ಮಂಗಳೂರು ಟೌನ್ ಹಾಲ್ ನಲ್ಲಿ ಸೆ.1ರಂದು ಭ್ರಾಮರೀ ಯಕ್ಷಮಿತ್ರರಿಂದ ಯಕ್ಷಗಾನ, ಪ್ರಶಸ್ತಿ ಪ್ರದಾನ

  • ಉಚಿತ ಯಕ್ಷಗಾನ
  • ಯಕ್ಷಮಣಿ ಪ್ರಶಸ್ತಿ ಪ್ರಧಾನ
  • ಇಬ್ಬರು ನೇಪಥ್ಯ ಕಲಾವಿದರಿಗೆ ಸನ್ಮಾನ

ಚಿತ್ರ: ಅಶ್ವಿತ್ ಶೆಟ್ಟಿ

ವಾಟ್ಸಾಪ್ ಗುಂಪೊಂದು ವ್ಯವಸ್ಥಿತವಾಗಿ ಯಕ್ಷಗಾನ ಆಸಕ್ತರನ್ನು ಸಂಘಟಿಸಿ,ಮಳೆಗಾಲದಲ್ಲಿ ಪರಂಪರೆಯ ಮೆಲುಕನ್ನು ತೆಂಕುತಿಟ್ಟಿನ ಯಕ್ಷಗಾನಪ್ರಿಯರಿಗೆ ಒದಗಿಸುವ ಕಾರ್ಯಕ್ಕೆ ಮೂರನೇ ವರ್ಷದ ಸಂಭ್ರಮ.ವಿನಯಕೃಷ್ಣ ಕುರ್ನಾಡು ಸ್ನೇಹಿತರೊಂದಿಗೆ ಸ್ಥಾಪಿಸಿದ ವಾಟ್ಸಾಪ್ ಗುಂಪಾದ ಭ್ರಾಮರಿ ಯಕ್ಷಮಿತ್ರರು ಇಂದು ಮೂರನೇ ವರ್ಷದ ಯಕ್ಷವೈಭವಕ್ಕೆ ಸಜ್ಜಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಳಿಕ ಸತ್ಯ ಹರಿಶ್ಚಂದ್ರ, ಶೂರ್ಪನಖಾ ವಿವಾಹ ಮತ್ತು ಮಕರಾಕ್ಷ ಕಾಳಗ ಪ್ರದರ್ಶನ ನಡೆಯುವುದು.

ಸೆಪ್ಟೆಂಬರ್ 1ರಂದು ರಾತ್ರಿ 7.30ರಿಂದ ಮಂಗಳೂರು ಪುರಭವನದಲ್ಲಿ ರಾತ್ರಿ7.30 ರಿಂದ ನಡೆಯುವ ಕಾರ್ಯಕ್ರಮದ ವಿವರ ಹೀಗಿದೆ. ಹಿರಿಯ ಹಿಮ್ಮೇಳ ಕಲಾವಿದ ಮಿಜಾರು ಮೋಹನ ಶೆಟ್ಟಿಗಾರ್ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಪ್ರದಾನ , ಇಬ್ಬರು ಯಕ್ಷರಂಗದ ನೇಪಥ್ಯ  ಕಲಾವಿದರಿಗೆ ಸನ್ಮಾನ. ಸನ್ಮಾನಿತರು: ಬಿ.ಐತಪ್ಪ ಟೈಲರ್ ಮತ್ತು ರಘು ಶೆಟ್ಟಿ ನಾಳ. ಅಲ್ಲದೆ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರಿಗೆ  ಗೌರವ ಸನ್ಮಾನ. ಅದಾದ ಬಳಿಕ ಯಕ್ಷವೈಭವ. ಇಡೀ ರಾತ್ರಿ ನಡೆಯಲಿದೆ.

ಜಾಹೀರಾತು

ಮಿಜಾರು ಮೋಹನ ಶೆಟ್ಟಿಗಾರ್:

ಯಕ್ಷಗಾನ ರಂಗದಲ್ಲಿ ಹಿರಿಯ ಹಿಮ್ಮೇಳ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಮೋಹನ ಶೆಟ್ಟಿಗಾರ್ ಅವರು ನಾರಾಯಣ ಶೆಟ್ಟಿಗಾರ್ ಮತ್ತು ಗೌರಮ್ಮ ದಂಪತಿಯ ಪುತ್ರ. ವೇಷಧಾರಿಯಾದ ತಂದೆ ಮತ್ತು ಹಿಮ್ಮೇಳವಾದಕರಾಗಿದ್ದ ಅಜ್ಜ ಬಾಬು ಶೆಟ್ಟಿಗಾರ್ ಅವರಿಂದ ಪ್ರೇರಣೆಗೊಂಡು ಯಕ್ಷಗಾನರಂಗದಲ್ಲಿ ಆಸಕ್ತಿ ಬೆಳೆಸಿದವರು ಮೋಹನ ಶೆಟ್ಟಿಗಾರ್.

ಜಾಹೀರಾತು

ಗುರುಪುರ ಅಣ್ಣಿಭಟ್ಟರಲ್ಲಿ ಚೆಂಡೆ, ಮದ್ದಳೆ ಕಲಿತು, 15ರ ಹರೆಯದಲ್ಲೇ ಯಕ್ಷಗಾನ ತಿರುಗಾಟ ಆರಂಭಿಸಿದರು. ದಿ.ನಿಡ್ಲೆ ನರಸಿಂಹ ಭಟ್ಟರ ಮಾರ್ಗದರ್ಶನದಲ್ಲಿ ಬೆಳೆದುಬಂದರು. ಕರ್ನಾಟಕ ಮೇಳದಲ್ಲಿ ದಾಮೋದರ ಮಂಡೆಚ್ಚ, ದಿನೇಶ್ ಅಮ್ಮಣ್ಣಾಯ ಸಹಿತ ಹಲವು ಭಾಗವತರೊಂದಿಗೆ ಹಿಮ್ಮೇಳದಲ್ಲಿ ಪಾಲ್ಗೊಂಡ ಶೆಟ್ಟಿಗಾರರು ಕಟೀಲು ಮೇಳದಲ್ಲಿ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ, ಮೂರು ಮಕ್ಕಳೊಂದಿಗೆ ಮಿಜಾರು ನೀರ್ಕೆರೆಯಲ್ಲಿ ವಾಸ.

ರಘು ಶೆಟ್ಟಿ ನಾಳ:

ಜಾಹೀರಾತು

ಓಬಯ ಶೆಟ್ಟಿ ಮತ್ತು ದೇವಕಿ ಶೆಟ್ಟಿ ದಂಪತಿಯ ಪುತ್ರರಾಗಿ ಜನಿಸಿದ ರಘು ಶೆಟ್ಟಿ ನಾಳ ಶಾಲೆಯಲ್ಲಿ ಶಿಕ್ಷಣ ಪಡೆದು 16ನೇ ವರ್ಷದಿಂದ ಯಕ್ಷಸೇವೆಯಲ್ಲಿ ನಿರತರು. ಮೂರು ವರ್ಷ ಕರ್ನಾಟಕ ಮೇಳ, 40 ವರ್ಷಗಳಿಂದ ಕಟೀಲು ಮೇಳದಲ್ಲಿ ರಂಗಸಹಾಯಕರಾಗಿ ದುಡಿಯುತ್ತಿದ್ದಾರೆ. ಕಲಾವಿದರು ಬದಲಾಗುತ್ತಾರೆ, ಆದರೆ ರಂಗಸಹಾಯಕರು ಎಲ್ಲ ಬದಲಾವಣೆಗಳಿಗೂ ಸಾಕ್ಷಿಯಾಗುತ್ತಾರೆ ಎಂಬ ಮಾತಿನಂತೆ ರಘು ಶೆಟ್ಟರು ಹಲವು ಕಲಾವಿದರ ಜೊತೆ ಕೆಲಸ ಮಾಡಿದ್ದಾರೆ. ಪತ್ನಿ, ಪುತ್ರ, ಪುತ್ರಿಯೊಂದಿಗೆ ಬೆಳ್ತಂಗಡಿ ತಾಲೂಕಿನ ನಾಳದಲ್ಲಿ ವಾಸಿಸುತ್ತಿದ್ದಾರೆ ರಘು ಶೆಟ್ಟಿ.

ಬಿ.ಐತಪ್ಪ ಟೈಲರ್

ಜಾಹೀರಾತು

ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಬೇತದ ಅಬ್ಬು ಮತ್ತು ಮುತ್ತು ಮೂಲ್ಯ ದಂಪತಿ ಪುತ್ರ ಐತಪ್ಪ ಟೈಲರ್, ಎರಡನೇ ತರಗತಿವರೆಗೆ ಓದಿದರೂ ಯಕ್ಷಗಾನದ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದವರು. ಕುರಿಯ ವಿಠಲಶಾಸ್ತ್ರಿಗಳ ಆಶೀರ್ವಾದದೊಂದಿಗೆ ಧರ್ಮಸ್ಥಳ ಮೇಳಕ್ಕೆ ಸೇರಿದ ಅವರು, ಎತ್ತಿನಗಾಡಿಯಲ್ಲಿ ಪಯಣಿಸಿ, ನಿತ್ಯ ವೇಷದಿಂದ ಆರಂಭಿಸಿ ದಿನಕ್ಕೆ 50 ಪೈಸೆ ವೇತನವನ್ನು ಆ ಕಾಲದಲ್ಲಿ ಪಡೆಯುತ್ತಿದ್ದರು. 10 ವರ್ಷಗಳ ತಿರುಗಾಟ ನಡೆಸಿದ ಬಳಿಕ ತಾಯಿ ಅನಾರೋಗ್ಯ ಹಿನ್ನೆಲೆಯಲ್ಲಿ ಮೇಳ ಬಿಟ್ಟರೂ ಬಳಿಕ ಹೊಲಿಗೆಯತ್ತ ಚಿತ್ತ ಹರಿಸಿದರು. ತೆಂಕು, ಬಡಗು ತಿಟ್ಟುಗಳ ಸಾಂಪ್ರದಾಯಿಕ, ಪೌರಾಣಿಕ, ಐತಿಹಾಸಿಕ ಸಹಿತ ಎಲ್ಲ ವಿಧದ ಪಾತ್ರಗಳಿಗೆ ಬೇಕಾಗುವ ವೇಷಭೂಷಣಗಳಿಗೆ ಅಳತೆಯ ನಿಖರತೆ, ವರ್ಣಗಳ ತ್ರಿವೇಣಿಕರಣದೊಂದಿಗೆ ರಚನೆ ಮಾಡುವುದು ಐತಪ್ಪ ಟೈಲರ್.

ಪ್ರಸಂಗದ ವಿವರ ಹೀಗಿದೆ.

ಜಾಹೀರಾತು

ರಾತ್ರಿ  2.30 ರವರೆಗೆ

?ಸತ್ಯ ಹರಿಶ್ಚಂದ್ರ

ಭಾಗವತರು

ಜಾಹೀರಾತು

▶ಪಟ್ಲ ಸತೀಶ್ ಶೆಟ್ಟಿ

▶ಪ್ರಪುಲ್ಲ ಚಂದ್ರ ನೆಲ್ಯಾಡಿ.

ಚೆಂಡೆ ಮದ್ದಳೆ

ಜಾಹೀರಾತು

▶ಪದ್ಮನಾಭ ಉಪಾದ್ಯ

▶ಮುರಾರಿ ಕಡಂಬಳಿತ್ತಾಯ

▶ಗುರುಪ್ರಸಾದ್ ಬೊಳಿಂಜಡ್ಕ

ಜಾಹೀರಾತು

ಚಕ್ರತಾಳ

▶ರಾಜೇಂದ್ರಕೃಷ್ಣ

ಮುಮ್ಮೇಳ

ಜಾಹೀರಾತು

▶ಹರಿಶ್ಚಂದ್ರ- ಪೆರ್ಮುದೆ ಜಯಪ್ರಕಾಶ್ ಶೆಟ್ಟಿ

▶ಸಖ – ದಿನೇಶ್ ಕೋಡಪದವು

▶ವಿಶ್ವಾಮಿತ್ರ- ರಾಧಾಕೃಷ್ಣ ನಾವಡ ಮಧೂರು

ಜಾಹೀರಾತು

▶ಮಾತಂಗ ಕನ್ಯೆಯರು – ಅಕ್ಷಯ್ ಮಾರ್ನಾಡ್,ರಕ್ಷಿತ್ ಪಡ್ರೆ

▶ಚಂದ್ರಮತಿ – ಶಶಿಕಾಂತ್ ಶೆಟ್ಟಿ ಕಾರ್ಕಳ

▶ಲೋಹಿತಾಶ್ವ – ಲೋಕೇಶ್ ಮುಚ್ಚೂರು

ಜಾಹೀರಾತು

▶ನಕ್ಷತ್ರಿಕ – ಸೀತಾರಾಮ್ ಕುಮಾರ್ ಕಟೀಲ್

▶ಕೌಕ ಭಟ್ಟ- ಅರುಣ್ ಜಾರ್ಕಳ

▶ಹೆಂಡತಿ – ರಾಜೇಶ್ ನಿಟ್ಟೆ

ಜಾಹೀರಾತು

▶ವೀರಬಾಹು – ಉಮೇಶ್ ಶೆಟ್ಟಿ ಉಬರಡ್ಕ

▶ವಟುಗಳು – ಚಂದ್ರಕಾಂತ ,ಅಕ್ಷಯ,ಮಧು

▶ಈಶ್ವರ – ವಾದಿರಾಜ ಕಲ್ಲೂರಾಯ

ಜಾಹೀರಾತು

➖➖➖➖➖➖➖➖➖➖

2.30 ರಿಂದ 4.30

? ಶೂರ್ಪನಖಾ ವಿವಾಹ

ಜಾಹೀರಾತು

ಹಿಮ್ಮೇಳ

ಭಾಗವತರು

▶ರಾಮಕೃಷ್ಣ ಮಯ್ಯ ಸಿರಿಬಾಗಿಲು

ಜಾಹೀರಾತು

ಚೆಂಡೆ ಮದ್ದಳೆ

▶ಚೈತನ್ಯ ಕೃಷ್ಣ ಪದ್ಯಾಣ

▶ಗಣೇಶ್ ಭಟ್ ನೆಕ್ಕರಮೂಲೆ

ಜಾಹೀರಾತು

ಮುಮ್ಮೇಳ

▶ರಾವಣ- ಹರಿನಾರಾಯಣ ಭಟ್ ಎಡನೀರು

▶ಶೂರ್ಪನಖಿ ‌-ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್

ಜಾಹೀರಾತು

▶ಮಾಯಾ ಶೂರ್ಪನಖಿ -ಸುಖೇಶ್ ಮಡಾಮಕ್ಕಿ

▶ಪ್ರಹಸ್ತ- ಉಜಿರೆ ನಾರಾಯಣ

▶ವಿದ್ಯುಜ್ಜಿಹ್ವ- ಪ್ರಜ್ವಲ್ ಕುಮಾರ್ ಗುರುವಾಯನಕೆರೆ

ಜಾಹೀರಾತು

▶ದಿಬ್ಬಣಿಗರು – ಚಂದ್ರಕಾಂತ,ಅಕ್ಷಯ, ಮಧು

➖➖➖➖➖➖➖➖➖➖

4.30 ರಿಂದ 6.30

ಜಾಹೀರಾತು

? ಮಕರಾಕ್ಷ ಕಾಳಗ

ಹಿಮ್ಮೇಳ

ದ್ವಂದ್ವ ಭಾಗವತಿಕೆ

ಜಾಹೀರಾತು

ಭಾಗವತರು

▶ಬಲಿಪ ಪ್ರಸಾದ್ ಭಟ್ ಮತ್ತು ಪುಂಡಿಕಾಯಿ ಗೋಪಾಲಕೃಷ್ಣ ಭಟ್

ಚೆಂಡೆ ( ದ್ವಂದ್ವ)

ಜಾಹೀರಾತು

▶ಲಕ್ಮೀನಾರಾಯಣ ಅಡೂರು ಮತ್ತು ಅಡೂರು ಗಣೇಶ್ ರಾವ್

ಮದ್ದಳೆ

▶ಗಣೇಶ್ ಭಟ್ ನೆಕ್ಕರಮೂಲೆ

ಜಾಹೀರಾತು

ಮುಮ್ಮೇಳ

▶ಶ್ರೀರಾಮ – ದಿನೇಶ್ ಶೆಟ್ಟಿ ಕಾವಳಕಟ್ಟೆ

▶ಸುಗ್ರೀವ – ರಾಹುಲ್ ಶೆಟ್ಟಿ ಕುಡ್ಲ

ಜಾಹೀರಾತು

▶ಹನೂಮಂತ – ವೆಂಕಟೇಶ್ ಕಲ್ಲುಗುಂಡಿ

▶ಲಕ್ಷ್ಮಣ – ರಾಜೇಶ್ ಪುತ್ತಿಗೆ

▶ವಿಭೀಷಣ – ಕಿಶೋರ್ ಕೊಮ್ಮೆ

ಜಾಹೀರಾತು

▶ಅಂಗದ – ಲೋಕೇಶ್ ಮುಚ್ಚೂರು

▶ರಾವಣ – ಬಾಲಕೃಷ್ಣ ಮಿಜಾರ್

▶ದೂತ -ದಿನೇಶ್ ಕೋಡಪದವು

ಜಾಹೀರಾತು

▶ಕುಂಭ – ದಿವಾಕರ ರೈ ಸಂಪಾಜೆ

▶ನಿಕುಂಭ – ಶಶಿಧರ ಕುಲಾಲ್ ಕನ್ಯಾನ

▶ಪವಿಜ್ವಾಲೆ- ಅಂಬಾಪ್ರಸಾದ್ ಪಾತಾಳ

ಜಾಹೀರಾತು

▶ಮಕರಾಕ್ಷ –  ಸುಬ್ರಾಯ ಹೊಳ್ಳ ಕಾಸರಗೋಡು, ಸಂತೋಷ್ ಮಾನ್ಯ

▶ಜಾಂಬವ – ಉಜಿರೆ ನಾರಾಯಣ.

▶ಸಂಯೋಜನೆ – ಮಾಧವ ಕೊಳತ್ತಮಜಲು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಂಗಳೂರು ಟೌನ್ ಹಾಲ್ ನಲ್ಲಿ ಸೆ.1ರಂದು ಭ್ರಾಮರೀ ಯಕ್ಷಮಿತ್ರರಿಂದ ಯಕ್ಷಗಾನ, ಪ್ರಶಸ್ತಿ ಪ್ರದಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*