ಜೀವನರಥ ಎಳೆಯಬೇಕಾದರೆ ಧರ್ಮಮಾರ್ಗ ಅಗತ್ಯ: ಒಡಿಯೂರು ಶ್ರೀಗಳು

www.bantwalnews.com

  • ತುಳುನಾಡ್ದ ಜಾತ್ರೆ 2018 – ಶ್ರೀ ಒಡಿಯೂರು ರಥೋತ್ಸವ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಆಶೀರ್ವಚನ
  • ಪಕ್ಷಬೇಧ ಮರೆತು, ತುಳುವಿಗಾಗಿ ಮನವಿ: ನಳಿನ್ ಕುಮಾರ್ ಕಟೀಲ್

ಜಾಹೀರಾತು

ಜೀವನ ರಥವನ್ನು ಎಳೆಯಲು ಧರ್ಮ ಮಾರ್ಗದ ಅಗತ್ಯವಿದೆ. ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಶನಿವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಧರ್ಮ ಚಾವಡಿಯಲ್ಲಿ ನಡೆದ ತುಳುನಾಡ್ದ ಜಾತ್ರೆ 2018 – ಶ್ರೀ ಒಡಿಯೂರು ರಥೋತ್ಸವ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.ಆಧ್ಯಾತ್ಮ ಭವನ, ಗಿಡ ಮೂಲಿಕಾ ವನ ನಿರ್ಮಾಣದ ಮಹತ್ವದ ಯೋಜನೆ ಮುಂದಿನ ದಿನ ನಡೆಯಬೇಕಾಗಿದೆ. ದ್ವೇಷ ಎಂಬ ಗಾಯಕ್ಕೆ ಪ್ರೀತಿ ಎನ್ನುವ ಮುಲಾಮು ಹಚ್ಚಿದಾಗ ಗಾಯ ಶಮನವಾಗಬಹುದು ಎಂದರು.

ಸಾಧ್ವೀ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ ಜನರು ಆರ್ಥಿಕತೆಯೊಂದಿಗೆ ಪಾರಮಾರ್ಥಿಕವನ್ನು ಬೆಳೆಸಿಕೊಳ್ಳಬೇಕು. ಧರ್ಮದ ನೆಲೆಯಲ್ಲಿ ಸಾಗಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಿದರು.ಸಹಾಯ ಹಸ್ತ ವಿತರಣೆ ಮಾಡಿ ಕರ್ನಾಟಕ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಶ್ ಬಿ. ಅಡಿ ಮಾತನಾಡಿ ನಾಡಿನ ದೇಶದ ಅಭಿಮಾನ ಇದ್ದಾಗ ಎಲ್ಲರೂ ಒಟ್ಟಾಗುತ್ತಾರೆ. ಪರರಿಗೆ ತೊಂದರೆ ಮಾಡದಿರುವುದೇ ನಿಜವಾದ ಧರ್ಮ ಎಂದರು.

ಜಾಹೀರಾತು

ಸಂಸದರು, ಸಂತರ ಒಗ್ಗೂಡಿಸಿ ಪ್ರಧಾನಿಗೆ ಮನವಿ:

ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಮಠಗಳ ಕಾರ್ಯವನ್ನು ಸಮಾಜ ಮಾಡಬೇಕಾಗಿದ್ದು, ಮಠಗಳ ರಕ್ಷಣೆಗೆ ಸಮಾಜ ನಿಲ್ಲಬೇಕು. ಸರ್ಕಾರ ಮಾಡಬೇಕಾದ ನಶಿಸಿ ಹೋಗುವ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಒಡಿಯೂರು ಕ್ಷೇತ್ರ ಮಾಡುತ್ತಿದೆ. ತುಳು ಭಾಷೆ ಪರಿಚ್ಛೇಧಕ್ಕೆ ಸೇರಿಸಲು ಬೇಕಾದ ಕಾರ್ಯಗಖನ್ನು ಮಾಡುವ ಜತೆಗೆ ರಾಜ್ಯಮಟ್ಟದಿಂದ ಬರಬೇಕಾದ ಕಡತಗಳ ಕೆಲಸವನ್ನು ಮಾಡಲಾಗುವುದು. ರಾಜ್ಯಮಟ್ಟದಿಂದ ಬರಬೇಕಾದ 9 ಮಂದಿ ತುಳುವಿನ, 11 ಮಂದಿ ತುಳು ಬರುವ ಲೋಕ ಸಭಾ ಸದಸ್ಯರಿದ್ದು, ಪಕ್ಷ ಬಿಟ್ಟು ತುಳುವಿನ ಉಳಿವಿಗಾಗಿ ಪ್ರಯತ್ನಿಸುತ್ತೇವೆ. ಸಂತರನ್ನೆಲ್ಲರನ್ನು ಒಗ್ಗೂಡಿಸಿಕೊಂಡು ದೆಹಲಿಯಲ್ಲಿ ಪ್ರಧಾನಿಗಳಿಗೆ ಮನವಿ ಸಲ್ಲಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಜಾಹೀರಾತು

ಲೋಕಾಯುಕ್ತ ಡೆಪಿಟಿ ರಿಜಿಸ್ಟರ್ ಶಿವಪ್ಪ ಸಾಲೇಗಾರ್, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್, ವಾಶಿ ನವಿಮುಂಬೈ ಉದ್ಯಮಿ ಶಂಕರ ಶೆಟ್ಟಿ ಅಣ್ಣಾವರ, ವಿಟ್ಲ ಪುಷ್ಪಕ್ ಕ್ಲಿನಿಕ್‌ನ ಡಾ. ವಿ.ಕೆ. ಹೆಗ್ಡೆ, ನೋಟರಿ ಮತ್ತು ನ್ಯಾಯವಾದಿ ಜಯರಾಮ ರೈ, ಸ್ವಾಗತ ಸಮಿತಿಯ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಜಯಂತ ಜೆ ಕೋಟ್ಯಾನ್, ಕೃಷ್ಣ ಎಲ್. ಶೆಟ್ಟಿ ಚೆಂಬೂರು ಮುಂಬೈ, ಸಿದ್ದರಾಮಪ್ಪ ದಾವಣಗೆರೆ, ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು ಪುಣೆ, ಸರ್ವಾಣಿ ಪಿ ಶೆಟ್ಟಿ ಮಂಗಳೂರು, ರೇವತಿ ವಿ. ಶೆಟ್ಟಿ ಚೆಂಬೂರು, ಸುಮಾ ರಾಜಶೇಖರ್ ದಾವಣಗೆರೆ, ಅಜಿತ್ ಕುಮಾರ್ ಪಂದಳಮ್, ಆರ್ಥಿಕ ಸಮಿತಿ ಸದಸ್ಯ ಎ. ಅಶೋಕ್ ಕುಮಾರ್ ಬಿಜೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಸುರೇಶ್ ರೈ, ಒಡಿಯೂರು ತುಳುಕೂಟದ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.

ಒಡಿಯೂರು ವಿದ್ಯಾ ಪೀಠದ ಶಿಕ್ಷಕಿ ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಪ್ರಕಾಶನದ ಬಂಧು ಯಶವಂತ ವಿಟ್ಲ ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬಂಟ್ವಾಳ ಮೇಲ್ವಿಚಾರಕ ಸದಾಶಿವ ಅಳಿಕೆ ವಂದಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಟಿ. ಕೊಟ್ಟಾರಿ, ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ ಕಾರ್ಯಕ್ರಮ ನಿರೂಪಿಸಿದರು.

ಮಲಾರು ಜಯರಾಮ ರೈ, ಎಚ್. ಕೆ. ಪುರುಷೋತ್ತಮ್ ಅವರು ಶ್ರೀ ಗುರುದೇವನಂದ ಸ್ವಾಮೀಜಿ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ತುಳು ಭಾಷೆಯನ್ನು ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಠರಾವನ್ನು ಹಸ್ತಾಂತರಿಸಿದರು.

ಜಾಹೀರಾತು

43ಮಂದಿಗೆ 3ಲಕ್ಷದ 39ಸಾವಿರ ಮೊತ್ತದ ಸಹಾಯ ಹಸ್ತವನ್ನು ವಿತರಿಸಲಾಯಿತು. ವೇ. ಮೂ. ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಜೀವನರಥ ಎಳೆಯಬೇಕಾದರೆ ಧರ್ಮಮಾರ್ಗ ಅಗತ್ಯ: ಒಡಿಯೂರು ಶ್ರೀಗಳು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*