ಕಾವಳಕಟ್ಟೆ – ಬೆಂಗತ್ತೋಡಿ ರಸ್ತೆ ಹಾನಿ, ದುರಸ್ತಿಗೆ ಮನವಿ

ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮ ಕಾವಳಕಟ್ಟೆ-ಬೆಂಗತ್ತೋಡಿ ರಸ್ತೆ ಹಾನಿಯಾಗಿದ್ದು, ದುರಸ್ತಿಗೆ ಸ್ಥಳೀಯರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

ಅವರು ನೀಡಿದ ಪತ್ರದ ಪೂರ್ಣಪಾಠ ಹೀಗಿದೆ:

ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮ ಕಾವಳಕಟ್ಟೆ-ಬೆಂಗತ್ತೋಡಿ ರಸ್ತೆ ಹಾನಿಯಾಗಿದ್ದು, ಮೊನ್ನೆ ಸುರಿದ ಭಾರೀ ಮಳೆಯಿಂದಾಗಿ ಭಾಗಶಃ ಹಾನಿಗೊಂಡಿರುತ್ತದೆ. ಕಳೆದ ಸುಮಾರು 15 ವರ್ಷಗಳಿಂದ ಈ ರಸ್ತೆಯ ನಿರ್ವಹಣೆ ಸಮರ್ಪಕವಾಗಿ ನಡೆದಿರುವುದಿಲ್ಲ.

ಇದೀಗ ರಸ್ತೆಯು ಸಂಪೂರ್ಣವಾಗಿ ಹಾನಿಗೊಂಡಿದ್ದು, ವಾಹನ ಸಂಚಾರಕ್ಕೆ ಭಾರೀ ತೊಂದರೆ ಉಂಟಾಗಿರುವುದಾಗಿದೆ. ಈ ಭಾಗದಲ್ಲಿ ನೂರಾರು ಮನೆಗಳಿದ್ದು, ರಸ್ತೆಯ ಸಂಚಾರ ಅಗತ್ಯವಾಗಿರುತ್ತದೆ.

ರಸ್ತೆ ಹಾನಿಗೊಂಡಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿರುವ ನಿತ್ಯವೂ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾಥರ್ಿಗಳು ಅದರಲ್ಲೂ ಮುಖ್ಯವಾಗಿ ಹೆಣ್ಮಕ್ಕಳಿಗೆ ಬಹಳಷ್ಟು ಕಷ್ಟಕರವಾಗಿರುತ್ತದೆ. ರಸ್ತೆ ಹಾನಿಗೊಂಡಿರುವುದರಿಂದ ನಿತ್ಯವೂ ಎದುರಾಗುತ್ತಿರುವ ಸಮಸ್ಯೆಗಳಿಗೆ ತಾವುಗಳು ವೈಯಕ್ತಿಕ ಗಮನ ಹರಿಸಿ, ರಸ್ತೆ ದುರಸ್ತಿ, ಡಾಮಾರೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಂಬಂಧಿತ ಇಲಾಖೆಗೆ ಮನವಿ ಮಾಡುತ್ತಿದ್ದೇವೆ.

  • ಸ್ಥಳೀಯ ಸಾರ್ವಜನಿಕರು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದಾರಾರರಾಗಬೇಕೇ ?ಇಲ್ಲಿ ಕ್ಲಿಕ್ ಮಾಡಿ. ಈಗಾಗಲೇ ನೀವು ಚಂದಾದಾರರಾಗಿದ್ದರೆ ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ. ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ.
Be the first to comment on "ಕಾವಳಕಟ್ಟೆ – ಬೆಂಗತ್ತೋಡಿ ರಸ್ತೆ ಹಾನಿ, ದುರಸ್ತಿಗೆ ಮನವಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*