ಹೊಸ ಮೇಳ, ಹೊಸನತದೊಂದಿಗೆ ಯಕ್ಷತಿರುಗಾಟ

www.bantwalnews.com SUNDAY SPEACIAL

ನವೆಂಬರ್ ಬಂದಿದೆ, ಮುಂದಿನ ಪತ್ತನಾಜೆವರೆಗಿನ ಯಕ್ಷಗಾನ ಮೇಳಗಳ ತಿರುಗಾಟ ಆರಂಭಗೊಂಡಿದೆ.

ಜಾಹೀರಾತು

ಚಿತ್ರಗಳ ಕೃಪೆ: ನಟೇಶ್ ವಿಟ್ಲ

ಕಾಲಮಿತಿಗೆ ಜನರು ಒಗ್ಗಿಕೊಂಡಿದ್ದಾರೆ, ಹಾಗೆಂದ ಮಾತ್ರಕ್ಕೆ ಇಡೀ ರಾತ್ರಿಯ ಆಟವನ್ನೂ ನೋಡುವವರಿದ್ದಾರೆ. ಅವರ ಸಂಖ್ಯೆ ವಿರಳವಾಗುತ್ತಿದೆ. ಇದರ ಜೊತೆಗೆ ತೆಂಕಿನಲ್ಲಿ ಎರಡು ಹೊಸ ಮೇಳಗಳು ತಿರುಗಾಟ ಆರಂಭಿಸುತ್ತಿವೆ. ಪ್ರೇಕ್ಷಕರ ಅಭಿರುಚಿಯೂ ಬದಲಾಗುತ್ತಿದೆ. ಹೊಸ ಸಾಧ್ಯತೆಗಳನ್ನು ಪ್ರೇಕ್ಷಕನೂ ಒಪ್ಪಿಕೊಳ್ಳುತ್ತಿದ್ದಾನೆ. ಹೀಗಾಗಿ ಮೇಳಗಳ ರಾತ್ರಿ ಪ್ರದರ್ಶನದ ಜೊತೆಗೆ ಹಗಲು ವಿಶೇಷ ಸಂದರ್ಭಗಳಲ್ಲಿ ನಡೆಯುವ ಗಾನ, ನೃತ್ಯ ವೈಭವಗಳಿಗೂ ಬೇಡಿಕೆ ಇದೆ.

ಕಳೆದ ನಾಲ್ಕೈದು ವರ್ಷಗಳಿಂದ ತುಳು ಯಕ್ಷಗಾನ ಮತ್ತೆ ರೈಸುತ್ತಿದೆ. ಈ ಬಾರಿ ಬಪ್ಪನಾಡು ಮೇಳ ಬಾಲೆ ಭಗವಂತನ ಎಂಬ ನೂತನ ತುಳು ಪ್ರಸಂಗದೊಂದಿಗೆ ತಿರುಗಾಟ ಆರಂಭಿಸುತ್ತಿದ್ದರೆ, ಬಾಚಕೆರೆ ಮೇಳ ಛತ್ರಪತಿ ಶಿವಾಜಿ, ಕಾಡಕನ್ನಿಕೆ, ಬಂಡಿಯೇರಿ ಪಿಲಿಚಂಡಿ ಎಂಬ ಪ್ರಸಂಗಗಳೊಂದಿಗ ತಿರುಗಾಟ ನಡೆಸಲಿದೆ. ದೇವೆರೆ ತೀರ್ಪು ಮತ್ತು ಪದ್ಮಪಲ್ಲವಿ ಎಂಬ ಎರಡು ತುಳು ಪ್ರಸಂಗಗಳನ್ನು ಸಸಿಹಿತ್ಲು ಮೇಳ ನೀಡಲಿದೆ. ಬೆಂಕಿನಾಥೇಶ್ವರ ಮೇಳ ಮಹಾದೇವಿ ಮಾಂಕಾಳಿ, ಬಂಗಾರ್ ತುಲಾಭಾರ ಎಂಬ ಪ್ರಸಂಗ ಪ್ರಸ್ತುತಪಡಿಸಲಿದೆ. ಮಂಗಳಾದೇವಿ ಮೇಳ ಸ್ವರ್ಣ ಸಂಭ್ರಮ, ಮೇಘ ಮಾಣಿಕ್ಯ, ಮಾಯದ ಗೆಜ್ಜೆ ಎಂಬ ನೂತನ ಪ್ರಸಂಗಗಳನ್ನು ಪ್ರದರ್ಶಿಸಲಿದೆ.

ಜಾಹೀರಾತು

ಈ ವರ್ಷದ ತಿರುಗಾಟದ ಹೈಲೈಟ್ಸ್ ಹೀಗಿದೆ.

ತೆಂಕಿನಲ್ಲಿ ಎರಡು ಹೊಸ ಮೇಳಗಳು – ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ದೇಂತಡ್ಕ ವನದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ

ಜಾಹೀರಾತು

ಹನುಮಗಿರಿ ಮೇಳ ನ.16ರಂದು ತಿರುಗಾಟ ಆರಂಭಿಸಲಿದೆ. ಭಾಗವತರಾಗಿ ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ ಮತ್ತು ವೇಷಧಾರಿಗಳಾಗಿ ಸಂಪಾಜೆ ಶೀನಪ್ಪ ರೈ, ಶಿವರಾಮ ಜೋಗಿ, ಎಂ.ಕೆ.ರಮೇಶಾಚಾರ್ಯ, ಸುಬ್ರಾಯ ಹೊಳ್ಳ, ವಾಸುದೇವ ರಂಗಾ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಮೊದಲಾದವರು ಮೇಳದಲ್ಲಿದ್ದಾರೆ. ಸಿಂಧೂರ ತೇಜ ಮತ್ತು ವೇದವತಿ ಈ ಮೇಳದ ನೂತನ ಪ್ರಸಂಗಗಳು.

ದೇಂತಡ್ಕ ವನದುರ್ಗಾಪರಮೇಶ್ವರಿ ಮೇಳದ ಭಾಗವತರಾಗಿ ಸೂರ್ಯನಾರಾಯಣ ಭಟ್, ತೆಂಕಬೈಲು ಮುರಳಿ ಶಾಸ್ತ್ರಿ . ವೇಷಧಾರಿಗಳಾಗಿ ಜೆಪ್ಪು ದಯಾನಂದ ಶೆಟ್ಟಿ, ರೆಂಜಾಳ ರಾಮಕೃಷ್ಣ ರಾವ್, ಬರಡ್ಕ ಉಮೇಶ್ ಶೆಟ್ಟಿ, ಉಂಡೆಮನೆ ಕೃಷ್ಣ ಭಟ್, ಕಡಬ ಶ್ರೀನಿವಾಸ, ಧನರಾಜ್ ಬಡೆಕ್ಕಿಲ, ಭಾಗಮಂಡಲ ಮಹಾಬಲೇಶ್ವರ ಭಟ್.  ಶ್ರೀ ವನದುರ್ಗ ಮಹಾತ್ಮೆ ಮತ್ತು ಮರಿತ ಮಾಣಿಕ್ಯ ಮೇಳದ ನೂತನ ಪ್ರಸಂಗಗಳು

ಜಾಹೀರಾತು

ಶ್ರೀಧರ್ಮಸ್ಥಳ ಮೇಳದ ಸೇವೆಯಾಟ ಆರಂಭಗೊಂಡಿದ್ದು, ನ.6ರಂದು ಬಿ.ಸಿ.ರೋಡಿನ ರಂಗೋಲಿಯಲ್ಲಿ ಶನೀಶ್ವರ ಮಹಾತ್ಮೆ ಪ್ರಸಂಗದೊಂದಿಗೆ ತಿರುಗಾಟವನ್ನು ಮುಂದುವರಿಸಲಿದೆ. ಪುತ್ತಿಗೆ ರಘುರಾಮ ಹೊಳ್ಳ ಮತ್ತು ಸಿರಿಬಾಗಿಲು ರಾಮಕೃಷ್ಣ ಮಯ್ಯ ಭಾಗವತಿಕೆ, ಕೆ.ಗೋವಿಂದ ಭಟ್, ಕುಂಬ್ಳೆ ಶ್ರೀಧರ ರಾವ್ ಸಹಿತ ಪ್ರಮುಖ ಕಲಾವಿದರ ಸಾಥ್ ಮೇಳಕ್ಕಿದೆ. ನ.13ರಂದು ಕಟೀಲು ಮೇಳದ ತಿರುಗಾಟ ಆರಂಭಗೊಳ್ಳುವುದು. ಪ್ರಮುಖ ಕಲಾವಿದರ ದಂಡೇ ಈ ಮೇಳಕ್ಕಿದೆ. ಪಟ್ಲ ಸತೀಶ ಶೆಟ್ಟಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಪ್ರಫುಲ್ಲಚಂದ್ರ, ಬೋಂದೆಲ್ ಸತೀಶ ಶೆಟ್ಟಿ, ಪದ್ಯಾಣ ಗೋವಿಂದ ಭಟ್ ಸಹಿತ ಪ್ರಮುಖ ಭಾಗವತರು, ಸುಣ್ಣಂಬಳ ವಿಶ್ವೇಶ್ವರ ಭಟ್ಟರಂಥ ಕಲಾವಿದರು ಮೇಳದಲ್ಲಿದ್ದಾರೆ. ಹಾಗೆಯೇ ದಿನೇಶ ಅಮ್ಮಣ್ಣಾಯ ಭಾಗವತರಾಗಿರುವ ಎಡನೀರು ಮೇಳವೂ ತಿರುಗಾಟಕ್ಕೆ ಸಿದ್ದವಾಗಿದೆ.

ಹಿರಿಯ ಕಲಾವಿದರ ಗಡಣ:

ಈ ಬಾರಿಯ ತಿರುಗಾಟದಲ್ಲಿಯೂ ಹಿರಿಯ ಕಲಾವಿದರ ಪ್ರದರ್ಶನವನ್ನು ನೋಡುವ ಅವಕಾಶ ಪ್ರೇಕ್ಷಕನಿಗೆ ಲಭಿಸಲಿದೆ. ಅರುವ ಕೊರಗಪ್ಪ ಶೆಟ್ಟಿ, ರಾಧಾಕೃಷ್ಣ ನಾವಡ ಮಧೂರು, ಸರಪಾಡಿ ಅಶೋಕ ಶೆಟ್ಟಿ , ಕೆ.ಎಚ್.ದಾಸಪ್ಪ ರೈ, ಪೂಕಳ ಲಕ್ಷ್ಮೀನಾರಾಯಣ ಭಟ್ಟ,  ಅಂಬಾಪ್ರಸಾದ ಪಾತಾಳ, ಸಂಜಯಕುಮಾರ್ ಗೋಣಿಬೀಡು, ಮಿಜಾರು ತಿಮ್ಮಪ್ಪ, ಪೆರುವಾಯಿ ನಾರಾಯಣ ಶೆಟ್ಟಿ ತುಳು ಪ್ರಸಂಗಗಳಿಗೆ ಜೀವ ತುಂಬಲಿರುವುದು ವಿಶೇಷ. ಕೆ.ಗೋವಿಂದ ಭಟ್, ಶಿವರಾಮ ಜೋಗಿ, ಸುಣ್ಣಂಬಳ ವಿಶ್ವೇಶ್ವರ ಭಟ್, ಸಂಪಾಜೆ ಶೀನಪ್ಪ ರೈ, ಕುಂಬಳೆ ಶ್ರೀಧರ ರಾವ್ ರಂಗಸ್ಥಳದಲ್ಲಿ ಪಾತ್ರ ನಿರ್ವಹಿಸುವುದನ್ನು ನೋಡುವುದೇ ಖುಷಿ. ಅದರೊಂದಿಗೆ ನುರಿತ ಯುವ ಕಲಾವಿದರು, ಹವ್ಯಾಸಿ ಕಲಾವಿದರು ರಂಗಸ್ಥಳದ ರಂಗೇರಿಸಲಿದ್ದಾರೆ.

ಜಾಹೀರಾತು

ಯಕ್ಷಗಾನಂ ಗೆಲ್ಗೆ.

ಚಿತ್ರಗಳ ಕೃಪೆ: ನಟೇಶ್ ವಿಟ್ಲ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಹೊಸ ಮೇಳ, ಹೊಸನತದೊಂದಿಗೆ ಯಕ್ಷತಿರುಗಾಟ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*