ನಾಳೆ ಸಂಜೆ ಸರಪಾಡಿಯಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

ಯುವಕ ಮಂಡಲ ಸರಪಾಡಿ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಸಹಯೋಗದೊಂದಿಗೆ ಪ್ರೊ ಮಾದರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ವು ಡಿ.1 ರಂದು ಯುವಕ ಮಂಡಲದ ಅವರಣದಲ್ಲಿ ನಡೆಯಲಿದೆ ಎಂದು ಯುವಕ ಮಂಡಲದ ಗೌರವ ಸಲಹೆಗಾರ ಸರಪಾಡಿ ಆಶೋಕ ಶೆಟ್ಟಿ ಅವರು ತಿಳಿಸಿದ್ದಾರೆ.

ಜಾಹೀರಾತು

ಶುಕ್ರವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕಮಂಡಲದಲ್ಲಿ ಮೂರು ಲಕ್ಷ ರೂ .ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಅಡುಗೆ ಕೋಣೆಯ ಉದ್ಘಾಟನೆ ಹಾಗೂ ದಿ.ಪಟ್ಲಕೆರೆ ನಾರಾಯಣಶಾಂತಿ ಅವರ ಸ್ಮರಣಾರ್ಥ ಸುಮಾರು ಐದು ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಸಭಾಂಗಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಲಾಗುವುದು ಎಂದರು.

ಸಂಜೆ 4 ಗಂಟೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಲಿದ್ದು,ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಸರಪಾಡಿ ಗ್ರಾಪಂ ಅಧ್ಯಕ್ಷೆ ಲೀಲಾವತಿ,ಮಾಜಿ ಸಚಿವ ನಾಗರಾಜ ಶೆಟ್ಟಿ ಮೊದಲಾದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದ ಅವರು,ಈ ಸಂದರ್ಭ ಸಂಘದ ಏಳಿಗೆಗೆ ಶ್ರಮಿಸಿದ ಮಾಜಿ ಕಾರ್ಯದರ್ಶಿ, ಹಿರಿಯರಾದ ಜಾರಪ್ಪ ಶೆಟ್ಟಿ ಖಂಡಿಗ ಅವರನ್ನು ಸನ್ಮಾನಿಸಲಾಗುವುದು ಮತ್ತು ನಟ ರವಿ ಸಾಲಿಯಾನ್,ರಾಷ್ಟ್ರಮಟ್ಟದ ಕಬಡ್ಡಿ ಪಟು ಸುಶ್ಮಿತಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ಈ ಪಂದ್ಯಾಟದಲ್ಲಿ ಅಮೆಚೂರು ಎಸೋಸಿಯೇಶನ್ ನಲ್ಲಿ ನೋಂದಾಯಿಸಲ್ಪಟ್ಟ ಬಲಿಷ್ಠ 24 ತಂಡಗಳು ಭಾಗವಹಿಸಲಿದ್ದು,ಅಮೆಚೂರು ಎಸೋಸಿಯೇಶನ್ ಕಬಡ್ಡಿ ಪಂದ್ಯಾಟದಲ್ಲಿ ತಂದಿರುವ ಕೆಲ ಬದಲಾವಣೆಗಳು ಈ ಪಂದ್ಯಾಟದಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.

ಜಾಹೀರಾತು

ಗ್ರಾಮೀಣ ಪ್ರದೇಶದ ಸರಪಾಡಿಯಲ್ಲಿ 1956ರಲ್ಲಿ ಸ್ಥಾಪನೆಯಾದ ಯುವಕಮಂಡಲಕ್ಕೆ ಪ್ರಸ್ತುತ 62 ನೇ ವರ್ಷದ ಸಂಭ್ರಮದಲ್ಲಿದೆ.ಯುವಕ ಮಂಡಲದಿಂದ ಕಬಡ್ಡಿ ಪಂದ್ಯಾಟವಲ್ಲದೆ ವೈದ್ಯಕೀಯ, ರಕ್ತದಾನ ನಾಯಕತ್ವದಂತಹ ಶಿಬಿರಗಳು,ಭಜನೆ ಸಹಿತ ಧಾರ್ಮಿಕ ,ಸಾಮಾಜಿಕ ಚಟುವಟಿಕೆಯಂತ ಜನಪರ ಕಾರ್ಯಕ್ರಮಗಳಲ್ಲಿಯು ಸಕ್ರಿಯವಾಗಿ ತೊಡಗಿಸಿಕೊಂಡು ಜಿಲ್ಲೆಗೆ ಮಾದರಿ ಯುವಕ ಮಂಡಲವಾಗಿ ಗುರುತಿಸಿದೆ ಎಂದು ವಿವರಿಸಿದರು.

ಸರಪಾಡಿಗೆ ಸರಕಾರಿ ಬಸ್ ಬರುವ ನಿಟ್ಟಿನಲ್ಲಿನಡೆದ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದ ಯುವಕ ಮಂಡಲ ಹಲವಾರು ಜನಪರ ಹೋರಾಟದಲ್ಲೂ ಭಾಗವಹಿಸಿ ಗಮನಸೆಳೆದಿದೆ ಎಂದ ಅವರು ಎಎಂಆರ್ ಜಲವಿದ್ಯುತ್ ಯೋಜನೆಯಿಂದ ಮುಳುಗಡೆಯಾದ ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಧೋರಣೆಯ ಬಗ್ಗೆ ಈಗಾಗಲೇ ಸಂಸ್ಥೆಯ ಗಮನಸೆಳೆದಿದ್ದು,ಈ ಕುರಿತು ಸಂಸ್ಥೆ ಸಕರಾತ್ಮಕವಾಗಿ ಸ್ಪಂದಿಸದಿದ್ದರೆ ಯುವಕ ಮಂಡಲದ ವತಿಯಿಂದ ತೀವ್ರ ಸ್ವರೂಪದ ಹೋರಾಟ ನಡೆಸಲು ಯೋಚಿಸಲಾಗಿದೆ ಎಂದ ಅವರು ಪೆರ್ಲ-ಬೀಯಾಪಾದೆ‌ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ದಿ ಪಡಿಸುವ ನಿಟ್ಟೊನಲ್ಲೂ ಯುವಕಮಂಡಲ ಸಂಸದರು,ಶಾಸಕರ ಸಹಿತ ಸಂಬಂಧಿಸಿದವರ ಗಮನವನ್ನು ಸೆಳೆದಿದೆ‌ಎಂದರು.

ಸುದ್ದಿಗೋಷ್ಠಿಯಲ್ಲಿ ಯುವಕ ಮಂಡಲದ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ,ಪದಾಧಿಕಾರಿಗಳಾದ ಪ್ರಕಾಶ್ಚಂದ್ರ ಆಳ್ವ,ಕಿಶನ್ ಸರಪಾಡಿ ಅವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ನಾಳೆ ಸಂಜೆ ಸರಪಾಡಿಯಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*