ಬಂಟ್ವಾಳ ಪರಿವರ್ತನೆಗೆ ಬಿಜೆಪಿ ನಡಿಗೆ – 14ರಿಂದ 26ವರೆಗೆ ಗ್ರಾಮಭೇಟಿ

www.bantwalnews.com

ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿ ನೇತೃತ್ವದಲ್ಲಿ ಜನವರಿ 14ರಿಂದ 26ವರೆಗೆ ಪರಿವರ್ತನೆಗೆ ನಮ್ಮ ನಡಿಗೆ ಪರಿಕಲ್ಪನೆಯಡಿ ಬಂಟ್ವಾಳ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ ಏರ್ಪಡಿಸಲಾಗಿದೆ.


ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆತರಲು ಹಾಗೂ ಬಂಟ್ವಾಳ ಕ್ಷೇತ್ರವನ್ನುಕಾಂಗ್ರೆಸ್ ಮುಕ್ತಗೊಳಿಸುವ ಸಲುವಾಗಿ ಈ ನಡಿಗೆ ಎಂದು ಬಿಜೆಪಿ ಬಂಟ್ವಾಳ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

14ರಂದು ಅರಳದಲ್ಲಿ ಮಧ್ಯಾಹ್ನ 2 ಗಂಟೆಗೆ ಜಾಥಾಕ್ಕೆ ಸಂಸದ ನಳಿನ್ ಕುಮಾರ್‌ ಕಟೀಲ್ ಚಾಲನೆ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಉದ್ಫಾಟನಾ ಸಭೆ ನಡೆಯಲಿದೆ. ಈ ಸಂದರ್ಭ ರಾಜ್ಯ ಮತ್ತು ಜಿಲ್ಲೆಯ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಬಳಿಕ 26ವರೆಗೆ ಕ್ಷೇತ್ರದ 59 ಗ್ರಾಮಗಳಿಗೆ 12 ದಿನಗಳ ಕಾಲ ಜಾಥಾ ಸಂಚರಿಸಲಿದ್ದು, ಪ್ರತಿದಿನವೂ ಸಂಜೆ ಸಭಾಕಾರ್ಯಕ್ರಮ ನಡೆಯಲಿದೆ.

ಜನವರಿ 26ರ ಸಂಜೆ 3 ಗಂಟೆಗೆ ಬಿ.ಸಿ.ರೋಡಿನಲ್ಲಿ ಪಾದಯಾತ್ರೆಯ ಸಮಾರೋಪ ನಡೆಯಲಿದೆ.ರಾಜ್ಯದ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅಥವಾ ಪ್ರಮುಖ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಜಾಥಾ ಹೀಗೆ ಸಂಚರಿಸಲಿದೆ..

 • 14 – ಅರಳದಿಂದ ಹೊರಟು ಕರ್ಪೆ
 • 15 – ಕರ್ಪೆಯಿಂದ ಹೊರಟು ಸಂಗಬೆಟ್ಟು, ಎಲಿಯನಡುಗೋಡು, ಕುಕ್ಕಿಪ್ಪಾಡಿ, ರಾಯಿ
 • 16 – ರಾಯಿಯಿಂದ ಹೊರಟು ಕೊಯಿಲ, ಪಂಜಿಕಲ್ಲು, ಮೂಡನಡುಗೋಡು, ಬುಡೋಳಿ, ಪಿಲಿಮೊಗರು, ಚೆನ್ನೈತೋಡಿ, ಅಜ್ಜಿಬೆಟ್ಟು.
 • 17 – ವಗ್ಗದಿಂದ ಹೊರಟು ಕೊಡಂಬೆಟ್ಟು, ಕಾಡಬೆಟ್ಟು, ಕಾವಳಪಡೂರು, ಕಾವಳಮುಡೂರು, ಮೂಡುಪಡುಕೋಡಿ, ಇರ್ವತ್ತೂರು, ಪಿಲಾತಬೆಟ್ಟು
 • 18 – ಪುಂಜಾಲಕಟ್ಟೆಯಿಂದ ಹೊರಟು ಬಡಗಕಜೆಕಾರು, ತೆಂಕಕಜೆಕಾರು, ಉಳಿ, ಮಣಿನಾಲ್ಕೂರು, ದೇವಸ್ಯಮುಡೂರು
 • 19 – ಮುಲ್ಕಾಜೆಮಾಡದಿಂದ ಹೊರಟು ದೇವಸ್ಯಪಡೂರು, ನಾವೂರು, ಸರಪಾಡಿ
 • 20 – ಕಡೇಶ್ವಾಲ್ಯದಿಂದ ಹೊರಟು ಬರಿಮಾರು, ಪೆರಾಜೆ, ಮಾಣಿ, ನೆಟ್ಲಮುಡ್ನೂರು, ಅನಂತಾಡಿ, ವೀರಕಂಭ
 • 21 – ವೀರಕಂಭದಿಂದ ಹೊರಟು ವಿಟ್ಲಪಡ್ನೂರು, ಕೊಳ್ನಾಡು, ಕನ್ಯಾನ, ಕರೋಪಾಡಿ
 • 22 – ಸಾಲೆತ್ತೂರಿನಿಂದ ಹೊರಟು ಮಂಚಿ, ಬೋಳಂತೂರು, ಅಮ್ಟೂರು, ಗೋಳ್ತಮಜಲು
 • 23 – ಕಲ್ಲಡ್ಕದಿಂದ ಹೊರಟು ಬಾಳ್ತಿಲ, ಶಂಭೂರು, ನರಿಕೊಂಬು, ಪಾಣೆಮಂಗಳೂರು, ಸಜಿಪಮೂಡ, ಸಜಿಪಮುನ್ನೂರು.
 • 24 – ಬೆಂಜನಪದವಿನಿಂದ ಹೊರಟು ಕಳ್ಳಿಗೆ, ಅಮ್ಮುಂಜೆ, ಕರಿಯಂಗಳ
 • 25 – ಪೊಳಲಿಯಿಂದ ಹೊರಟು ಬಡಗಬೆಳ್ಳೂರು, ತೆಂಕಬೆಳ್ಳೂರು, ಕುರಿಯಾಳ, ಅಮ್ಟಾಡಿ
 • 26 – ಅಮ್ಟಾಡಿಯಿಂದ ಹೊರಟು ಬಂಟ್ವಾಳ ಕಸಬಾ, ಬಿ.ಮೂಡ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ರಾಜೇಶ್ ನಾಯಕ್ ಉಳಿಪ್ಪಾಡಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಪುರಸಭೆ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ಜಿಪಂ ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ಜಿಲ್ಲಾ ಎಸ್.ಸಿ ಎಸ್.ಟಿ. ಮೋರ್ಚಾ ಅಧ್ಯಕ್ಷ ದಿನೇಶ್‌ ಅಮ್ಟೂರು, ಪ್ರಮುಖರಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ದೇವಪ್ಪ ಪೂಜಾರಿ, ಸೀತಾರಾಮ ಪೂಜಾರಿ, ರಮಾನಾಥ ರಾಯಿ ಉಪಸ್ಥಿತರಿದ್ದರು.

Be the first to comment on "ಬಂಟ್ವಾಳ ಪರಿವರ್ತನೆಗೆ ಬಿಜೆಪಿ ನಡಿಗೆ – 14ರಿಂದ 26ವರೆಗೆ ಗ್ರಾಮಭೇಟಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*