ಜಲೀಲ್ ಹತ್ಯೆ: ಪ್ರಮುಖ ಆರೋಪಿಗಳ ಬಂಧನ

ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಹತ್ಯೆ ಮಾಡಿದ ಪ್ರಮುಖ ಆರೋಪಿಗಳನ್ನು  ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಪಿ.ಹರಿಶೇಖರನ್ ಹೇಳಿದ್ದಾರೆ.

ಜಾಹೀರಾತು

ಹತ್ಯೆಗೆ ಸಂಬಂಧಿಸಿ ಪ್ರಮುಖ ಆರೋಪಿಗಳಾದ ರಾಜೇಶ ನಾಯಕ್, ನರಸಿಂಹ ಶೆಟ್ಟಿ, ಪ್ರಜ್ವಲ್, ಪುಷ್ಪರಾಜ್, ಸಚಿನ್, ರೋಷನ್, ಸತೀಶ್ ರೈ ಮತ್ತು ಇನ್ನಿತರ ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವುದರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ತಂಡವು ಯಶಸ್ವಿಯಾಗಿರುತ್ತದೆ ಎಂದು ಅವರು ಶನಿವಾರ ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏಪ್ರಿಲ್ 20ರಂದು ಬೆಳಿಗ್ಗೆ 11-35 ಗಂಟೆ ಸಮಯಕ್ಕೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎ.ಅಬ್ದುಲ್ ಜಲೀಲ್ ಎಂಬವರು ಗ್ರಾಮ ಪಂಚಾಯತ್  ಚೇರಿಯಲ್ಲಿ ಕುಳಿತುಕೊಂಡಿರುವಾಗ ನಾಲ್ವರು  ದುಷ್ಕರ್ಮಿಗಳು ಮೋಟಾರ್ ಸೈಕಲ್‌ನಲ್ಲಿ ಬಂದು ಅವರ ಕಚೇರಿಯಲ್ಲೇ ತಲವಾರು ಇತ್ಯಾದಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಮೋಟಾರ್ ಸೈಕಲ್‌ಗಳಲ್ಲಿ  ಪರಾರಿಯಾಗಿದ್ದು, ಈ ಬಗ್ಗೆ  ಅಬ್ದುಲ್  ಜಲೀಲ್ ರವರ ತಮ್ಮ ಅನ್ವರ್ ಎಂಬವರು ನೀಡಿದ ದೂರಿನ ಆಧಾರದಲ್ಲಿ  ವಿಟ್ಲ  ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು.

ಘಟನೆಯನ್ನು ಗಂಭಿರವಾಗಿ ಪರಿಗಣಿಸಿದ  ಪೊಲೀಸ್ ಐಜಿಪಿ ಪಿ.ಹರಿಶೇಖರನ್, ಆರೋಪಿಗಳನ್ನು ಪತ್ತೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಿದರು. ತನಿಖೆಯ ಬಳಿಕ ಪ್ರಕರಣದಲ್ಲಿ ಒಳಗೊಂಡ ಒಟ್ಟು 11 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ 2 ಮೋಟಾರ್ ಸೈಕಲ್, 2 ತಲವಾರುಹಾಗೂ 1 ಒಮ್ನಿ ಕಾರನ್ನು  ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ಸುದ್ದಿಗಾರರಿಗೆ ತಿಳಿಸಿದರು.

ಜಾಹೀರಾತು

ದಸ್ತಗಿರಿ ಮಾಡಿದ  ಆರೋಪಿಗಳ ಪೈಕಿ ಪ್ರಕರಣದ ಮುಖ್ಯ ರೂವಾರಿಗಳಾದ ಕರೋಪಾಡಿ ಮಿತ್ತನಡ್ಕದ ಬೇತ ಮನೆ ನಿವಾಸಿ ಪ್ರಸ್ತುತ ಕನ್ಯಾನದಲ್ಲಿ  ಶಾಮೀಯಾನ  ಅಂಗಡಿಯನ್ನು  ನಡೆಸಿಕೊಂಡಿರುವ  ರಾಜೇಶ್ ನಾಯಕ್ ಹಾಗೂ ಮಾಣಿಯ ಲಕ್ಕಪ್ಪಕೋಡಿ ನರಸಿಂಹ ಯಾನೆ ನರಸಿಂಹ ಶೆಟ್ಟಿಯನ್ನು ಉಡುಪಿಯಲ್ಲಿ ವಶಕ್ಕೆ  ಪಡೆದು  ವಿಚಾರಿಸಿದ ಬಳಿಕ ಪುತ್ತೂರು ತಾಲೂಕು  ಬರೆಪ್ಪಾಡಿಯ ರೋಶನ್, ಸವಣೂರಿನ ಪುನೀತ್, ಬೆಳಂದೂರಿನ ಪ್ರಜ್ವಲ್, ಸವಣೂರಿನ ಸಚಿನ್ ಮತ್ತು ಪುಷ್ಪರಾಜ್, ಕನ್ಯಾನದ ಸತೀಶ್  ರೈ, ವೀರಕಂಭದ ಕೇಶವ, ಸುರತ್ಕಲ್  ಕೃಷ್ಣಾಪುರದ ಪ್ರಶಾಂತ್ ಮತ್ತು ಕನ್ಯಾನದ ವಚನ್ ಎಂಬವರನ್ನು ದಸ್ತಗಿರಿ ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗಾರರಿಗೆ ಐಜಿಪಿಯವರು ಒದಗಿಸಿದ ಮಾಹಿತಿಯಲ್ಲಿ ಇರುವ ವಿವರ ಇದು.

ವಿಟ್ಲ ಪೊಲೀಸ್ ಠಾಣೆಯಲ್ಲಿ ರಾಜೇಶ್ ನಾಯಕ್ ವಿರುದ್ಧ ಅ.ಕ್ರ166/2015 ಕಲಂ:143,147,448,323,354,504,506 ಜೊತೆಗೆ 149 ಭಾ.ದಂ.ಸಂ.ರಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಜಲೀಲ್ ಕರೋಪಾಡಿ ತನ್ನ ವಿರುದ್ಧ ದಾಖಲು ಮಾಡಿಸಿರುತ್ತಾರೆ ಎಂದು ರಾಜೇಶ್ ನಾಯಕ್  ದ್ವೇಷ ಹೊಂದಿರುತ್ತಾನೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಮಿತ್ತನಡ್ಕ ಎಂಬಲ್ಲಿ ರಾಜೇಶ್ ನಾಯಕ್ ಹಾಗೂ ಇತರರು ತೋರಣ ಕಟ್ಟುವುದು ಇತ್ಯಾದಿ ಕೆಲಸ  ಮಾಡಿಕೊಂಡಿದ್ದ ಸ್ಥಳದಲ್ಲಿ ಆರೋಪಿಗಳಾದ  ನವಾಫ್, ಸಜಾಬ್, ಖಲೀಲ್ ರವರು ಬೈಕ್ ಸವಾರಿ ಮಾಡಿಕೊಂಡು  ಧೂಳು ಎಬ್ಬಿಸಿರುವುದನ್ನು ರಾಜೇಶ್ ನಾಯಕ್ ಆಕ್ಷೇಪಿಸಿದ್ದಕ್ಕೆ ನವಾಫ್, .ಸಜಾಬ್, ಖಲೀಲ್ ಸುಲೈಮಾನ್, ಖಲಂದರ್ ಅಲ್ಲದೆ ಇತರ 2-3 ಜನರನ್ನು ಸೇರಿಕೊಂಡು ಬಂದು ಕಬ್ಬಿಣದ ರಾಡ್, ಮರದ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿರುತ್ತಾರೆ. ಈ ಪ್ರಕರಣದಲ್ಲಿ ರಾಜೇಶ್ ನಾಯಕ್‌ನ ಮಿತ್ರರೂ ಹಾಗೂ ಗಾಯಾಳುವಾದ ರಮೇಶ ಎಂಬವರಿಗೆ ಜಾತಿ ನಿಂದನೆ ಮಾಡಿದ ಕುರಿತು ವಿಟ್ಲ  ಪೊಲೀಸ್  ಠಾಣೆಯಲ್ಲಿ  ಅ.ಕ್ರ  333/2016  ಕಲಂ: 143,147,148,341,323,324,506,307 ಜೊತೆಗೆ 149 ಐಪಿಸಿ ಮತ್ತು Sc/St (Prevention of Atrocities) Act ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ  ಕೃತ್ಯದಿಂದ  ಸಾರ್ವಜನಿಕ  ಸ್ಥಳದಲ್ಲಿ ಹಲ್ಲೆ  ನಡೆದ ಪರಿಣಾಮ ರಾಜೇಶ್ ನಾಯಕ್  ಅವಮಾನಕ್ಕೊಳಗಾಗಿದ್ದು,  ಈ ಕೃತ್ಯದ  ಆರೋಪಿಗಳಿಗೆ  ಜಲೀಲ್  ಬೆಂಬಲವಾಗಿದ್ದಾನೆಂದು ತಿಳಿದಿರುತ್ತಾನೆ. ಇದೇ ಕೃತ್ಯಕ್ಕೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೊ.ನಂ 334/2016 ಕಲಂ: 143,147,148,341,504,506,323,324 ಜೊತೆಗೆ 149 ಐಪಿಸಿ  ಯಂತೆ ರಾಜೇಶ್  ನಾಯಕ್  ಹಾಗೂ ಆತನ  ಜೊತೆಯಲ್ಲಿದ್ದವರ ವಿರುದ್ಧ  ಪ್ರಕರಣ ದಾಖಲಾಗಿದ್ದು, ಜಲೀಲ್ ಕರೋಪಾಡಿಯವರೇ ತನ್ನ ವಿರುದ್ಧ ಕೇಸು ಮಾಡಿಸಿರುತ್ತಾರೆಂದು ರಾಜೇಶ್ ನಾಯಕ್  ದ್ವೇಷ ಹೊಂದಿರುತ್ತಾನೆ.

ಜಾಹೀರಾತು

2015 ರಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕಾಗಿ ದಿನೇಶ್ ಶೆಟ್ಟಿಯು ಆಕಾಂಕ್ಷಿಯಾಗಿದ್ದು, ದಿನೇಶ್ ಶೆಟ್ಟಿಯು ಭೂಗತ ಪಾತಕಿ ವಿಕ್ಕಿಶೆಟ್ಟಿ @ ಬಾಲಕೃಷ್ಣ ಶೆಟ್ಟಿಯ ಚಿಕ್ಕಪ್ಪನ ಮಗನಾಗಿದ್ದು, ವಿಕ್ಕಿ ಶೆಟ್ಟಿಯು ದಿನೇಶ್ ಶೆಟ್ಟಿಯನ್ನು  ಬೆಂಬಲಿಸಿದ್ದು, ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ದಿನೇಶ್ ಶೆಟ್ಟಿಗೆ ಅವಕಾಶ ಸಿಗದೆ ಜಲೀಲ್  ಕರೋಪಾಡಿಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದ್ದು, ಇದರಿಂದ ವಿಕ್ಕಿ ಶೆಟ್ಟಿ ಆರೋಪಿಗಳ ಜೊತೆ ಬೇಸರ ವ್ಯಕ್ತಪಡಿಸಿರುತ್ತಾನೆ. ಕರೋಪಾಡಿ ಗ್ರಾಮಪಂಚಾಯತ್‌ನ ಯಾವುದೇ ಮುಖ್ಯ ವಿಚಾರಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗಲೂ ದಿನೇಶ್ ಮತ್ತು  ಜಲೀಲ್‌ನ ಮಧ್ಯೆ ಗಲಾಟೆಗಳು ಆಗುತ್ತಿದ್ದು, ಪಂಚಾಯತ್ ನಲ್ಲಿ ಯಾವುದೇ ತೀರ್ಮಾನಗಳಿದ್ದರೂ ವಿಕ್ಕಿ ಶೆಟ್ಟಿ ದೂರವಾಣಿ ಮುಖಾಂತರ ದಿನೇಶ್ ಶೆಟ್ಟಿಗೆ  ಹೇಳಿ ತನ್ನ ಯಾವುದೇ ವಿಚಾರಗಳಿಗೂ ಜಲೀಲ್ ಬೆಲೆ ನೀಡುತ್ತಿಲ್ಲ ಎಂದು ವಿಕ್ಕಿ ಶೆಟ್ಟಿ ದ್ವೇಷ ವ್ಯಕ್ತಪಡಿಸಿರುವುದಾಗಿದೆ. ಆರೋಪಿಗಳಾದ, ಸತೀಶ್ ರೈ,  ಕೇಶವ,  ಪ್ರಶಾಂತ್  ರವರು ರಾಜೇಶ ನಾಯಕ್  ರೂಪಿಸಿದ  ಸಂಚಿಗೆ ಸಹಾಯ ನೀಡಿರುತ್ತಾರೆ. ಉಳಿದಂತೆ ಪ್ರಕರಣದಲ್ಲಿ ಶಾಮೀಲಾಗಿರುವ ಇತರರನ್ನು ಬಂಧಿಸಬೇಕಾಗಿರುತ್ತದೆ. ಪ್ರಕರಣದ ಪ್ರಮುಖ ಆರೋಪಿತ  ರಾಜೇಶ್  ನಾಯಕ್  ವಿರುದ್ಧ  ವಿಟ್ಲ  ಪೊಲೀಸ್  ಠಾಣೆಯಲ್ಲಿ 4 ಪ್ರಕರಣಗಳು ದಾಖಲಾಗಿದ್ದು,  ವಿಟ್ಲ  ಪೊಲೀಸ್  ಠಾಣೆಯಲ್ಲಿ ರೌಡಿ ಶೀಟರ್  ಆಗಿರುತ್ತಾನೆ.  ಆರೋಪಿ  ನರಸಿಂಹ ಶೆಟ್ಟಿಯ  ಮೇಲೆ 2 ಪ್ರಕರಣಗಳು  ವಿಟ್ಲ  ಪೊಲೀಸ್  ಠಾಣೆಯಲ್ಲಿ ದಾಖಲಾಗಿರುತ್ತದೆ. ಆರೋಪಿ  ಸತೀಶ್  ರೈ  ಮೇಲೆ  4 ಪ್ರಕರಣಗಳು  ವಿಟ್ಲ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದ್ದು, ರೌಡಿ ಶೀಟರ್  ಆಗಿರುತ್ತಾನೆ. ಈ ಆರೋಪಿಗಳನ್ನು ಬಂಧಿಸುವಲ್ಲಿ  ಯಶಸ್ವಿಯಾದ  ತಂಡವನ್ನು ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರು ರವರು ಶ್ಲಾಘಿಸಿರುತ್ತಾರೆ.

  • ಇದು ಶನಿವಾರ ಪೊಲೀಸರು ಸುದ್ದಿಗೋಷ್ಠಿಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನೀಡಿದ ಮಾಹಿತಿ.

ಎಸ್ಪಿ ಭೂಷಣ್ ಬೊರಸೆ, ಅಡಿಷನಲ್ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ರವೀಶ್ ಸಿ.ಆರ್, ಸರ್ಕಲ್ ಇನ್ಸ್ ಪೆಕ್ಟರ್ ಮಂಜಯ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಜಾಹೀರಾತು

source: http://www.dkpolice.in

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಜಲೀಲ್ ಹತ್ಯೆ: ಪ್ರಮುಖ ಆರೋಪಿಗಳ ಬಂಧನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*