ಶ್ರೀರಾಮ ಸೌಹಾರ್ದ ಸಹಕಾರಿ ಕಲ್ಲಡ್ಕ ಸದಸ್ಯರಿಗೆ ಶೇ.7 ಲಾಭಾಂಶ ವಿತರಣೆ

ಶ್ರೀರಾಮ ಸೌಹಾರ್ದ ಸಹಕಾರಿಯ ಎರಡನೇ ವಾರ್ಷಿಕ ಸಾಮಾನ್ಯ ಸಭೆ ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಭಾಂಗಣದಲ್ಲಿ ಸಂಸ್ಥೆಯ ನಿರ್ದೇಶಕರೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಉಪಸ್ಥಿತಿಯಲ್ಲಿ ನಡೆಯಿತು.

ಶ್ರೀರಾಮ ವಿದ್ಯಾಕೇಂದ್ರ ನೀಡಿದ ಉಚಿತ ಕಟ್ಟಡದಲ್ಲಿ ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಸಂಸ್ಥೆ 2ನೇ ವರ್ಷದಲ್ಲಿ ರೂ 4,49,075 ಲಾಭ ದಾಖಲಿಸಿದೆ. ಸದಸ್ಯರಿಗೆ ಶೇ.7 ಡಿವಿಡೆಂಟ್ ನೀಡಲಾಗಿದೆ. ಸಂಸ್ಥೆಯ ಪ್ರೇರಣೆಯಿಂದ ಮಹಿಳಾ ಸ್ವಸಹಾಯ ಗುಂಪು ಲಾಭದಾಯಕವಾಗಿ ಕ್ಯಾಂಟೀನ್ ನಡೆಸುತ್ತಿದೆ.

ಸಹಕಾರಿ ಸಂಸ್ಥೆಗಳು ನಡೆಯುವುದೇ ಸಹಕಾರಿಗಳಿಂದ. ಜನರಿಂದ ಜನರಿಗಾಗಿ ಜನಗರಿಗೋಸ್ಕರ ಇರುವ ಸಂಸ್ಥೆಯೇ ಸಹಕಾರ ಸಂಸ್ಥೆ. ಇದೊಂದು ಕುಟುಂಬ ಇದ್ದಂತೆ ನಾವೆಲ್ಲರೂ ಕುಟುಂಬದ ಸದಸ್ಯರು ಗಳು. ಈ ಸಂಸ್ಥೆ 2ವರ್ಷಗಳಲ್ಲೇ ಈ ಮಟ್ಟಕ್ಕೆ ಬೆಳೆಯಲು ನಿಮ್ಮೆಲ್ಲರ ಸಹಕಾರವೇ ಕಾರಣ ಎಂದರು. ಈ ಸಂಸ್ಥೆ ಸೀಮಿತ ವ್ಯಕ್ತಿಗಳಿಗೆ ಮೀಸಲಾಗಿರದೆ ಎಲ್ಲಾ ಜನರಿಗಾಗಿ ಇರುವ ಸಹಕಾರಿ ಸಂಸ್ಥೆ. ನಿರ್ದೇಶಕರು ಎಂಬುದು ವ್ಯವಸ್ಥೆಗೆ ಮಾತ್ರ, ನಾವೆಲ್ಲರೂ ಒಟ್ಟಿಗೆ ಸೇರಿ ಅಭಿವೃದ್ಧಿ ಮಾಡೋಣ ಎಂದು ಡಾ. ಭಟ್ ಈ ಸಂದರ್ಭ ಹೇಳಿದರು.

ಪ್ರಧಾನ ವ್ಯವಸ್ಥಾಪಕರಾದ ಯಂ. ಉಗ್ಗಪ್ಪ ಶೆಟ್ಟಿ ವಾರ್ಷಿಕ ವರದಿ, ಅಂದಾಜು ಆಯ-ವ್ಯಯ ಪಟ್ಟಿ, ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. ಸಹಕಾರಿಯ ಬೈಲಾ ತಿದ್ದುಪಡಿ ಸಭೆಯಲ್ಲಿ ಮಂಡಿಸಿ ಸದಸ್ಯರ ಅನುಮೋದನೆ ಪಡೆಯಲಾಯಿತು.

ಲೆಕ್ಕಪರಿಶೋಧಕರಾದ ಯತೀಶ್ ಭಂಡಾರಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ವೇದಿಕೆಯಲ್ಲಿ ಎಲ್ಲಾ ನಿರ್ದೆಶಕರು ಮತ್ತು ಕಾನೂನು ಸಲಹೆಗಾರರಾದ ಸತೀಶ್ ಭಟ್ ಶಿವಗಿರಿ, ಸದಸ್ಯರಾದ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಬಂಟ್ವಾಳ ತಾಲೂಕು ಸಹಕಾರಿ ಭಾರತಿಯ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೋಳಂತೂರು, ರಾಕೋಡಿ ಈಶ್ವರ ಭಟ್. ರಾಜರಾಮ್ ಐತಾಳ್ ಉಪಸ್ಥಿತರಿದ್ದರು.

ಶ್ರೀರಾಮ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಕುಲ್ಯಾರ್ ಸ್ವಾಗತಿಸಿದರು, ಉಪಾಧ್ಯಕ್ಷರಾದ ಸುಜಿತ್ ಕುಮಾರ್ ಧನ್ಯವಾದ ನೀಡಿದರು. ನಿರ್ದೆಶಕರಾದ ಯತಿನ್ ಕುಮಾರ್ ಕಾರ್ಯಕ್ರಮದ ನಿರೂಪಿಸಿದರು.

Be the first to comment on "ಶ್ರೀರಾಮ ಸೌಹಾರ್ದ ಸಹಕಾರಿ ಕಲ್ಲಡ್ಕ ಸದಸ್ಯರಿಗೆ ಶೇ.7 ಲಾಭಾಂಶ ವಿತರಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*