ನಿಂತಿದ್ದ ಬಸ್ಸುಗಳಿಗೆ ಹೊಯ್ಗೆ ಟಿಪ್ಪರ್ ಡಿಕ್ಕಿ

ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಪೆಟ್ರೋಲ್ ಪಂಪ್ ನಲ್ಲಿ ನಿಂತಿದ್ದ ನಾಲ್ಕು ಬಸ್ಸುಗಳಿಗೆ ಭಾನುವಾರ ಬೆಳಗ್ಗೆ ಸುಮಾರು 5.45ರ ಬಳಿಕ ವೇಗವಾಗಿ ಬರುತ್ತಿದ್ದ ಮರಳು ಸಾಗಾಟದ ಟಿಪ್ಪರ್ ಡಿಕ್ಕಿ ಹೊಡೆದು ಆತಂಕಕ್ಕೆ ಕಾರಣವಾಯಿತು.

ಈ ಪೆಟ್ರೋಲ್ ಪಂಪ್ ಪಕ್ಕದಲ್ಲಿ ಬಸ್ಸುಗಳು ರಾತ್ರಿ ತಂಗುತ್ತವೆ. ಪಕ್ಕದಲ್ಲೇ ಪೆಟ್ರೋಲ್ ತುಂಬುವ ಜಾಗವಿದೆ. ಒಂದು ವೇಳೆ ಟಿಪ್ಪರ್ ಅಲ್ಲೇನಾದರೂ ಬಂದು ನುಗ್ಗಿ ಡಿಕ್ಕಿ ಹೊಡೆದಿದ್ದರೆ ಭೀಕರ ಅನಾಹುತವೇ ಕಾದಿತ್ತು. ಸಮೀಪದಲ್ಲಿ ಹಲವಾರು ಮನೆ, ಅಂಗಡಿಗಳು ಇದ್ದು, ಅವುಗಳಿಗೆ ಅಪಾಯ ಉಂಟಾಗುತ್ತಿತ್ತು.

ಟಿಪ್ಪರ್ ತುಂಬಾ ಮರಳು ಇದ್ದು, ಅಪಘಾತದಿಂದ ರಸ್ತೆಯಲ್ಲೆಲ್ಲಾ ಮರಳು ಚೆಲ್ಲಿತ್ತು. ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾದರೂ ಬಳಿಕ ಬಂಟ್ವಾಳ ಟ್ರಾಫಿಕ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಹಜರು ಕಾರ್ಯ ಕೈಗೊಂಡರು.

 

Be the first to comment on "ನಿಂತಿದ್ದ ಬಸ್ಸುಗಳಿಗೆ ಹೊಯ್ಗೆ ಟಿಪ್ಪರ್ ಡಿಕ್ಕಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*