ಒಡಿಯೂರು ಕ್ಷೇತ್ರದಲ್ಲಿ ವೈಭವದ ಗ್ರಾಮೋತ್ಸವ, ಶ್ರೀಗಳ ಜನ್ಮದಿನೋತ್ಸವ

ಮನಸ್ಸು ಸ್ವಚ್ಛವಾಗಿದ್ದಾಗ ಎಲ್ಲವೂ ಸ್ವಚ್ಛವಾದಂತೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಗಳವರು ಹೇಳಿದರು.

ಒಡಿಯೂರು ಶ್ರೀಗಳವರ ಜನ್ಮ ದಿನೋತ್ಸವ ಸಮಿತಿ ಮತ್ತು ಸಹಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಕ್ಷೇತ್ರದಲ್ಲಿ ಒಡಿಯೂರು ಶ್ರೀಗಳವರ ಜನ್ಮ ದಿನೋತ್ಸವ-ಗ್ರಾಮೋತ್ಸವ 2018ರ ಅಂಗವಾಗಿ ಏರ್ಪಡಿಸಿದ ಸಭಾಕಾರ್ಯಕ್ರಮದಲ್ಲಿ ಭಕ್ತರ ಗೌರವಾರ್ಪಣೆ ಸ್ವೀಕರಿಸಿ, ಆಶೀರ್ವಚನ ನೀಡಿದರು.

ಚಿತ್ರದುರ್ಗ ಮುರುಘಾಮಠದ ದೇಶಿಕೇಂದ್ರ ಸ್ವಾಮೀಜಿ, ಸಾಧ್ವೀ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿದರು. ಔಷಧೀಯ ಸಸಿಗಳನ್ನು ವಿತರಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮಾತನಾಡಿ ಸ್ವಾಮೀಜಿಯವರ ಯೋಜನೆಗಳಿಗೆ ಬೆಂಬಲ ನೀಡುತ್ತೇನೆ ಮತ್ತು ನೂತನ ಸಭಾಭವನ ನಿರ್ಮಾಣಕ್ಕೆ ಕೈಜೋಡಿಸುತ್ತೇನೆ ಎಂದರು.

ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ, ನಮ್ಮ ಕುಡ್ಲ ತುಳು ಚ್ಯಾನೆಲ್ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ, ಪುಣೆ ಉದ್ಯಮಿ ರಂಜಿತ್ ಶೆಟ್ಟಿ ಪುಣೆ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪುಣೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಪ್ರಧಾನ ಕಾರ್ಯದರ್ಶಿ ರೋಹಿತ್ ಡಿ.ಶೆಟ್ಟಿ ನಗ್ರಿಗುತ್ತು, ಮಹಾರಾಷ್ಟ್ರ ಬಳಗದ ಕೃಷ್ಣ ಎಲ್.ಶೆಟ್ಟಿ, ವಾಮಯ್ಯ ಶೆಟ್ಟಿ ಮುಂಬಯಿ, ರೇವತಿ ವಾಮಯ್ಯ ಶೆಟ್ಟಿ ಮುಂಬಯಿ, ಒಡಿಯೂರು ಸೌಹಾರ್ದ ಸಹಕಾರಿ ಅಧ್ಯಕ್ಷ ಸುರೇಶ್ ರೈ ಅಂಕತ್ತಡ್ಕ, ಒಡಿಯೂರು ಗುರುದೇವ ಸೇವಾ ಬಳಗದ ಮಂಗಳೂರು ಅಧ್ಯಕ್ಷ ಜಯಂತ್ ಜೆ.ಕೋಟ್ಯಾನ್, ಪ್ರಕಾಶ್ ವಿ.ಶೆಟ್ಟಿ ಪೇಟೆಮನೆ, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ ಕಾಪಿಕ್ಕಾಡ್, ಉದ್ಯಮಿ ಬಾಲಚಂದ್ರ ಬೆಂಗಳೂರು, ಒಡಿಯೂರು ಶ್ರೀಗಳ ಮಾತೃಶ್ರೀ ಅಂತಕ್ಕೆ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ.ಶೆಟ್ಟಿ, ತುಳು ಕೂಟದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ್, ಒಡಿಯೂರು ಶ್ರೀಗಳವರ ಜನ್ಮ ದಿನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು, ದಾವಣಗೆರೆಯ ಸಿದ್ಧರಾಮಪ್ಪ, ನೀಲಕಂಠಪ್ಪ, ಉಡುಪಿಯ ಪ್ರಭಾಕರ ಶೆಟ್ಟಿ, ಅಜಿತ್‌ನಾಥ ಪಂಗಳಂ, ವಿಟ್ಲ ಮಂಡಲ ಅಧ್ಯಕ್ಷ ಸದಾಶಿವ ಶೆಟ್ಟಿ  ಅಳಿಕೆ ಮತ್ತಿತರರು ಉಪಸ್ಥಿತರಿದ್ದರು.

ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರ.ಕಾರ್ಯದರ್ಶಿ ಸದಾಶಿವ ಅಳಿಕೆ ವರದಿ ಮಂಡಿಸಿ, ಕಾರ್ಯಕ್ರಮ ನಿರ್ವಹಿಸಿದರು. ರೇಣುಕಾ ಎಸ್. ರೈ, ರವಿರಾಜ ಶೆಟ್ಟಿ ಬಳಗ ಆಶಯಗೀತೆ ಹಾಡಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕ ಎ.ಜಯಪ್ರಕಾಶ ಶೆಟ್ಟಿ ವಂದಿಸಿದರು.

ವಿವಿಧ ಕಾರ್ಯಕ್ರಮಗಳು:

ಗಣಪತಿ ಹವನ, ನಾಮ ಸಂಕೀರ್ತನೆ, ಪರಮಪೂಜ್ಯ ಶ್ರೀ ಗುರುಗಳಿಗೆ ಪೂರ್ಣಕುಂಭ ಸ್ವಾಗತ, ದೀಪ ಪ್ರಜ್ವಲನೆ, ಶ್ರೀ ಗುರು ಪಾದಪೂಜೆ – ಪಾದುಕಾರಾಧನೆ, ಗುರುಕುಲದ ಪುಟಾಣಿಗಳಿಂದ ಶ್ರೀಗಳಿಗೆ ಗುರುನಮನ, ದೇಸೀಘೃತದಿಂದ ತುಲಾಭಾರ ಸೇವೆ, ಉಯ್ಯಾಲೆ ಸೇವೆ ನಡೆಯಿತು.

ಆಂಗ್ಲ ಭಾಷೆಗೆ ಭಾಷಾಂತರಿಸಿದ ಗ್ರಾಮಾಭ್ಯುದಯ ಕೃತಿಯನ್ನು ಮತ್ತು ಪೂಜ್ಯ ಶ್ರೀಗಳವರ ಸಿರಿ ಕಂಠದಿಂದ ಮೂಡಿಬಂದ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು. ದ.ಕ.ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗ್ರಾಮೋತ್ಸವ ಪ್ರಯುಕ್ತ ಸೇವಾ ಕಾರ್ಯಗಳಿಗೆ ಪ್ರತಿಭಾ ಪುರಸ್ಕಾರಕ್ಕೆ 19 ವಿದ್ಯಾರ್ಥಿಗಳಿಗೆ 30,500 ರೂ., ವಿದ್ಯಾಭ್ಯಾಸ ಮುಂದುವರಿಕೆಗೆ ನೆರವು 373 ವಿದ್ಯಾರ್ಥಿಗಳಿಗೆ      9,34,000 ರೂ., ವೈದ್ಯಕೀಯ  ಶುಶ್ರೂಷೆಗೆ ಸಹಾಯ ಹಸ್ತ 116 ಮಂದಿಗೆ     3,26,000 ರೂ., ಸಂಘ -ಸಂಸ್ಥೆ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ನೆರವು 23 ಕೇಂದ್ರಗಳಿಗೆ 3,93,000 ರೂ., ನವನಿಕೇತನ ಪ್ರಕೃತಿ ವಿಕೋಪ- ಶೌಚಾಲಯ ನಿರ್ಮಾಣಕ್ಕೆ  ನೆರವು 51 ಫಲಾನುಭವಿಗಳಿಗೆ 5,27,000 ರೂ. ವಿತರಿಸಲಾಯಿತು.

ವಿದ್ಯಾಭ್ಯಾಸಕ್ಕೆ ನೆರವು, ಔಷಧೀಯ ಸಸಿಗಳ ವಿತರಣೆ, ಸಂಘ ಸಂಸ್ಥೆಗೆ ನೆರವು, ಅನಾರೋಗ್ಯಕ್ಕೆ ನೆರವು, ಪ್ರಕೃತಿ  ವಿಕೋಪಕ್ಕೆ  ಸಹಾಯ ಹಸ್ತ, ಆದರ್ಶ ಘಟ ಸಮಿತಿಗಳ ಗುರುತಿಸುವಿಕೆ, ಆದರ್ಶ ಮಂಡಲ ಸಮಿತಿ ಗುರುತಿಸುವಿಕೆ ಮಾಡಲಾಯಿತು.

Be the first to comment on "ಒಡಿಯೂರು ಕ್ಷೇತ್ರದಲ್ಲಿ ವೈಭವದ ಗ್ರಾಮೋತ್ಸವ, ಶ್ರೀಗಳ ಜನ್ಮದಿನೋತ್ಸವ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*