆಂಗಳೂರು ತಂತ್ರಜ್ಞಾನದ ನಗರವಾಗಿ ವಿದೇಶಿ ಸಂಸ್ಥೆಗಳಿಗೆ ತಂತ್ರಜ್ಞಾನದ ಸಹಯೋಗ ಹೊಂದಿದ್ದರೆಪುತ್ತೂರು ಕೂಡಾ ಅದೇ ರೀತಿಯಲ್ಲಿ ಮುಂದುವರೆಯುವ ಸೂಚನೆಗಳು ಕಾಣಿಸುತ್ತಿವೆ’ ಎಂದವರು ನುಡಿದರುಯುವಕರ ಶ್ರಮದ ಮೂಲಕ ದೇಶದ ಸಮಗ್ರ ಅಭಿವೃದ್ಧಿಯ ಕೊಡುಗೆ ಅಗತ್ಯವಿದೆಹೀಗಾಗಿ ಇಂತಹಾ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಗಳು ಬೆಳೆಯಬೇಕೆಂದು ಅವರು ಆಶಿಸಿದರು.

ಜಾಹೀರಾತು

 ಪುತ್ತೂರು ಶಾಸಕರಾದ  ಸಂಜೀವ ಮಠಂದೂರು ಅವರು ಮಾತನಾಡಿಪುತ್ತೂರಿನ ಯುವಕರು ತಂತ್ರಜ್ಞಾನದಲ್ಲಿ ಮುಂದುವರೆದಿದ್ದಾರೆ ಎನ್ನುವುದಕ್ಕೆ 24×7 ಐಟಿ ಸಂಸ್ಥೆಯೊಂದು ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿರುವುದೇ ಸೂಕ್ತ ಉದಾಹರಣೆಯಾಗಿದೆಈ ಮೂಲಕ ತಂತ್ರಜ್ಞಾನ ಶಿಕ್ಷಣ ಪಡೆದ ಇಲ್ಲಿನ ಯುವಕರಿಗೆ ಇಲ್ಲೇ ಉದ್ಯೋಗ ದೊರಕುವಂತಾಗಲಿಸಂಸ್ಥೆಯ ಸ್ಥಾಪಕರ ಸಮಗ್ರ ಆಶಯಗಳು ನೆರವೇರಲಿಎಂದರು.

 ಕ್ಯಾಂಪ್ಕೋ ಅಧ್ಯಕ್ಷರಾದ  ಎಸ್ಆರ್ಸತೀಶ್ಚಂದ್ರ ಮಾತನಾಡಿಉದ್ಯೋಗ ಸೃಷ್ಟಿಯಲ್ಲಿ ಪುತ್ತೂರಿನ ಪಾಲೂ ಕೂಡಾ ದೇಶವಿದೇಶಕ್ಕೆ ದೊರೆಯಲಿದೆಈ ಮೂಲಕ ಪ್ರತಿಭಾವಂತರಿಗೆ ಉದ್ಯೋಗ ದೊರಕಿ ಯುವಜನರು ತಾಂತ್ರಿಕ ಕ್ಷೇತ್ರದಲ್ಲಿ ಮುಂದುವರೆಯುವಂತಾಗಲಿಎಂದು ಹಾರೈಸಿದರು.

 ದ ವೆಬ್ ಪೀಪಲ್’ ಸಂಸ್ಥೆಯ ಸಿಓಓ ಶರತ್ ಶ್ರೀನಿವಾಸ್ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡುತ್ತಾಈಗಾಗಲೇ ಸಂಸ್ಥೆಯು ದೇಶೀಯ ಮತ್ತು ವಿದೇಶಿ ಕಂಪನಿಗಳಿಗೆ ತಂತ್ರಜ್ಞಾನದ ಸಹಯೋಗವನ್ನು 24x 7 ಒದಗಿಸುತ್ತಿದೆಹಾಗೆಯೇ ಈಗಾಗಲೇ ಹಲವು ಸಂಸ್ಥೆಗಳಿಗೆ ಅಂತರ್‌ಜಾಲ ತಾಣಗಳನ್ನುವ್ಯವಹಾರೋದ್ಯಮ ಅಭಿವೃದ್ಧಿಗಾಗಿ ಮೊಬೈಲ್ ಆಪ್ಡಿಜಿಟಲ್ ಮಾರ್ಕೆಟಿಂಗ್ ಸೇರಿದಂತೆ ವ್ಯವಹಾರ ಸಂಬಂಧಿ ವಿನ್ಯಾಸಗಳನ್ನು ಒದಗಿಸಿಕೊಟ್ಟಿರುತ್ತದೆಹಾಗೆಯೇ ವಿದೇಶಿ ಸಂಸ್ಥೆಗಳಿಗೆ ಬಿಪಿಓ ಮತ್ತಿತರ ಆನ್‌ಲೈನ್ ಸೇವೆಗಳನ್ನು ಒದಗಿಸುತ್ತಿದೆಎಂದು ವಿವರಿಸಿದರು. ‘ದ ವೆಬ್ ಪೀಪಲ್’ ಸಂಸ್ಥೆಯ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ(CEO) ಶ್ರೀ ಆದಿತ್ಯ ಕಲ್ಲೂರಾಯ ಧನ್ಯವಾದ ಸಮರ್ಪಿಸಿ ಸಂಸ್ಥೆಯ ಬೆಳವಣಿಗೆಯಲ್ಲಿ ಜೊತೆಯಾಗಿರುವ ಸಮಸ್ತರನ್ನೂ ಸ್ಮರಿಸಿದರುಜೊತೆಗೆ ಮುಂದೆಯೂ ಸರ್ವರ ಸಹಕಾರ ಅಗತ್ಯವಿದೆ ಎಂದರು.

ಜಾಹೀರಾತು

ಕ್ಯಾಂಪ್ಕೋದ ಮಾಜಿ ಅಧ್ಯಕ್ಷರಾದ ಎಸ್.ಆರ್ರಂಗಮೂರ್ತಿಕ್ಯಾಂಪ್ಕೋ ಉಪಾಧ್ಯಕ್ಷರಾದ ಶಂನಾಖಂಡಿಗೆ, ‘ದ ವೆಬ್ ಪೀಪಲ್ನ ಮತ್ತೋರ್ವ ಪ್ರವರ್ತಕರಾದ  ಶ್ರೀ ಉಜ್ವಲ್ ಪ್ರಭು, ರೀಡೂ ಕನ್ನಡದ ಸಂಪಾದಕ ಶಿವಪ್ರಸಾದ್ ಭಟ್, ಆರಭಿ ಮ್ಯೂಸಿಕ್ ಅಕ್ಯಾಡಮೀ ಯ ಡೈರೆಕ್ಟರ್ ಅನೀಶ್ ವೀ ಭಟ್ ಮತ್ತಿತರರು ಉಪಸ್ಥಿತರಿದ್ದರುಬಿ ನಿತ್ಯಾನಂದ ಶೆಟ್ಟಿನನ್ಯ ಅಚ್ಯುತ ಮೂಡತ್ತಾಯ,ರೋಟರೀ ಅಧ್ಯಕ್ಷರಾದ ವಾಮನ ಪೈಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡು ಕಂಪನೀ ಗೆ ಶುಭ ಹಾರೈಸಿದರು.

 ಏನಿದು `ದ ವೆಬ್ ಪೀಪಲ್‘ ? 

ಪುತ್ತೂರಿನ ಮೊದಲ 24×7 ಐಟಿ ಕಂಪೆನಿ, `ದ ವೆಬ್ ಪೀಪಲ್‘ (The Web Peopleಈಗಾಗಲೇ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಹಲವಾರು ಸೇವೆಗಳನ್ನು ಒದಗಿಸುವಲ್ಲಿ ಹೆಸರುವಾಸಿಯಾಗಿದೆ. ‘ಯೋಜನೆ, ವಿನ್ಯಾಸ, ಪ್ರಸಾರ ಮತ್ತು ಸಹಯೋಗ’ ಎನ್ನುವ ಕಾರ್ಯನುಡಿಯೊಂದಿಗೆ ‘ನಿಮ್ಮ ಉದ್ಯಮಕ್ಕೆ ನಮ್ಮ ತಂತ್ರಜ್ಞಾನದ ಸಾಥ್’ ಎಂಬುದಾಗಿ ಕಾರ್ಯನಿರ್ವಹಿಸುವ ಈ ಸಂಸ್ಥೆಯು ಸುಂದರ ಮತ್ತು ಅತ್ಯಾಕರ್ಷಕ ಅಂತರ್ಜಾಲ ತಾಣಗಳನ್ನು ರೂಪಿಸುವುದುಮೊಬೈಲ್ ಆ್ಯಪ್ ಸಿದ್ಧಪಡಿಸುವುದುವ್ಯವಹಾರಕ್ಕೆ ಸಂಬಂಧಿಸಿದ ಆ್ಯಪ್ ಸಿದ್ಧಪಡಿಸುವುದು,  ಮತ್ತು ತಾಂತ್ರಿಕ ಮಾಹಿತಿ ಒದಗಿಸುವುದುಸ್ಟಾರ್ಟ್‍ಅಪ್ ರೂಪಿಸುವುದುವಿದೇಶಿ ಸಂಸ್ಥೆಗಳಿಗೆ ಆನ್‍ಲೈನ್ ತಾಂತ್ರಿಕ ಬೆಂಬಲವ್ಯವಹಾರ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಮಾರ್ಗದರ್ಶನ ಮತ್ತು ಅನುಷ್ಠಾನಬಿಪಿಓಡಿಜಿಟಲ್ ಮಾರ್ಕೆಟಿಂಗ್ ಮುಂತಾದ ತಂತ್ರಜ್ಞಾನ ಸಂಬಂಧಿ ಕಾರ್ಯಗಳನ್ನು ನಿರ್ವಹಿಸುತ್ತದೆ. ತಮ್ಮ ಸಹಯೋಗಿ ಸಂಸ್ಥೆಗಳ ಹಾಗೂ ಪ್ರಮುಖ ಗ್ರಾಹಕರ ಬೇಡಿಕೆಯ ಆಧಾರದಲ್ಲಿ ಪುತ್ತೂರಿನಲ್ಲಿಯೇ ವಿಶಾಲವಾದ ಕಛೇರಿಯನ್ನು ಹೊಂದಲು ತೀರ್ಮಾನಿಸಿ ಇದೀಗ ಹೊಸ ಸುಸಜ್ಜಿತ ಮತ್ತು ಕಾರ್ಪೊರೇಟ್ ಶೈಲಿಯ ಕಾರ್ಯಾಲಯಕ್ಕೆ ಕಾಲಿಟ್ಟಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಪುತ್ತೂರಿನಲ್ಲಿ ಮೊದಲ 24×7 ಐಟಿ ಸಂಸ್ಥೆ ‘ದ ವೆಬ್ ಪೀಪಲ್’ನ ನೂತನ ಕಾರ್ಯಾಲಯ ಉದ್ಘಾಟನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*