ಮತ್ತೆ ಯಕ್ಷವೈಭವಕ್ಕೆ ಸಜ್ಜಾದ ‘ಭ್ರಾಮರಿ ಯಕ್ಷಮಿತ್ರರು’

ಸೋಶಿಯಲ್ ಮೀಡಿಯಾ ಬಂದ ಮೇಲೆ ಯಕ್ಷಗಾನದ ಖದರ್ರೇ ಬೇರೆಯಾಗಿದೆ. ಕೆಲವೊಮ್ಮೆ ಅತಿ ಎನಿಸುವಷ್ಟು ವಾಟ್ಸಾಪ್ ಗುಂಪುಗಳು ನಮ್ಮನ್ನು ಸೇರಿಸಿದರೂ ಅಂತಿಮವಾಗಿ ಆಯ್ಕೆ ನಮ್ಮದೇ.

ಯಕ್ಷಗಾನಕ್ಕೆಂದೇ ಮೀಸಲಿರಿಸಲಾದ ಗುಂಪುಗಳು ಹಲವು. ಅವುಗಳಲ್ಲಿ ಕೆಲವು ಕಲಾವಿದರ ಅಭಿಮಾನಿಗಳ ಗುಂಪೂ ಇವೆ. ಅದೆಷ್ಟೋ ಮಂದಿ ರಂಗಸ್ಥಳದ ಎದುರು ಕಣ್ಣಾರೆ ನೋಡಲಾಗದ್ದನ್ನು ವಾಟ್ಸಾಪ್ ಗ್ರೂಪುಗಳನ್ನು ಕ್ಲಿಕ್ಕಿಸಿ ನೋಡಿ ಅನುಭವಿಸುತ್ತಾರೆ. ಸಂಪೂರ್ಣವಾಗಿ ಯಕ್ಷಗಾನಕ್ಕೆ ಸಮರ್ಪಿಸಲಾದ ಗುಂಪೊಂದು ಸಕ್ರಿಯವಾಗಿರುವುದಲ್ಲದೆ, ಸತತ ಎರಡನೇ ವರ್ಷ ಯಕ್ಷಗಾನ ಪ್ರದರ್ಶನವನ್ನೂ ಆಯೋಜಿಸಿದೆ. ವಿನಯಕೃಷ್ಣ ಕುರ್ನಾಡು ಮತ್ತು ಸತೀಶ ಮಂಜೇಶ್ವರ ಅಡ್ಮಿನ್ ಗಳಾಗಿರುವ ಯಕ್ಷಗಾನ ಗುಂಪು ಭ್ರಾಮರೀ ಯಕ್ಷಮಿತ್ರರು ಬಳಗದ ಯಶೋಗಾಥೆಯಿದು.

ಜಾಹೀರಾತು

ಏನಿದು ಬಳಗ ?

 ಗುಡ್ ಮಾರ್ನಿಂಗ್,ಗುಡ್ ನೈಟ್, ಹಾಯ್ ಹಲೋ , ಇಲ್ಲದೆ ಕೇವಲ ಯಕ್ಷಗಾನ ಕೇಂದ್ರಿತವಾಗಿರುವ  ಭ್ರಾಮರೀ ಯಕ್ಷಮಿತ್ರರು (ರಿ.) ಸಮಾನ ಮನಸ್ಕರ ವಾಟ್ಸಾಪ್ ಗುಂಪು

ಜಾಹೀರಾತು

2015 ರ ಪೆಬ್ರವರಿ ತಿಂಗಳ 16 ರಂದು ಸ್ಥಾಪಿಸಲ್ಪಟ್ಟ ಬಳಗ ಯಕ್ಷಮಿತ್ರರು..ಮುಂದೆ ಬಳಗ ಹಲವಾರು ಸದಸ್ಯರ ಸೇರ್ಪಡೆಯೊಂದಿಗೆ ವಿಸ್ತಾರವಾಗಿ ಬೆಳೆಯಿತು. ಸಮಾನ ಆಸಕ್ತಿಯ ಗೆಳೆಯರೆಲ್ಲ ಒಂದೆಡೆ ಸೇರುವಂತೆ ಮಾಡಿತು. ಬಳಗ ಬೆಳೆದಂತೆ ಯಕ್ಷಮಿತ್ರರು ಅನ್ನುವ ಹಲವಾರು ಬಳಗ ಇರುವ ಕಾರಣಕ್ಕೆ ಮೂಲ ಹೆಸರನ್ನು ಉಳಿಸಿಕೊಂಡು ಬಳಗಕ್ಕೊಂದು ಹೊಸ ಹೆಸರು ಇಡ ಬೇಕೆಂಬ ಹಂಬಲದೊಂದಿಗೆ ಬಳಗದ ಸರ್ವ ಸದಸ್ಯರ ಒಪ್ಪಿಗೆಯಂತೆ ಸದಸ್ಯ ಅಶ್ವಿತ್ ಶೆಟ್ಟಿ ತುಳುನಾಡ್ ಅವರು ಸೂಚಿಸಿದ ಭ್ರಾಮರೀ ಯಕ್ಷಮಿತ್ರರು ಹೆಸರನ್ನು ಬಳಗಕ್ಕೆ ಇಡುವುದರ ಮೂಲಕ ಯಕ್ಷಮಿತ್ರರು ಬಳಗ ಭ್ರಾಮರೀ ಯಕ್ಷಮಿತ್ರರು ಆಯಿತು.

ಯಕ್ಷವೈಭವದ ಕುರಿತು

ಬಳಗದ ಸದಸ್ಯರಲ್ಲಿ ಒಬ್ಬರಾದ ಮಹೇಶ್ ಪುತ್ತೂರು ಅವರು ಒಂದು ದಿವಸ ನಾವು ಯಾಕೆ ಯಕ್ಷಗಾನ ಸಂಘಟಿಸಬಾರದು ಎಂದು ಬಳಗದಲ್ಲಿ ಎತ್ತಿದ ಪ್ರಶ್ನೆ ಯಕ್ಷ ವೈಭವನ್ನು ಸಂಘಟಿಸುವುದಕ್ಕೆ ನಾಂದಿಯಾಯಿತು. ಬಳಗದ ಸರ್ವ ಸದಸ್ಯರ ಪ್ರೋತ್ಸಾಹ ಹಿತೈಷಿ ಕಲಾಪೋಷಕರ ಕೃಪೆ,ಕಲಾವಿದರ ಸಹಕಾರದೊಂದಿಗೆ 2016 ರ ಆಗಸ್ಟ್ 20 ರಂದು ಮಂಗಳೂರಿನ ಪುರಭವನದಲ್ಲಿ ಯಶಸ್ವಿ ಯಕ್ಷಗಾನ ಸಂಘಟಿಸುವಂತೆ ಮಾಡಿತು. ಈ ಸಂದರ್ಭ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ಅವರನ್ನು ಭ್ರಾಮರೀ ಯಕ್ಷಮಣಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಜಾಹೀರಾತು

ಈ ಬಾರಿಯ ಯಕ್ಷ ವೈಭವ ಆಗಸ್ಟ್ 19ರಂದು  ರಾತ್ರಿ ಎಂಟರಿಂದ ಮಂಗಳೂರಿನ ಪುರಭವನದಲ್ಲಿ ತೆಂಕುತ್ತಿಟ್ಟಿನ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ನಾಲ್ಕು ಪೌರಾಣಿಕ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.ಯಕ್ಷಗಾನ ಪ್ರಸಂಗಕರ್ತ,ಛಾಂದಸ್ಸ ಕವಿ , ಸವ್ಯಸಾಚಿ ಹಿಮ್ಮೇಳ ಕಲಾವಿದ ಗಣೇಶ್ ಕೊಲೆಕಾಡಿ ಅವರನ್ನು ಭ್ರಾಮರೀ ಯಕ್ಷಮಣಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಾಗೂ ಇಬ್ಬರು ರಂಗ ಸಹಾಯಕರನ್ನು ಗೌರವಿಸಲಾಗುವುದು. ಲಯಬ್ರಹ್ಮ ದಿವಾಣ ಭೀಮಭಟ, ಛಂದೋಬ್ರಹ್ಮ ಡಾ. ಎನ್.ನಾರಾಯಣ ಶೆಟ್ಟಿ ಅವರಿಂದ ಮಾರ್ಗದರ್ಶನ ಪಡೆದಿರುವ ಗಣೇಶ್ ಕೊಲೆಕಾಡಿ ಅವರಿಗೆ ಈ ಬಾರಿಯ ಗೌರವ..

ಯಕ್ಷಗಾನ ಹಾಗೂ ತಾಳಮದ್ದಳೆಗಳ ಪಾತ್ರ ನಿರ್ವಹಣೆ, ಮನೆಯಲ್ಲಿ ಧರ್ಮಾರ್ಥವಾಗಿ ನೂರಾರು ಮಕ್ಕಳಿಗೆ ಯಕ್ಷ ಬೋಧನೆ, ಅನೇಕ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ, ಅನೇಕ ಪೌರಾಣಿಕ ನಾಟಕಗಳಿಗೆ ಹಿನ್ನೆಲೆ ಹಾಡುಗಳ ರಚನೆ, ಸಾವಿರಕ್ಕೂ ಅಧಿಕ ಕಾವ್ಯಾತ್ಮಕ ಸನ್ಮಾನ ಪತ್ರ ರಚನೆ, ನಾಲ್ಕು ದಿನದಲ್ಲಿ 40 ಸನ್ಮಾನ ಪತ್ರ ರಚಿಸಿದ ಸಾಧನೆ ಮಾಡಿದ್ದಾರೆ ಗಣೇಶ್.

 ಬಳಗದ ಸದಸ್ಯರು

ಜಾಹೀರಾತು

ಬಳಗದಲ್ಲಿ 172 ಸದಸ್ಯರಿದ್ದು ವೃತ್ತಿಪರ,ಹವ್ಯಾಸಿ ಕಲಾವಿದರು, ಮಾಧ್ಯಮದ ಸಿಬಂದಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು,ಉದ್ಯಮಿಗಳು,ಕೃಷಿಕರು.ಸರಕಾರಿ,ಖಾಸಗಿ ಉದ್ಯೋಗಸ್ಥರು , ಅನಿವಾಸಿ ಭಾರತೀಯರು, ಹೊರರಾಜ್ಯದಲ್ಲಿರುವವರು. ಹೀಗೆ ಸರ್ವಧರ್ಮದ ಬಂಧುಗಳು ಇಲ್ಲಿದ್ದಾರೆ.

ಯಕ್ಷ ರಸದೌತಣ:

ಮಂಗಳೂರು ಪುರಭವನದಲ್ಲಿ .19 ರಂದು ರಾತ್ರಿ 8 ರಿಂದ ಸಭಾ ಕಾರ್ಯಕ್ರಮದಲ್ಲಿ ಭ್ರಾಮರಿ ಯಕ್ಷಮಣಿ ಪ್ರಶಸ್ತಿ ಪ್ರದಾನ, 9.30 ರಿಂದ 12.30ವರೆಗೆಭಸ್ಮಾಸುರ ಮೋಹಿನಿ ಪ್ರಫುಲ್ಲಚಂದ್ರ ನೆಲ್ಯಾಡಿ ಹಾಗೂ ಗಿರೀಶ್ ರೈ ಕಕ್ಕೆಪದವು ದ್ವಂದ್ವ ಭಾಗವತಿಕೆ, ರಾತ್ರಿ 12.30 ರಿಂದ 3.3ಸತ್ವ ಪರೀಕ್ಷೆ ಸತೀಶ್ ಶೆಟ್ಟಿ ಪಟ್ಲ ಹಾಗೂ ರವಿಚಂದ್ರ ಕನ್ನಡಿಕಟ್ಟೆ ದ್ವಂದ್ವ ಭಾಗವತಿಕೆ, 3.30 ರಿಂದ 5.30ಶ್ವೇತ ವರಾಹ ಪುತ್ತಿಗೆ ರಘುರಾಮ ಹೊಳ್ಳ ಭಾಗವತಿಕೆ, 5.30 ರಿಂದ 6.30ರಾಜಸೂಯ ಬಲಿಪ ಪ್ರಸಾದ್ ಭಟ್ ಭಾಗವತಿಕೆಯಲ್ಲಿ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಜಾಹೀರಾತು

ಬಳಗ ಬಂಟ್ವಾಳನ್ಯೂಸ್ ಗೆ ಒದಗಿಸಿದ ಕಾರ್ಯಕ್ರಮದ ಪಟ್ಟಿ ಹೀಗಿದೆ ನೋಡಿ:

?????
ಉಚಿತ ಪ್ರವೇಶ
?????

ರಾತ್ರಿ 8ರಿಂದ:

ಜಾಹೀರಾತು

ganesh kolekadi

ಯಕ್ಷಗಾನ ಪ್ರಸಂಗಕರ್ತ,ಛಾಂದಸ್ಸ ಕವಿ ಗಣೇಶ್ ಕೊಲೆಕಾಡಿಅವರಿಗೆ ಭ್ರಾಮರೀ ಯಕ್ಷಮಣಿಪ್ರಶಸ್ತಿ ಪ್ರದಾನ ಇಬ್ಬರು ಹಿರಿಯ ನೇಪಥ್ಯ ಕಲಾವಿದರಿಗೆ ಗೌರವ ಸನ್ಮಾನ ಹಾಗೂ ಯಕ್ಷ ವೈಭವ

9.30 ರಿಂದ 12.30
ಭಸ್ಮಾಸುರ ಮೋಹಿನಿ

?ಹಿಮ್ಮೇಳ

ಜಾಹೀರಾತು

?ದ್ವಂದ್ವ ಭಾಗವತಿಕೆ –  ಪ್ರಪುಲ್ಲಚಂದ್ರ ನೆಲ್ಯಾಡಿ,  ಗಿರೀಶ್ ರೈ ಕಕ್ಕೆಪದವು
?ಚೆಂಡೆ -ಮದ್ದಳೆ
ಮುರಾರಿ ಕಡಂಬಳಿತ್ತಾಯ,  ಕೃಷ್ಣ ಪ್ರಕಾಶ್ ಉಳಿತ್ತಾಯ
ಚಕ್ರತಾಳ – ರಾಜೇಂದ್ರ ಕೃಷ್ಣ

?ಮುಮ್ಮೇಳ

ಈಶ್ವರ ? ಉಜಿರೆ ಅಶೋಕ್ ಭಟ್
ಪಾರ್ವತಿ? ಅಂಬಾಪ್ರಸಾದ್ ಪಾತಾಳ
ಭಸ್ಮಾಸುರ ? ರಾಧಾಕೃಷ್ಣ ನಾವಡ ಮಧೂರು

ಜಾಹೀರಾತು

ಮೋಹಿನಿ ? ಅಕ್ಷಯ್ ಮಾರ್ನಾಡ್
ವಿಷ್ಣು? ವಿಷ್ಣುಶರ್ಮ ವಾಟೆಪಡ್ಪು

12.30 ರಿಂದ 3.30
ಸತ್ವ ಪರೀಕ್ಷೆ

?ಹಿಮ್ಮೇಳ

ಜಾಹೀರಾತು

?ದ್ವಂದ್ವ ಭಾಗವತಿಕೆ

? ಸತೀಶ್ ಶೆಟ್ಟಿ ಪಟ್ಲ
? ರವಿಚಂದ್ರ ಕನ್ನಡಿಕಟ್ಟೆ
?ಚೆಂಡೆ – ಮದ್ದಳೆ
? ಗುರು ಪ್ರಸಾದ್ ಬೊಳಿಂಜಡ್ಕ
? ಚೈತನ್ಯಕೃಷ್ಣ ಪದ್ಯಾಣ

?ಮುಮ್ಮೇಳ

ಜಾಹೀರಾತು

ಶ್ರೀಕೃಷ್ಣ ? ವಾಸುದೇವ ರಂಗಭಟ್
ಸುಭದ್ರೆ ? ದೀಪಕ್ ರಾವ್ ಪೇಜಾವರ
ರುಕ್ಮಿಣಿ ? ಪ್ರಶಾಂತ್ ಶೆಟ್ಟಿ ನೆಲ್ಯಾಡಿ
ಅರ್ಜುನ ? ವಿಶ್ವೇಶ್ವರ ಭಟ್ ಸುಣ್ಣಂಬಳ
ಮಕರಂದ ? ಅರುಣ್ ಜಾರ್ಕಳ
ದಾರುಕ ? ಸೀತಾರಾಮ್ ಕುಮಾರ್ ಕಟೀಲು
ಅಭಿಮನ್ಯು ? ಲೋಕೇಶ್ ಮುಚ್ಚೂರು
ಭೀಮ ? ಸದಾಶಿವ ಶೆಟ್ಟಿಗಾರ್
ಬಲರಾಮ ? ಜಯಾನಂದ ಸಂಪಾಜೆ
ಈಶ್ವರ ☀ ಅರುಣ್ ಕೋಟ್ಯಾನ್
ಪಾರ್ವತಿ ☀ ಸಂದೀಪ್ ಕಾವೂರು

3.30 ರಿಂದ 5.30

ಶ್ವೇತವರಾಹ

ಜಾಹೀರಾತು

?ಹಿಮ್ಮೇಳ

ಭಾಗವತರು

? ಪುತ್ತಿಗೆ ರಘುರಾಮ ಹೊಳ್ಳ
? ಚೆಂಡೆ-ಮದ್ದಳೆ
? ದೇಲಂತಮಜಲು ಸುಬ್ರಹ್ಮಣ್ಯ ಭಟ್
? ಗಣೇಶ್ ರಾವ್ ಅಡೂರು

ಜಾಹೀರಾತು

?ಮುಮ್ಮೇಳ

ಹಿರಣ್ಯಾಕ್ಷ ? ಸುಬ್ರಾಯ ಹೊಳ್ಳ
ದೇವೇಂದ್ರ ? ದಿನೇಶ್ ಶೆಟ್ಟಿ ಕಾವಳಕಟ್ಟೆ
ಅಗ್ನಿ ? ಲೋಕೇಶ್ ಮುಚ್ಚೂರು
ವಾಯು ? ರಾಜೇಶ್ ಪುತ್ತಿಗೆ
ನಾರದ ? ಡಿ ಮಾಧವ ಬಂಗೇರ
ಭೂದೇವಿ? ರಕ್ಷಿತ್ ಶೆಟ್ಟಿ ಪಡ್ರೆ
ವರಾಹ ? ಸತೀಶ್ ನೈನಾಡ್

5.30 ರಿಂದ 6.30

ಜಾಹೀರಾತು

ರಾಜಸೂಯ

?ಹಿಮ್ಮೇಳ

ಭಾಗವತರು

ಜಾಹೀರಾತು

? ಬಲಿಪ ಪ್ರಸಾದ್ ಭಟ್
?ಚೆಂಡೆ -ಮದ್ದಳೆ
? ದೇಲಂತಮಜಲು ಸುಬ್ರಹಮಣ್ಯ ಭಟ್
? ಗಣೇಶ್ ಭಟ್ ನೆಕ್ಕರಮೂಲೆ

?ಮುಮ್ಮೇಳ
ಶಿಶುಪಾಲ ? ಜಗದಾಭಿರಾಮ ಪಡುಬಿದ್ರೆ
ದಂತವಕ್ರ ? ಗಣೇಶ್ ಚಂದ್ರಮಂಡಲ
ಸೋಮದತ್ತ? ರಾಹುಲ್ ಶೆಟ್ಟಿ ಕುಡ್ಲ
ಭಗದತ್ತ ? ವೆಂಕಟೇಶ್ ಕಲ್ಲುಗುಂಡಿ

ಧರ್ಮರಾಯ? ಕಿಶೋರ್ ಕೊಮ್ಮೆ
ಭೀಷ್ಮ ? ವಾದಿರಾಜ ಕಲ್ಲೂರಾಯ
ಸಹದೇವ ? ರಾಜೇಶ್ ಪುತ್ತಿಗೆ

ಜಾಹೀರಾತು

ಭೀಮ ? ಬಾಲಕೃಷ್ಣ ಮಿಜಾರು
ಕೃಷ್ಣ ? ಶಶಿಧರ ಕನ್ಯಾನ

?ಸಂಯೋಜನೆ

? ಡಿ ಮಾಧವ ಬಂಗೇರ ಕೊಳತ್ತಮಜಲು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮತ್ತೆ ಯಕ್ಷವೈಭವಕ್ಕೆ ಸಜ್ಜಾದ ‘ಭ್ರಾಮರಿ ಯಕ್ಷಮಿತ್ರರು’"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*