ಶೂಟಿಂಗ್ ಗೆ ಹೋದಾಗಲೇ ಗೊತ್ತಾಯ್ತು ಇದು ಬೋಳು ತಲೆಯ ಕತೆ!!

ಒಂದು ಮೊಟ್ಟೆಯ ಕಥೆಯ ಇ ಮೇಡಂ ಅಮೃತಾ ನಾಯಕ್ ಹೇಳೋದು ಹೀಗೆ

  • ಅನಿತಾ ಬನಾರಿ

ಅಮೃತಾ ನಾಯಕ್

ಮುದ್ದು ಮುಖದ ಈ ಕರಾವಳಿಯ ಚೆಲುವೆಯ ಹೆಸರು ಅಮೃತಾ ನಾಯಕ್.  ಜನರ ಮನ ಸೆಳೆದಿರುವ ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ಎಕನಾಮಿಕ್ಸ್ ಲೆಕ್ಚರರ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡವರು ಅಮೃತಾ..

ಜಾಹೀರಾತು

ಒಂದು ಮೊಟ್ಟೆಯ ಕಥೆಯಲ್ಲಿ ಇ- ಮೇಡಂ ಎಂದೇ ಕರೆಸಿಕೊಳ್ಳುವ ಅಮೃತಾ ಮೊದಲ ಚಿತ್ರದಲ್ಲಿಯೇ ನನಗೆ ಒಂದು ಒಳ್ಳೆಯ ಉತ್ತಮ ತಂಡ ಸಿಕ್ಕಿದೆ. ಆದುದರಿಂದ ಯಾವುದೇ ಭಯವಿಲ್ಲದೇ ನಟಿಸಲು ಸಾಧ್ಯವಾಯಿತು’’ ಎನ್ನುತ್ತಾರೆ. ಅಮೃತಾಗೆ ಇದು ಬೋಳು ತಲೆಯ ಕಥೆ ಎಂದು ಗೊತ್ತಾದದ್ದು ಶೂಟಿಂಗ್ ಗೆ ಹೋದಾಗಲೇ ಅಂತೆ.

ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು .  ಯಶೋಧೆ ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ್ದರು. ಆದರೂ ಸಿನಿಮಾದಲ್ಲಿ ನಟಿಸಬೇಕೆಂಬುದೇ ಅವರ ಬಾಲ್ಯದ ಕನಸು. ತನ್ನ ಕನಸು ಇಷ್ಟು ಬೇಗ ನನಸಾಗುತ್ತದೆ ಎಂದು ಅಂದುಕೊಂಡಿರಲಿಲ್ಲ ಎನ್ನುವ ಅಮೃತಾ ಸ್ನೇಹಿತರ ಒತ್ತಾಯದ ಮೇರೆಗೆ ಸಿನಿಮಾದ ಆಡಿಶನ್ ನಲ್ಲಿ ಭಾಗವಹಿಸಿದ್ದರು. ಅದೃಷ್ಟ ಎಂಬಂತೆ ಸೆಲೆಕ್ಟ್ ಆದರು.  ನೀವು ಎಕನಾಮಿಕ್ಸ್ ಲೆಕ್ಚರರ್ ಪಾತ್ರದಲ್ಲಿ ನಟಿಸಬೇಕು ಎಂದಾಗ ಅಮೃತಾರಿಗೆ ಒಂದು ಕ್ಷಣ ಭಯವಾಗಿತ್ತು. ತಾನು ಈ ಪಾತ್ರವನ್ನು ನಿರ್ವಹಿಸಬಲ್ಲೆನಾ ಎಂಬ ಆತಂಕ ಅಮೃತಾರಿಗಿತ್ತು. ಆದರೆ ಆಮೇಲೆ ಎಲ್ಲಾ ಸರಿ ಆಯಿತು ಎಂದು ನಗುತ್ತಾ ಹೇಳುತ್ತಾರೆ ಕುಡ್ಲದ ಕುವರಿ.

ಇದೀಗ ಒಂದೆರಡು ಸಿನಿಮಾ ಅವಕಾಶಗಳು ಅಮೃತಾರನ್ನು ಅರಸಿ ಬಂದಿದ್ದು ಮುಂದೆ ತನ್ನಿಚ್ಛೆಯ ನಟನಾ ಕ್ಷೇತ್ರದಲ್ಲಿ ಮುಂದುವರಿಯುವ ಬಯಕೆ. ಅಮೃತಾ ಬಣ್ಣದ ಲೋಕದ ಜರ್ನಿಗೆ ಆಲ್ ದಿ ಬೆಸ್ಟ್.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಶೂಟಿಂಗ್ ಗೆ ಹೋದಾಗಲೇ ಗೊತ್ತಾಯ್ತು ಇದು ಬೋಳು ತಲೆಯ ಕತೆ!!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*