ಪರಂಪರೆಯ ಹಿನ್ನೋಟ

ಯಕ್ಷಗಾನ ಕ್ಷೇತ್ರಕ್ಕೆ ಮಾಂಬಾಡಿ ಕುಟುಂಬದ ಕೊಡುಗೆ ಬಹಳಷ್ಟಿದೆ ಎಂದರೆ ನನ್ನ ಪೂರ್ವಜರು, ಸಂಬಂಧಿಕರನ್ನು ನಾನೇ ಹೊಗಳಿದಂತಾಯಿತು ಎಂದುಕೊಳ್ಳಬಹುದು. ಆದರೆ ಇತಿಹಾಸ ಇದನ್ನು ಸಾಬೀತುಪಡಿಸಿದೆ. ಸುಮ್ಮನೆ ಹಾಗೆ ಮನೆಯವರನ್ನೊಮ್ಮೆ ಮಾತನಾಡಿಸಿದಾಗ ಇಡೀ ತೆಂಕುತಿಟ್ಟಿನ ಇತಿಹಾಸದಲ್ಲಿ ಸಾವಿರಕ್ಕೂ ಅಧಿಕ ಹಿಮ್ಮೇಳ ಕಲಾವಿದರಿಗೆ ಜಾಗಟೆ ತಾಳ, ಮದ್ದಳೆ, ಚೆಂಡೆಯನ್ನು ಹೇಗೆ ಹಿಡಿಯಬೇಕು ಎಂದು ಕಲಿಸಿದವರು ನನ್ನ ಅಜ್ಜ ಮತ್ತು ಚಿಕ್ಕಪ್ಪ ಎಂಬುದು ಶ್ರುತವಾಯಿತು. ಸುಮಾರು 1920ರಿಂದ ಇಂದಿನವರೆಗೆ ನನ್ನ ಅಜ್ಜ ಮಾಂಬಾಡಿ ನಾರಾಯಣ ಭಾಗವತರು ಹಾಗೂ ಆ ಬಳಿಕ ನನ್ನ ಚಿಕ್ಕಪ್ಪ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ತೆಂಕು ತಿಟ್ಟು ಯಕ್ಷಗಾನದ ಸಾವಿರಾರು ಹಿಮ್ಮೇಳವಾದಕರನ್ನು ಕಲಾಭೂಮಿಗೆ ಅರ್ಪಿಸಿದ್ದಾರೆ. ಕಳೆದ ನಾಲ್ಕೈದು ದಶಕಗಳಿಂದ ಹಿಮ್ಮೇಳದ ಟಾಪ್ ಭಾಗವತರೆಲ್ಲರೂ ಮಾಂಬಾಡಿ ಶಿಷ್ಯಪರಂಪರೆಗೇ ಸೇರಿದವರು ಎಂಬುದೂ ಸತ್ಯವೇ.  ಇಂದು ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನ ಕಲಿಕೆ ಪಠ್ಯವಾಗುತ್ತಿರುವ ಹೊತ್ತು. ಆದರೆ ನಮ್ಮ ಮನೆಯಲ್ಲಿ ಎಂಭತ್ತು ವರ್ಷಗಳಿಗಿಂತಲೂ ಅಧಿಕ ಯಕ್ಷಗಾನ ಕಲಿಕೆ ಗುರುಕುಲ ಇತ್ತು ಎಂಬುದು ಸಾಮಾನ್ಯ ವಿಷಯವೇನಲ್ಲ. ಅದೂ ಕೆಳಮಧ್ಯಮ ವರ್ಗದ ಕುಟುಂಬದವರಾಗಿದ್ದುಕೊಂಡು, ಆರ್ಥಿಕವಾಗಿ ಬಲಶಾಲಿಯಾಗದೆ, ಬಂದವರನ್ನು ಜಾತಿ ಬೇಧ ಮಾಡದೆ ಸಮಾನವಾಗಿ ಯಕ್ಷಾಭ್ಯಾಸ ನೀಡಿದ ನನ್ನ ಕುಟುಂಬಕ್ಕೆ ಹ್ಯಾಟ್ಸ್ ಆಫ್..

ಇಂದಿನಿಂದ ಅನಿಯಮಿತವಾಗಿ ಮಾಂಬಾಡಿ ಪರಂಪರೆಯ ಹಿನ್ನೋಟ  ಆರಂಭಗೊಳ್ಳುತ್ತದೆ…

ಮಾಂಬಾಡಿ ನಾರಾಯಣ ಭಾಗವತರ ಅಥವಾ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಕುರಿತು ನಿಮಗೆ ಗೊತ್ತಿರುವ ಮಾಹಿತಿಯನ್ನು ನಮಗೆ ಈ ಮೈಲ್ ಮಾಡಿರಿ.

  • ಹರೀಶ ಮಾಂಬಾಡಿ, , ಸಂಪಾದಕ, ಬಂಟ್ವಾಳನ್ಯೂಸ್
  • bantwalnews@gmail.com 
  • harishmambady@gmail.com

 

About the Author

Harish Mambady
ಕಳೆದ ಹದಿನೆಂಟು ವರ್ಷಗಳಿಂದ ಹೊಸ ದಿಗಂತ, ಉದಯವಾಣಿ, ತರಂಗ, ಕನ್ನಡಪ್ರಭ ಹಾಗೂ ವಿಜಯವಾಣಿಯಲ್ಲಿ ಉಪಸಂಪಾದಕ, ವರದಿಗಾರ ಹಾಗೂ ಮುಖ್ಯ ಉಪಸಂಪಾದಕನ ಜವಾಬ್ದಾರಿ ನಿಭಾಯಿಸಿರುವ ಹರೀಶ ಮಾಂಬಾಡಿ ಪ್ರಸ್ತುತ www.bantwalnews.com ವೆಬ್ ಪತ್ರಿಕೆಯ ಮಾಲೀಕ ಹಾಗೂ ಪ್ರಧಾನ ಸಂಪಾದಕರಾಗಿದ್ದಾರೆ.

1 Comment on "ಪರಂಪರೆಯ ಹಿನ್ನೋಟ"

  1. Avatar SN Bhat Bayar | May 7, 2017 at 5:42 pm | Reply

    Very good attempt to documeent d contributions of Mambady Narayana Bhagavata and Mambady Subrahmanya Bhat. Their contributions in creating a very large number of professional and amateur artists in Tenkutittu himmela is of high value. Best wishes. S N Bhat Bayar

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*