ಸಾಕ್ಷರತಾ ಆಂದೋಲನದಿಂದ ನವಚೇತನ: ಮೌನೇಶ್ ವಿಶ್ವಕರ್ಮ

ಅನಕ್ಷರಸ್ತರ ಬಾಳಿನಲ್ಲಿ ನವಬೆಳಕು ತುಂಬಿದ್ದು ಸಾಕ್ಷರತಾ ಆಂದೋಲನ ಎಂದು ಪತ್ರಕರ್ತ, ರಂಗಕರ್ಮಿ ಮೌನೇಶ್ ವಿಶ್ವಕರ್ಮ ಹೇಳಿದರು.

ರೋಟರಿ ಕ್ಲಬ್ ಬಂಟ್ವಾಳ ಟೌನ್, ಜೇಸೀ ಐ ಜೋಡುಮಾರ್ಗ ನೇತ್ರಾವತಿಯ ಸಹಭಾಗಿತ್ವದಲ್ಲಿ ನಡೆದ ಅಂತರಾಷ್ಟೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ರೋಟರಿ ಸಭಾಂಗಣ ಬಿ.ಸಿ.ರೋಡು ಇಲ್ಲಿ ನಡೆದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಮಾತನಾಡುತ್ತ ಸಾಕ್ಷರತೆ ಇಂದು ಕೇವಲ ಅಕ್ಷರ ಜ್ಞಾನಕ್ಕೆ ಸೀಮಿತವಾಗದೆ ಡಿಜಿಟಲ್ ಸಾಕ್ಷರತೆಯತ್ತ ಮುಖ ಮಾಡಿದೆ , ಆದ್ದರಿಂದ ತಂತ್ರಜ್ಞಾನ ಮತ್ತು ಸಂಪರ್ಕ ಮಾಧ್ಯಮದ ಲ್ಲಿ ಪ್ರತಿಯೊಬ್ಬ ವ್ಯಕ್ತಿ ಸಾಕ್ಷರತೆಯತ್ತ ಸಾಗುವ ಮಾರ್ಗದಲ್ಲಿ ಪಯಣ ಸಾಗಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ ರಾದ ಉಮೇಶ್ ನಿರ್ಮಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸೀ ಐ ಜೋಡುಮಾರ್ಗ ನೇತ್ರಾವತಿ ಯ ಅಧ್ಯಕ್ಷರಾದ ಸವಿತಾ ನಿರ್ಮಲ್ ಉಪಸ್ತಿತರಿದ್ದರು. ಸುರೇಶ್ ಸಾಲಿಯಾನ್ ಧನ್ಯವಾದ ಸಮರ್ಪಣೆ ಮಾಡಿದರು.

Be the first to comment on "ಸಾಕ್ಷರತಾ ಆಂದೋಲನದಿಂದ ನವಚೇತನ: ಮೌನೇಶ್ ವಿಶ್ವಕರ್ಮ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*