ಅಹಿಂಸಾ ಪರಿಪಾಲನೆಯಿಂದ ಜೈನಧರ್ಮಕ್ಕೆ ವಿಶ್ವಮಾನ್ಯತೆ: ಶಾಸಕ ರಾಜೇಶ್ ನಾಯ್ಕ್

ಮುನಿ ಪರಂಪರೆಯಿಂದ ಹಾಗೂ ಅಹಿಂಸಾ ಪರಿಪಾಲನೆ ಯಿಂದ ಜೈನಧರ್ಮ ವಿಶ್ವದಲ್ಲಿಯೇ ಗುರುತಿಸುವಂತಾಗಿದೆ ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅಭಿಪ್ರಾಯಪಟ್ಟರು.

ಬಂಟ್ವಾಳ ಜೈನ್ ಮಿಲನ್ ಆಶ್ರಯದಲ್ಲಿ ಬಿ.ಸಿ.ರೋಡಿನ ಉದ್ಯಾನವನದ ಬಳಿಯ ಕಲಾಮಂದಿರದಲ್ಲಿ ನಡೆದ ಆಟಿ ತಿಂಗಳ ಆಹಾರಮೇಳ ಹಾಗೂ ಆಟಿ ಸಮ್ಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅತಿಥಿಯಾಗಿದ್ದ ಭಾರತೀಯ ಜೈನ್ ಮಿಲನ್ ವಲಯ-8ರ ಉಪಾಧ್ಯಕ್ಷ ಪುಷ್ಪರಾಜ್ ಜೈನ್ ಅವರು ಮಾತನಾಡಿ, ಕರಾವಳಿ ಭಾಗದ ಮಿಲನ್ ಘಟಕಗಳು ಆಟಿದ ತಮ್ಮನದಂತಹ ಕಾರ್ಯಕ್ರಮದ ಮೂಲಕ ವಲಯಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದರು.ಮಿಲನ್ ಅಧ್ಯಕ್ಷ ಬ್ರಜೇಶ್ ಜೈನ್ ಅಧ್ಯಕ್ಷತೆ ವಹಿಸಿದ್ದರು.

ವಲಯ 8 ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ನಿರ್ದೇಶಕ ಸುದರ್ಶನ್ ಜೈನ್ ಅತಿಥಿಯಾಗಿದ್ದರು.ವಲಯ ನಿರ್ದೇಶಕ ಸೋಮಶೇಖರ ಶೆಟ್ಟಿ ಉಪನ್ಯಾಸ ನೀಡಿದರು. ಶಾಸಕ ರಾಜೇಶ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.  ಮಿಲನೋತ್ತಮ ಪುರಸ್ಕಾರವನ್ನು  ಪೆರಿಯಾರುದೋಟ ದಿವಾಕರ್ ಜೈನ್, ಪಾಕಶಾಸ್ತ್ರ ಪ್ರವೀಣ ಪ್ರಶಸ್ತಿಯನ್ನು ಆಲಂಪುರಿ ನಮಿರಾಜ್ ಜೈನ್ ರವರಿಗೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆಯೋಜಿಸಲಾದ ಆಹಾರಮೇಳವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.  ಪಚ್ಚಾಜೆಗುತ್ತು ಜಿನರಾಜಾರಿಗ,ಮುನಿರಾಜ ರೆಂಜಳ ರವರು ಉಪಸ್ಥಿತರಿದ್ದರು‌ ಕಾರ್ಯದರ್ಶಿ ಗೀತಾ ಜಿನಚಂದ್ರ ವರದಿ ವಾಚಿಸಿದರು.ಉಪಾಧ್ಯಕ್ಷ ಡಾ.ಸುದೀಪ್ ಸಿದ್ದಕಟ್ಟೆ ಸ್ವಾಗತಿಸಿದರು‌ಕೋಶಾಧಿಕಾರಿ ಚಂದ್ರಕಾಮತ ವಂದಿಸಿದರು.ಮಿಲನ್ ಪೂರ್ವಾಧ್ಯಕ್ಷ ಆದಿರಾಜ್ ಜೈನ್,ಪೂರ್ವ ಕಾರ್ಯದರ್ಶಿ ಶಿವಪ್ರಕಾಶ್ ನಿರೂಪಿಸಿದರು. ಸ್ವಪ್ನಾ ಚಂದ್ರಪ್ರಭ,ಸನ್ಮತಿ.ಜಿ.ಇಂದ್ರ,ಜಿನೇಂದ್ರ ಜೈನ್,ಮನ್ಮಥರಾಜ್ ಜೈನ್,ಜಿತೇಶ್ ಜೈನ್ ಸಹಕರಿಸಿದರು.

Be the first to comment on "ಅಹಿಂಸಾ ಪರಿಪಾಲನೆಯಿಂದ ಜೈನಧರ್ಮಕ್ಕೆ ವಿಶ್ವಮಾನ್ಯತೆ: ಶಾಸಕ ರಾಜೇಶ್ ನಾಯ್ಕ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*