ರಸ್ತೆ ಬದಿ ಕಸ ಎಸೆದರೆ ಪೊಲೀಸ್ ಕೇಸು, ವಾಹನದ ಲೈಸನ್ಸ್ ರದ್ದು

bantwalnews.com

ಇನ್ನು ಕಾರಿನಲ್ಲಿ ಬಂದು ಅಥವಾ ಯಾವುದೇ ವಾಹನದಲ್ಲಿ ಸಂಚರಿಸುವಾಗ ಇಲ್ಲವೇ ನಡೆದುಕೊಂಡು ಹೋಗುವಾಗಲಾದರೂ ರಸ್ತೆ ಬದಿಯಲ್ಲಿ ಕಸ ಎಸೆಯಬೇಕು ಎಂಬ ಹಂಬಲ ನಿಮ್ಮ ಮನಸ್ಸಿನಲ್ಲಿದ್ದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಇಲ್ಲವಾದರೆ ಪೊಲೀಸ್ ಕೇಸ್ ಎದುರಿಸಬೇಕಾದೀತು ಅಥವಾ ನಿಮ್ಮ ವಾಹನ ಲೈಸೆನ್ಸ್ ರದ್ದಾದೀತು.

ದ.ಕ ಜಿಲ್ಲೆಯಾದ್ಯಂತ ರಾಷ್ಟ್ರೀಯ/ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಕಸದ ರಾಶಿಯನ್ನು ತಂದು ಸುರಿಯುತ್ತಿರುವುದನ್ನು ನಿಯಂತ್ರಿಸಲು ನಿಯಮಾನುಸಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ನಿರ್ದೇಶನ ನೀಡಿದ್ದಾರೆ.

ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ/ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಸದ ರಾಶಿಯನ್ನು ಹಾಕುವ ಪ್ರದೇಶದಲ್ಲಿ ಸಿ.ಸಿ ಕ್ಯಾಮರವನ್ನು ಅಳವಡಿಸಬೇಕು. ಹಗಲು ಮತ್ತು ರಾತ್ರಿ ಹೊತ್ತು ಗಸ್ತು ತಿರುಗಲು ಕಾವಲು ಪಡೆ ತಂಡವನ್ನು ರಚಿಸಬೇಕು. ಕಸತಂದು ಸುರಿಯುವ ವಾಹನದ ಮಾಲೀಕರ ಮೇಲೆ ಪೋಲಿಸ್ ಠಾಣೆಗೆ ದೂರು ದಾಖಲಿಸಬೇಕು. ವಾಹನದ ನೋಂದಣಿ ರದ್ದು ಪಡಿಸಲು ವಾಹನದ ಮಾಲೀಕರ ವಿರುದ್ಧ ಪ್ರಾದೇಶಿಕ ಸಾರಿಗೆ ಇಲಾಖೆಗೆ ದೂರು ದಾಖಲಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ನೆರವು ಘಟಕದ ಸಮಾಲೋಚಕರು ಗ್ರಾಮ ಪಂಚಾಯತ್‍ಗಳಿಗೆ ನಿರಂತರ ಭೇಟಿ ನೀಡಿ ಆಗುತ್ತಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಅವರು ತಿಳಿಸಿದ್ದಾರೆ.

1 Comment on "ರಸ್ತೆ ಬದಿ ಕಸ ಎಸೆದರೆ ಪೊಲೀಸ್ ಕೇಸು, ವಾಹನದ ಲೈಸನ್ಸ್ ರದ್ದು"

  1. Avatar Sathyanarayana Batrakodi | May 11, 2017 at 6:23 am | Reply

    ಒಳ್ಳೆ ನಿರ್ಧಾರ. ಆದರೆ ಕಸ ವಿಲೇವಾರಿಗೆ ಸರಿಯಾದ ವ್ಯವಸ್ಥೆಯೇ ಇಲ್ಲದ ಊರಿನವರ ಪಾಡೇನು? ಉದಾ: ಮಾಣಿಯಿಂದ ಅನಂತಾಡಿ, ನೇರಳಕಟ್ಟೆ ಕಬಕ ವರೆಗೂ ಕಸ ಸಂಗ್ರಹಕ್ಕೆ ಪಂಚಾಯತ್ ಆಡಳಿತ ಏನೂ ವ್ಯವಸ್ಥೆ ಮಾಡಿಲ್ಲ. ಹಲವು ಬಾರಿ ಕೇಳಿಕೊಂಡದ್ದಾಯಿತು. ” ಇಲ್ಲಿ ಕಸ ಹಾಕಬಾರದು” ಎಂಬ ಬೋರ್ಡ್ ಕೆಲವೆಡೆ ಹಾಕಿದ್ದಾರೆ. ಎಲ್ಲಿ ಹಾಕಬೇಕೆಂದು ತಿಳಿಸಿಲ್ಲ! ಈ ಬಗ್ಗೆ ತಮ್ಮಂಥ ಸಾಮಾಜಿಕ ಕಳಕಳಿಯುಳ್ಳ ಮಾಧ್ಯಮದವರು ಸಂಬಂಧ ಪಟ್ಟವರಿಗೆ ಬಿಸಿ ಮುಟ್ಟಿಸಿದರೆ ಒಳ್ಳೆಯದು.

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*