PARALYSIS ನಿರ್ಲಕ್ಷ್ಯ ಮಾಡೋ ವಿಷ್ಯ ಅಲ್ಲ

by ಡಾ. ಮುರಲೀ ಮೋಹನ್ ಚೂಂತಾರು

www.bantwalnews.com

ಜಾಹೀರಾತು

ಪಾರ್ಶ್ವವಾಯು ನಮ್ಮ ಮೆದುಳಿಗೆ ಸಂಬಂಧಿಸಿದ ರೋಗವಾಗಿದೆ. ಆಂಗ್ಲಭಾಷೆಯಲ್ಲಿ ಪ್ಯಾರಾಲೈಸಿಸ್ ಎಂದೂ, ಶುದ್ಧ ಆಡು ಭಾಷೆಯಲ್ಲಿ ಲಕ್ವ ಎಂದೂ ಕರೆಯಲ್ಪಡುವ ಖಾಯಿಲೆಗೆ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ತುತ್ತಾಗುತ್ತಿರುವುದೇ ಆತಂಕದ ಸಂಗತಿ. ಮೊದಲೆಲ್ಲಾ ಒಂದು ಸಾವಿರದಲ್ಲಿ 20ರಿಂದ 30 ಮಂದಿ ರೋಗಕ್ಕೆ ತುತ್ತಾಗುತ್ತಿದ್ದರು. ಆದರೆ ಬದಲಾಗುತ್ತಿರುವ ಜೀವನಶೈಲಿ. ಆಹಾರ ಪದ್ಧತಿ ಮತ್ತು ಒತ್ತಡದ ಜೀವನದಿಂದಾಗಿ ಈಗೀಗ ಸಾವಿರದಲ್ಲಿ 40 ರಿಂದ 50 ಮಂದಿ ಲಕ್ವಕ್ಕೆ ತುತ್ತಾಗುತ್ತಿರುವುದು ಬಹಳ ದೌರ್ಭಾಗ್ಯದ ವಿಚಾರ.

ಜಾಹೀರಾತು

ಪಾರ್ಶ್ವವಾಯು ಖಾಯಿಲೆಗೆ ಯಾವುದೇ ವಯಸ್ಸು ಮತ್ತು ಲಿಂಗದ ಬೇಧವಿಲ್ಲದೆ, ಎಲ್ಲಾ ವಯಸ್ಸಿನಲ್ಲಿ ಪುರುಷ ಮತ್ತು ಮಹಿಳೆಯರಲ್ಲಿ ಸಮಾನವಾಗಿ ಕಾಣಿಸಿಕೊಳ್ಳಬಹುದು. ಮೆದುಳು ನಮ್ಮ ದೇಹದ ಅತೀ ಪ್ರಾಮುಖ್ಯವಾದ ಅಂಗ. ಇದೊಂದು ರೀತಿಯ ಕಂಟ್ರೋಲ್ ರೂಮ್ ಇದ್ದಂತೆಯೇ. ನಮ್ಮ ದೇಹದ ಎಲ್ಲಾ ನರಮಂಡಲದ ಕೇಂದ್ರಸ್ಥಾನ. ಮೆದುಳು ತನ್ನ ನರ ಮಂಡಲಗಳ ಮುಖಾಂತರ ದೇಹದ ಎಲ್ಲಾ ಅಂಗಗಳ ಕಾರ್ಯವನ್ನು ನಿಯಂತ್ರಿಸುತ್ತದೆ.

ಮೆದುಳಿನ ಎಡಭಾಗವು ದೇಹದ ಬಲಭಾಗವನ್ನು ಮತ್ತು ಮೆದುಳಿನ ಬಲಭಾಗವು ದೇಹದ ಎಡಭಾಗವನ್ನು ನಿಯಂತ್ರಿಸುತ್ತದೆ. ನಮ್ಮ ಮೆದುಳಿಗೆ ನಿರಂತರವಾಗಿ ರಕ್ತದ ಪೂರೈಕೆ ಆಗಲೇಬೇಕು. ದಿನದ 24 ಗಂಟೆಗಳ ಕಾಲ ಹುಟ್ಟಿನಿಂದ ಸಾವಿನ ವರೆಗೆ ಹೃದಯಕ್ಕೆ ಸಮಾನವಾಗಿ ದುಡಿಯುವ ಅಂಗವೆಂದರೆ ಮೆದುಳು ಎಂದರೂ ತಪ್ಪಾಗಲಾರದು,

ಮೆದುಳಿನ ಮೂಲಭೂತವಾದ ಜೀವಕೋಶಗಳಾದನ್ಯೂರೋನ್ ವಿದ್ಯುತ್ನ್ನು ಉತ್ಪಾದಿಸಿ, ನರಮಂಡಲಗಳ ಮೂಲಕ ನಿರ್ಧಿಷ್ಟ ರೀತಿಯಲ್ಲಿ ದೇಹದ ಇತರ ಅಂಗಗಳಿಗೆ ಸಂದೇಶಗಳನ್ನು ಕಳುಹಿಸಿ, ದೇಹದ ಚಲನ ವಲನ ಮತ್ತು ಇನ್ನಿತರ ಜೈವಿಕ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ರೀತಿ ಕೆಲಸ ಮಾಡಲು ಮೆದುಳಿನ ನರಕೋಶಗಳಿಗೆ ನಿರಂತರವಾಗಿ ಆಮ್ಲಜನಕ ಮತ್ತು ಗ್ಲುಕೋಸ್ ಅತೀ ಅಗತ್ಯ.

ಜಾಹೀರಾತು

ಜಾಹೀರಾತು

 

ಇವುಗಳು ನಿರಂತರವಾದ ರಕ್ತದ ಮೂಲಕ ಪೂರೈಕೆಯಾಗುವ ಹಿಮೋಗ್ಲೋಬೀನ್ ರಕ್ತಕಣಗಳ ಮುಖಾಂತರ, ಜೀವಕೋಶಗಳಿಗೆ ಪೂರೈಕೆಯಾಗಿ, ಮೆದುಳು ಯಾವತ್ತೂ ಕೆಲಸ ನಿರ್ವಹಿಸುವಂತೆ ಮಾಡುತ್ತದೆ. ಮೂರು ನಿಮಿಷಕ್ಕಿಂತ ಜಾಸ್ತಿ ಮೆದುಳಿಗೆ ರಕ್ತದ ಪೂರೈಕೆ ನಿಂತಲ್ಲಿ, ಮೆದುಳಿನ ಜೀವಕೋಶಗಳಿಗೆ ಹಾನಿಯಾಗಿ ಶಾಶ್ವತವಾಗಿ ಅಂಗವೈಕಲ್ಯ ಉಂಟಾಗುವ ಸಾಧ್ಯತೆ ಇದೆ.

ಜಾಹೀರಾತು

ಒಟ್ಟಿನಲ್ಲಿ ನಿರಂತರವಾದ ರಕ್ತ ಪೂರೈಕೆಯಾಗದಿದ್ದಲ್ಲಿ ಮೆದುಳಿಗೆ ಹಾನಿಯಾಗಿ, ಜೀವಕೋಶಗಳು ಸತ್ತು ಹೋಗಿಲಕ್ವ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜಾಗತಿಕ ಅಂಕಿ ಅಂಶಗಳ ಪ್ರಕಾರ ಮಾರಣಾಂತಿಕ ರೋಗಗಳಲ್ಲಿ ಹೃದಯ ಸಂಬಂಧಿ ರೋಗಗಳು ಮತ್ತು ಕ್ಯಾನ್ಸರ್ ರೋಗದ ನಂತರದ ಸ್ಥಾನವನ್ನು ಲಕ್ವ ಪಡೆದಿದೆ. ಪಾರ್ಶ್ವವಾಯು ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ 29ರಂದು ವಿಶ್ವದಾದ್ಯಂತ ವಿಶ್ವ ಲಕ್ವ ದಿನ ಎಂದು ಆಚರಿಸಲಾಗುತ್ತಿದೆ.

2006ರಲ್ಲಿ ವಿಶ್ವ ಲಕ್ವ ಸಂಘಟನೆ ಆಚರಣೆಯನ್ನು ತಂದಿತು ಮತ್ತು 2010ರಲ್ಲಿ ವಿಶ್ವ ಸಂಸ್ಥೆ ಲಕ್ವವನ್ನು ಸಮಾಜದ ತುರ್ತು ರೋಗಗಳ ಪಟ್ಟಿಗೆ ಸೇರಿಸಿದೆ. ಪ್ರತಿ ವರ್ಷ ಏನಿಲ್ಲವೆಂದರೂ ವಿಶ್ವದಾದ್ಯಂತ 15 ಮಿಲಿಯನ್ ಮಂದಿ ರೋಗಕ್ಕೆ ತುತ್ತಾಗಿ, ಮಿಲಿಯನ್ ಮಂದಿ ಸಾವನ್ನಪ್ಪುತ್ತಾರೆ ಮತ್ತ 5 ಮಿಲಿಯನ್ ಮಂದಿ ಶಾಶ್ವತವಾಗಿ ಅಂಗವೈಕಲ್ಯವನ್ನು ಹೊಂದುತ್ತಾರೆ. ಪ್ರತಿ ಆರು ಸೆಕೆಂಡುಗಳಿಗೆಗೊಮ್ಮೆ ಹೊಸ ವ್ಯಕ್ತಿ ಲಕ್ವಕ್ಕೆ ತುತ್ತಾಗುತ್ತಾರೆ.

ಏನಿದು ಪಾರ್ಶ್ವವಾಯು?

ಜಾಹೀರಾತು

 ಪಾರ್ಶ್ವವಾಯು, ಲಕ್ವ ಅಥವಾ ಮೆದುಳಿನ ಆಘಾತ ಎಂದರೆ ಮೆದುಳಿನ ರಕ್ತನಾಳಕ್ಕೆ ತೊಂದರೆ ಉಂಟಾಗಿ, ಮೆದುಳಿನ ಯಾವುದೇ ಭಾಗಕ್ಕೆ ರಕ್ತ ಸಂಚಾರ ನಿಂತು ಹೋಗಿ, ಮಿದುಳಿನ ರಕ್ತನಾಳಗಳು ತನ್ನಿಂತಾನೇ ಒಡೆದು, ರಕ್ತವು ನರತಂತುಗಳ ಮೇಲೆ ಚೆಲ್ಲಿ, ನರಕೋಶಗಳು ನಾಶವಾಗಿ, ದೇಹದ ನಿಯಂತ್ರಣ ಕಳೆದುಹೋಗುತ್ತದೆ. ರೀತಿಯ ಲಕ್ವ, ಅತೀ ಗಂಭೀರವಾದ ತುರ್ತು ಚಿಕಿತ್ಸೆಯ ಅಗತ್ಯವಿರುವ ದೇಹ ಸ್ಥಿತಿಯಾಗಿರುತ್ತದೆ. ಇಸ್ಕಿಮಿಕ್ ಪಾರ್ಶ್ವವಾಯು ಎಂದರೆ ಕಾರಣಾಂತರಗಳಿಂದ ಮೆದುಳಿಗೆ ರಕ್ತ ಪೂರೈಸುವ ರಕ್ತನಾಳಗಳು ಮುಚ್ಚಿಕೊಂಡು, ಸುಗಮ ರಕ್ತ ಸಂಚಲನೆಗೆ ಅಡ್ಡಿಯಾಗುತ್ತದೆ.

ರಕ್ತನಾಳದೊಳಗೆ ಅತಿಯಾದ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನ ಅಂಶಗಳು ಶೇಖರಣೆಗೊಂಡು ರಕ್ತನಾಳಗಳು ಮುಚ್ಚಿಕೊಂಡು ನರಕೋಶಗಳಿಗೆ ರಕ್ತಸಂಚಾರ ನಿಲ್ಲುತ್ತದೆ. ಒಟ್ಟಿನಲ್ಲಿ ನರಕೋಶಗಳಿಗೆ ಹಾನಿಯಾದಾಗ, ದೇಹದ ನಿಯಂತ್ರಣ ತಪ್ಪುತ್ತದೆ. ಪ್ರಕ್ರಿಯೆಯಿಂದ ನರತಂತುಗಳಿಂದ ನಿಯಂತ್ರಣಕ್ಕೊಳಪಟ್ಟಿರುವ ಸ್ನಾಯು ಖಂಡಗಳು, ಅಂಗಾಂಗಳು ತಾತ್ಕಾಲಿಕವಾಗಿ ಚಲನೆಯನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಮನುಷ್ಯನ ದೇಹದ ಒಂದು ಪಾರ್ಶ್ವದ ಅಂಗಗಳು ಬಲಹೀನವಾಗುತ್ತದೆ.

ಮೆದುಳಿಗೆ ಉಂಟಾದ ಆಘಾತದ ತೀವ್ರತೆಗೆ ಅನುಗುಣವಾಗಿ ದೇಹದ ಬಲಹೀನತೆ ಅವಲಂಬಿತವಾಗಿರುತ್ತದೆ. ಮೆದುಳಿನ ಹೆಚ್ಚಿನ ಜೀವಕೋಶಗಳು ಮತ್ತು ನರಕೋಶಗಳಿಗೆ ಹಾನಿಯಾಗಿದ್ದಲ್ಲಿ ದೇಹದ ಅಂಗವೈಕಲ್ಯತೆ ಜಾಸ್ತಿ ಇರುತ್ತದೆ ಮತ್ತು ಕಡಮೆ ನರಕೋಶಗಳಿಗೆ ಹಾನಿಯಾಗಿದ್ದಲ್ಲಿ ಅಂಗ ವೈಕಲ್ಯದ ಕಡಮೆ ಪ್ರಮಾಣದ್ದಾಗಿರುತ್ತದೆ.

ಜಾಹೀರಾತು

ಪಾರ್ಶ್ವವಾಯುವಿಗೆ ಕಾರಣಗಳೇನು?

  1. ಅಧಿಕ ರಕ್ತದೊತ್ತಡ, ನಿಯಂತ್ರಣವಿಲ್ಲದ ರಕ್ತದ ಒತ್ತಡ ಅತೀ ಮುಖ್ಯ ಕಾರಣವಾಗಿದ್ದು ಹೆಚ್ಚಿನ ಲಕ್ವಗಳಿಗೆ ಇದುವೇ ಪ್ರಾಮುಖ್ಯ ಕಾರಣವಾಗಿರುತ್ತದೆ.
  2. ನಿಯಂತ್ರಣವಿಲ್ಲದ ಮಧುಮೇಹ ಖಾಯಿಲೆ.
  3. ಧೂಮಪಾನ ಮತ್ತು ಅತಿಯಾದ ಆಲ್ಕೋಹಾಲ್ ಸೇವನೆ. (ಭಾರತದಲ್ಲಿ ಅತೀ ಪ್ರಾಮುಖ್ಯವಾದ ಕಾರಣ).
  4. ಅನುವಂಶೀಯತೆ, ವಂಶವಾಹಿನಿಗಳಲ್ಲಿ ಬರುವ ಸಾಧ್ಯತೆಯೂ ಇದೆ.
  5. ವಿಪರೀತ ಮಾನಸಿಕ ಒತ್ತಡ, ಕೆಲಸದ ಒತ್ತಡ.
  6. ಮೆದುಳಿಗೆ ಅಪಘಾತದಿಂದಾಗುವ ಏಟು, ಮೆದುಳು ಸಂಬಂಧಿ ರೋಗಗಳು.
  7. ವಯಸ್ಸಾದಂತೆ ರಕ್ತನಾಳಗಳೆಲ್ಲ ಗಡುಸಾಗುತ್ತದೆ ಮತ್ತು ಕಿರಿದಾಗುತ್ತದೆ. ವಯಸ್ಸಾದಂತೆ ರಕ್ತನಾಳಗಳು ಕುಗ್ಗಿಕೊಂಡು, ಕೊಬ್ಬು ಶೇಖರಣೆಗೊಂಡು, ಲಕ್ವದ ಸಾಧ್ಯತೆ ಹೆಚ್ಚಾಗುತ್ತದೆ.

ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳು:

  1. ದೇಹದ ಕೆಲವು ಭಾಗಗಳು ತಮ್ಮ ಸ್ವಾದೀನ ಕಳೆದುಕೊಂಡಂತೆ ಅನಿಸುವುದು. ದೇಹದ ಚಲನ ವಲನಗಳ ಮೇಲಿನ ಮೆದುಳಿನ ನಿಯಂತ್ರಣ ತಪ್ಪಿಹೋಗುವುದು.
  2. ಕಣ್ಣು ಮಂಜಾಗುವುದು.
  3. ಮಾತು ತೊದಲಾಗುವುದು, ಆಹಾರ ನುಂಗಲು ಕಷ್ಟವಾಗುವುದು.
  4. ದೇಹದ ಸಮತೋಲನ ತಪ್ಪುವುದು.
  5. ನಡೆದಾಡಲು ಕಷ್ಟವಾಗುವುದು.
  6. ಮೆದುಳಿನ ಸ್ಮರಣೆ ಶಕ್ತಿ ಕುಂದುವುದು, ಭಾವನೆಗಳ ಮೇಲೆ ನಿಯಂತ್ರಣ ಕಳೆದು ಹೋಗುವುದು ಇತ್ಯಾದಿ.

ಸಾಮಾನ್ಯವಾಗಿ ಲಕ್ವ ಬರುವ ಸಮಯದಲ್ಲಿ ಮೇಲಿನ ಲಕ್ಷಣಗಳು ಕಾಣಿಸಿಕೊಂಡು ಮತ್ತೆ ಸಹಜತೆಗೆ ಮರಳಬಹುದು. ಇದನ್ನುಅಸ್ಥಿರ ಲಕ್ವ ಎಂದು ಕರೆಯುತ್ತಾರೆ. ಹಂತದಲ್ಲಿ ತಕ್ಷಣವೇ ವೈದ್ಯರಲ್ಲಿ ತೋರಿಸಿಕೊಂಡು ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅಗತ್ಯ. ಪಾರ್ಶ್ವವಾಯುವಿಗೆ ಯಾವುದೇ ಪ್ರಥಮ ಚಿಕಿತ್ಸೆ ಇಲ್ಲ. ಕಾರಣದಿಂದಲೇ ರೋಗಿಯನ್ನು ಸಂಬಂಧಿಕರು ತಕ್ಷಣವೇ ನರರೋಗ ತಜ್ಞರ ಬಳಿ ತೋರಿಸಿಕೊಳ್ಳಬೇಕು.

ಜಾಹೀರಾತು

ಪ್ರತಿ ಕ್ಷಣವೂ ಅತೀ ಅಮೂಲ್ಯವಾಗಿದ್ದು, ಲಕ್ವ ಬಡಿದ ಬಳಿಕ ಚಿಕಿತ್ಸೆಗೆ ವಿಳಂಬವಾದಲ್ಲಿ, ಮೆದುಳಿನ ಹಾನಿಯ ಪ್ರಮಾಣ ಹೆಚ್ಚಿರುತ್ತದೆ ಲಕ್ವ ಬಂದು, ಪ್ರಥಮ ಮೂರು ಗಂಟೆ ಅತೀ ಪ್ರಾಮುಖ್ಯವಾಗಿದ್ದು. ತಕ್ಷಣವೇ ನರರೋಗ ತಜ್ಞರಲ್ಲಿ ತೋರಿಸುವುದರಲ್ಲಿಯೇ ರೋಗಿಯ ಮತ್ತು ಸಮಾಜ ಹಿತ ಅಡಗಿದೆ.

ಪಾರ್ಶ್ವವಾಯು ಮತ್ತು ಮೂಢನಂಬಿಕೆಗಳು:

ಅಜ್ಞಾನ, ಬಡತನ, ಅನಕ್ಷರತೆ ಮತ್ತು ಮೂಲಸೌಲಭ್ಯಗಳ ಕೊರತೆಗಳಿಂದಾಗಿ ಭಾರತದಂತಹ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಅನಗತ್ಯವಾಗಿ ಮಾನವ ಸಂಪನ್ಮೂಲದ ಸೋರಿಕೆಯಾಗಿ, ತಡೆಗಟ್ಟಬಹುದಾದ ರೋಗಗಳು ಮಾರಣಾಂತಿಕವಾಗಿ ಕಾಡತೊಡಗಿದೆ. ಪಾರ್ಶ್ವವಾಯು ಕೂಡಾ ಇದಕ್ಕೆ ಹೊರತಲ್ಲ. ಲಕ್ವದ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಇನ್ನೂ ಹೆಚ್ಚಿನ ಮಾಹಿತಿ ಇಲ್ಲದೆ, ಮೂಢನಂಬಿಕೆಗಳಿಗೆ ಬಲಿಯಾಗಿ, ಮುಗ್ಧಜನರು ಶಾಶ್ವತ ಅಂಗ ವೈಕಲ್ಯಕ್ಕೆ ತುತ್ತಾಗುವುದು ಬಹಳ ದೌರ್ಭಾಗ್ಯದ ವಿಚಾರ.

ಜಾಹೀರಾತು

ಪಾರ್ಶ್ವವಾಯು ಕೇವಲ ವಯಸ್ಸಾದವರಿಗೆ ಬರುತ್ತಿದೆ ಎನ್ನುವುದು ಶುದ್ಧ ತಪ್ಪು ಅಭಿಪ್ರಾಯ. ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ ಮತ್ತು ಹುಟ್ಟುವ ಮಕ್ಕಳಿಂದ ಹಿಡಿದು 90ರ ಹಲ್ಲಿಲ್ಲದ ಮುದುಕರಿಗೂ ಪಾರ್ಶ್ವವಾಯು ಬರಬಹುದು. ಅದೇ ರೀತಿ ಚಳಿಗಾಳಿಗೆ ಮೈಯೊಡ್ಡಿದಲ್ಲಿ ಲಕ್ವ ಬಡಿಯುತ್ತದೆ ಅನ್ನುವುದು ಕೂಡಾ ತಪ್ಪು ಗ್ರಹಿಕೆ. ಚಳಿಗಾಳಿಗೂ, ಪಾರ್ಶ್ವವಾಯುಗೂ ಯಾವುದೇ ಸಂಬಂಧವಿಲ್ಲ.

ಮೆದುಳಿನ ರಕ್ತನಾಳದಲ್ಲಿ ಉಂಟಾಗುವ ತೊಂದರೆಯಿಂದಾಗಿ ಲಕ್ವ ಬರುತ್ತದೆಯೇ ಹೊರತು, ಚಳಿಗಾಳಿಯಿಂದಲ್ಲ ಎಂಬ ಸತ್ಯವನ್ನು ಎಲ್ಲರೂ ಅರಿತಲ್ಲಿ ಒಳ್ಳೆಯದು. ಅದೇ ರೀತಿ ಎಲ್ಲಾ ಪಾರ್ಶ್ವವಾಯು ಪೀಡಿತರೂ ಒಂದೇ ಎಂದ ಭಾವನೆಯೂ ತಪ್ಪು. ಯಾಕೆಂದರೆ ಪಾರ್ಶ್ವವಾಯುವಿನ ತೀವ್ರತೆಯ ಪ್ರಮಾಣ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಬೇರೆ ಬೇರೆ ಕಾರಣಗಳಿಂದ ಲಕ್ವ ಬರುವ ಸಾಧ್ಯತೆ ಇದ್ದು, ತೀವ್ರತೆಯ ಪ್ರಮಾಣವೂ ಭಿನ್ನವಾಗಿರುತ್ತದೆ. ಕಾರಣದಿಂದ ಪಾರ್ಶ್ವವಾಯು ಪೀಡಿತರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುವುದು ಮತ್ತು ಚಿಕಿತ್ಸೆಯನ್ನು ನಿರ್ಧರಿಸುವುದು ಮೂರ್ಖತನದ ಪರಮಾವಧಿ.

ಕೊನೆ ಮಾತು

ಜಾಹೀರಾತು

ಸಾರ್ವಜನಿಕರು ತಿಳಿದುಕೊಂಡಿರುವಂತೆ ಪಾರ್ಶ್ವವಾಯು ಒಂದು ಖಾಯಿಲೆಯಲ್ಲ. ಇದು ಮೆದುಳಿಗೆ ರಕ್ತಸಂಚಾರ ನಿಂತು ಹೋಗಿ ನರಕೋಶಗಳಿಗೆ ಹಾನಿಯಾದಾಗ ಉಂಟಾಗುವ ತೊಂದರೆಗಳ ಸಂಕೀರ್ಣ ದೇಹಸ್ಥಿತಿ. ಹಲವಾರು ಕಾರಣಗಳಿಂದ ರೀತಿ ಪಾರ್ಶ್ವವಾಯು ಸ್ಥಿತಿ ದೇಹಕ್ಕೆ ಬರಬಹುದು. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ವಿಪರೀತ ಮಾನಸಿಕ ಒತ್ತಡ ಅತೀ ಪ್ರಾಮುಖ್ಯವಾದ ಕಾರಣವಾಗಿದ್ದು. ಪಾರ್ಶ್ವವಾಯು ತೊಂದರೆಯನ್ನು ಯಶಸ್ವಿ ಪುನಶ್ಚೇತನ ಕ್ರಿಯೆಯಿಂದ ಪರಿಣಾಮಕಾರಿಯಾಗಿ ಗುಣಪಡಿಸಬಹುದು. ಪುನಶ್ಚೇತನ ಪ್ರಕ್ರಿಯೆಗೆ ಯಾವುದೇ ರೀತಿಯ ವಯೋಮಿತಿಯ ಸಂಬಂಧ ಇರುವುದಿಲ್ಲ. ಪಾರ್ಶ್ವವಾಯು ಆಘಾತದ ನಂತರ ಎಷ್ಟು ಶೀಘ್ರವಾಗಿ ಪುನಶ್ಚೇತನ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆಯೋ, ಅಷ್ಟೇ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ರೋಗಿಯನ್ನು ಸಹಜ ಸ್ಥಿತಿಗೆ ತರಬಹುದು ಎಂಬ ಸತ್ಯವನ್ನು ರೋಗಿಯ ಸಂಬಂಧಿಕರು ಮತ್ತು ಸಮಾಜ ಅರಿತಲ್ಲಿ, ಹೆಚ್ಚಿನ ಮಾನವ ಸಂಪನ್ಮೂಲದ ಸೋರಿಕೆಯನ್ನು ತಡೆಗಟ್ಟಬಹುದು. ಅದರಲ್ಲಿಯೇ ನಮ್ಮೆಲ್ಲರ ಮತ್ತು ಸಮಾಜದ ಹಿತ ಅಡಗಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "PARALYSIS ನಿರ್ಲಕ್ಷ್ಯ ಮಾಡೋ ವಿಷ್ಯ ಅಲ್ಲ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*