ಅತ್ಯಾಚಾರಿಗೆ ಗಲ್ಲು ಶಿಕ್ಷೆ ಆಗ್ರಹಿಸಿ ಸಿಎಫ್ಐನಿಂದ ಪ್ಲೇ-ಕಾರ್ಡ್ ಪ್ರದರ್ಶನ

 ಜಮ್ಮು ಕಾಶ್ಮೀರದ ಕಟ್ವಾ ಜಿಲ್ಲೆಯಲ್ಲಿ ಎಂಟರ ಹರೆಯದ ಆಸೀಫಾಳ ಅತ್ಯಾಚಾರ ಮತ್ತು ಬರ್ಬರವಾಗಿ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಹಾಗೂ ಊನಾವೂ ಅತ್ಯಾಚಾರ ಪೀಡಿತೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳದ ಘಟಕದ ವತಿಯಿಂದ ತಾಲೂಕಿನ ವಿವಿಧೆಡೆ ಪ್ಲೇಕಾರ್ಡ್ ಪ್ರದರ್ಶನ ನಡೆಸಿತು.

ಅತ್ಯಾಚಾರಿಗಳ ವಿರುದ್ಧ ಪ್ರತಿಭಟನೆಯ ಭಾಗವಾಗಿ ಶುಕ್ರವಾರ ಜುಮಾ ನಮಾಝ್ ಬಳಿಕ ಮಿತ್ತಬೈಲ್ ಮಸೀದಿ, ಅಕ್ಕರಂಗಡಿ ಮಸೀದಿ, ಕಲ್ಲಡ್ಕ ಮಸೀದಿ ಹಾಗೂ ವಿಟ್ಲ ಮಸೀದಿ ಮುಂಭಾಗಳಲ್ಲಿ ಪ್ಲೇಕಾರ್ಡ್ ಪ್ರದರ್ಶನ ಮಾಡಿ, ನ್ಯಾಯಕ್ಕಾಗಿ ಒತ್ತಾಯಿಸಿತು.

ಸಂದರ್ಭದಲ್ಲಿ ಸಿಎಫ್ ಮುಖಂಡರಾದ ಅಶ್ವಾನ್ ಸಿದ್ದೀಕ್, ಸುಹಾನ್ ತುಂಬೆ, ರಾಝಿಕ್, ನಾಸಿರ್ ಮೆಲ್ಕಾರ್, ಜಾಬಿರ್ ಬಂಟ್ವಾಳ, ಸಲ್ಮಾನ್ ಬಂಟ್ವಾಳ, ರಶೀದ್ ಪುಣಚ, ಸಫ್ವಾನ್ ಪುಣಚ, ಸಹದ್ ಕಲ್ಲಡ್ಕ, ತಫ್ಸೀರ್ ಕೆ.ಸಿ.ರೋಡ್ ಮೊದಲಾದವರು ಉಪಸ್ಥಿತರಿದ್ದರು. 

Be the first to comment on "ಅತ್ಯಾಚಾರಿಗೆ ಗಲ್ಲು ಶಿಕ್ಷೆ ಆಗ್ರಹಿಸಿ ಸಿಎಫ್ಐನಿಂದ ಪ್ಲೇ-ಕಾರ್ಡ್ ಪ್ರದರ್ಶನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*